ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಕಚ್‌ನ ಅಂಜಾರ್ ಪಟ್ಟಣದಲ್ಲಿನ ‘ವೀರ್ ಬಾಲಕ ಸ್ಮಾರಕ’ವನ್ನು ಉದ್ಘಾಟಿಸಲಿದ್ದಾರೆ. ಜನವರಿ 26, 2001 ರಂದು, ಗುಜರಾತ್‌ನಲ್ಲಿ ಭೂಕಂಪನದ ಸಮಯದಲ್ಲಿ, 185 ಶಾಲಾ ಮಕ್ಕಳು ಮತ್ತು 20 ಶಿಕ್ಷಕರು ಕಚ್‌ನ ಅಂಜಾರ್ ಪಟ್ಟಣದಲ್ಲಿ ರ್ಯಾಲಿಯಲ್ಲಿ ಭಾಗವಹಿಸು ತ್ತಿದ್ದಾಗ ಹತ್ತಿರದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಮಾಧಿ ಯಾದರು. ಈ ಘಟನೆಯ ದುರಂತವು ಪ್ರಪಂಚದಾದ್ಯಂತ ಸುದ್ದಿಯಾಗಿತ್ತು. ಇವರ ಸ್ಮರಣಾರ್ಥ ಗುಜರಾತ್‌ನ ಅಂದಿನ ಸಿಎಂ ನರೇಂದ್ರ ಮೋದಿ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ್ದರು. ಈಗ, ಈ ಸ್ಮಾರಕವು […]