ಲಖನೌ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಪಾತಕಿ ವಿಕಾಸ್ ದುಬೆ ಪೊಲೀಸ್ ಎನ್ಕೌಂಟರ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖೆ ನಡೆಸುತ್ತಿರುವ ತ್ರಿಸದಸ್ಯರ ತನಿಖಾ ಆಯೋಗ, ಉತ್ತರ ಪ್ರದೇಶದ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ. ಲಭ್ಯವಾದ ಸಾಕ್ಷ್ಯಗಳು ವಿಕಾಸ್ ದುಬೆಯ ವಿರುದ್ಧ ನಡೆದ ಎನ್ಕೌಂಟರ್ ಅನ್ನು ಬೆಂಬಲಿಸುತ್ತಿವೆಯೇ ಹೊರತು, ವಿರೋಧಿಸುತ್ತಿಲ್ಲ. ಹಾಗಾಗಿ ಪೊಲೀಸರನ್ನು ಖುಲಾಸೆಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ. ನಕಲಿ ಎನ್ಕೌಂಟರ್’ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎಸ್. […]