ವಿಶ್ವಾದ್ಯಂತ ಇಂದಿಗೂ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆ ನಾವು ಪೋಲು ಮಾಡುತ್ತಿರುವ ಆಹಾರದ ಪ್ರಮಾಣವೂ ಅತ್ಯಧಿಕವಾಗುತ್ತಿದೆ. ಅಕ್ಟೋಬರ್ 16 ಅನ್ನು ವಿಶ್ವದಾದ್ಯಂತ ಆಹಾರ ದಿನವಾಗಿ (World Food Day 2024) ಆಚರಿಸಲಾಗುತ್ತಿದೆ. ಹಸಿವಿನ ಜಾಗತಿಕ ಸಮಸ್ಯೆ ಮತ್ತು ಇದಕ್ಕಾಗಿ ಕ್ರಮದ ತುರ್ತು ಅಗತ್ಯವನ್ನು ಇದು ಸಾರುತ್ತದೆ.