ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರರಿದ್ದಾರೆ. ಹೈದರಾಬಾದ್: ಪ್ರತಿ ವರ್ಷ ಡಿ.21 ರಂದು ವಿಶ್ವ ಬ್ಯಾಸ್ಕೆಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಯ ಅಭಿವೃದ್ಧಿ ಹಾಗೂ ಆಟವನ್ನ ಗೌರವಿಸುವ ಭಾಗವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಾಪಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ಕ್ಷೇತ್ರಗಳಲ್ಲಿ ಬ್ಯಾಸ್ಕೆಟ್‌ಬಾಲ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಸಹಯೋಗ, ದೈಹಿಕ ಚಟುವಟಿಕೆ ಮತ್ತು ಪರಸ್ಪರ ಅವಲಂಬನೆಯ ಆಧಾರದ ಮೇಲೆ ನಡೆಯುವ ಕ್ರೀಡೆಯಾಗಿದೆ. ಬ್ಯಾಸ್ಕೆಟ್‌ಬಾಲ್ ಇತರ ಕ್ರೀಡೆಗಳಂತೆ ಒಂದು ಸೌಹಾರ್ದಯುತ ಆಟವಾಗಿದೆ. ಗಡಿಗಳು, ಸಂಸ್ಕೃತಿ […]