ರಾಯಚೂರು: ದೇವಸ್ಥಾನಗಳಲ್ಲಿನ ದೇವರ ಹುಂಡಿಗಳಿಗೆ ಹಣ ಹಾಕುವುದು ದಾನವಲ್ಲ. ಅದು ಪಾಪದ ಪ್ರಾಯಶ್ಚಿತ್ತದ ಒಂದು ಮುಖವಾಗಿದೆ. ದೇವರ ಹುಂಡಿಗೆ ಹಣ ಹಾಕೋದು ಅಸಹ್ಯಕರವಾದದ್ದು ಎಂಬುದಾಗಿ ಸಾಹಿತಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವರ ಹುಂಡಿಗೆ ಹಣ ಹಾಕುವುದು ಪಾಪವನ್ನ ರಿನಿವಲ್ ಮಾಡಿದಹಾಗೆ ಆಗುತ್ತದೆ. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿ ದ್ದೀನಿ, ಇಷ್ಟು ಜನರನ್ನ ಹಾಳು ಮಾಡಿದ್ದೀನಿ. ದಯವಿಟ್ಟು ಇದನ್ನ ಕ್ಷಮಿಸಿ ಎಂದಂತೆ. ಹೊಸದಾಗಿ ಪಾಪ ಮಾಡಲಿಕ್ಕೆ ಅವಕಾಶ ಮಾಡಿಕೊಡು ಅನ್ನುವುದು ಆಗಿದೆ ಎಂದು […]