ಡಾ.ಮಾನಾಸ ಕೀಳಂಬಿ ಇನ್ನೇನು ನವರಾತ್ರಿ ಆರಂಭವಾಗುತ್ತಿದೆ. ಹಬ್ಬಗಳೆಂದರೆ ಹೆಣ್ಣುಮಕ್ಕಳಿಗೆ ಸಂಭ್ರಮ. ಈ ಸಮಯದಲ್ಲಿ ಶಾಪಿಂಗ್ ಜೋರು. ಸದ್ಯ ವೈರಸ್ ಸೋಂಕಿನ ಸಾಧ್ಯತೆಯಿಂದಾಗಿ ಮಾರುಕಟ್ಟೆಗೆ ಹೋಗಲು ಭಯವಿದೆ. ಆದರೆ, ಮಿತಿಯೇ ಇಲ್ಲದ ಆನ್ಲೈನ್ ಮಾರುಕಟ್ಟೆ, ಮನೆಯೊಳಗೆ ಲಗ್ಗೆೆಯಿಟ್ಟಿದೆ. ಮೊಬೈಲಿನೊಳಗೇ ಅಂಗಡಿ ತೆರೆದು, ರಿಯಾಯಿತಿಗಳನ್ನು ಘೋಷಿಸಿ, ಅಗತ್ಯವಿರುವ, ಇಲ್ಲದಿರುವ ವಸ್ತುಗಳನ್ನೆಲ್ಲಾ ಖರೀದಿಸುವಂತೆ ಆಮಿಷ ಒಡ್ಡುತ್ತಿದೆ. ಇತ್ತೀಚಿನ ಒಲವಿನಂತೆ ಅರಿಸಿನ- ಕುಂಕುಮಗಳ ಜೊತೆಗೆ ನೀಡುವ ಗಿಫ್ಟ್ ಐಟಂಗಳು ಕಣ್ಣು ಕುಕ್ಕುತ್ತಾ, ಹೆಂಗೆಳೆಯರ ಶಾಪಿಂಗಿಗೆ ಬಣ್ಣತುಂಬುತ್ತಿವೆ. ಪರ್ಸುಗಳು, ಬ್ಯಾಗುಗಳು, ವಿವಿಧ ಆಕಾರದ ಡಬ್ಬಿಗಳು, […]