ಬೆಂಗಳೂರು: ಕ್ರಿಕೆಟ್ ಮೈದಾನಕ್ಕೆ ಹಸುಗಳು ನುಗ್ಗಿ ಪಿಚ್ ಹಾಳು ಮಾಡಿದ ಕಾರಣ ಪಂದ್ಯ ಕ್ಯಾನ್ಸಲ್ ಆದ ಪ್ರಸಂಗ ವೆಸ್ಟ್ ಇಂಡೀಸ್ನಲ್ಲಿ ನಡೆದಿದೆ. ಟ್ರಿನಿಡಾಡ್ ಆಯಂಡ್ ಟೊಬಾಗೊ ಮತ್ತು ಗಯಾನಾ ತಂಡಗಳ ನಡುವಿನ ವೆಸ್ಟ್ ಇಂಡೀಸ್ ದೇಶೀಯ ಕ್ರಿಕೆಟ್ ಚಾಂಪಿಯನ್ಶಿಪ್ ಪಂದ್ಯದ ವೇಳೆ ಹಸುಗಳು ಕ್ರಿಕೆಟ್ ಮೈದಾನದ ಒಂದು ಭಾಗವನ್ನು ಹಾನಿಗೊಳಿಸಿದ್ದವು. ಹೀಗಾಗಿ ಒಂದು ದಿನದ ಆಟವನ್ನು ರದ್ದುಪಡಿಸಿದರು. ಕೊನಾರಿಯ ಕೊನಾರಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ತಂಡ ಗಯಾನಾ […]