ಜಗತ್ತಿನಲ್ಲಿ ಅತ್ಯಂತ ನಿಧಾನವಾಗಿ ನಡೆಯುವ (Slowest Animals) ಪ್ರಾಣಿಗಳು ಇವೆ. ಅವುಗಳಿಗೆ ಕನಿಷ್ಠ ಒಂದು ಕಿ.ಮೀ. ಪ್ರಯಾಣಿಸಲು ಹಲವಾರು ದಿನಗಳೇ ಬೇಕಾಗುತ್ತದೆ. ಅಂತಹ ಪ್ರಾಣಿಗಳಲ್ಲಿ ಈ ಐದು ಪ್ರಾಣಿಗಳು ಗಂಟೆಗೆ 0.3 ಕಿ.ಮೀ. ನಡೆಯುವುದೇ ಬಹು ಕಷ್ಟದಲ್ಲಿ. ದೈತ್ಯ ಆಮೆಗಳು ಗಂಟೆಗೆ 0.3 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಸಮುದ್ರದಲ್ಲಿರುವ ನಕ್ಷತ್ರ ಮೀನಿಗೆ ನಿಮಿಷಕ್ಕೆ ಕೆಲವು ಸೆಂಟಿ ಮೀಟರ್ ಗಳಷ್ಟು ದೂರಕ್ಕೆ ಮಾತ್ರ ಚಲಿಸಲು ಸಾಧ್ಯವಾಗುತ್ತದೆ. ಇನ್ನು ಬಸವನ ಹುಳ ಗಂಟೆಗೆ ಸುಮಾರು 0.03 ಕಿ.ಮೀ., 3 ಕಾಲ್ಬೆರಳುಗಳನ್ನು ಹೊಂದಿರುವ ಹಿಮ ಕರಡಿಯು ಗಂಟೆಗೆ 0.24 ಕಿ.ಮೀ. ಮಾತ್ರ ಚಲಿಸುತ್ತದೆ.