ನವದೆಹಲಿ: ಕೇಂದ್ರ ಸರಕಾರವು ಕೇರಳದ ಐದು ಮಂದಿ ಆರೆಸ್ಸೆಸ್ ನಾಯಕರಿಗಿರಬಹು ದಾದ ಸಂಭಾವ್ಯ ಬೆದರಿಕೆಗಳ ಹಿನ್ನೆಲೆ ಯಲ್ಲಿ ಅವರಿಗೆ ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ. ನಿಷೇಧಕ್ಕೊಳಗಾದ ಪಿಎಫ್ಐ ಕಚೇರಿಗಳ ಮೇಲೆ ನಡೆದ ದಾಳಿ ವೇಳೆ ದೊರೆತ ದಾಖಲೆ ಗಳ ಆಧಾರದಲ್ಲಿ ಈ ಐದು ಮಂದಿ ನಾಯಕರ ಮೇಲೆ ಪಿಎಫ್ಐ ಕಣ್ಣಿಟ್ಟಿತ್ತು ಎಂಬ ಮಾಹಿತಿಯ ಆಧಾರದಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ. ನಾಯಕರಿಗೆ ಭದ್ರತೆ ಒದಗಿಸುವ ಕೆಲಸವನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಐಪಿ ಭದ್ರತಾ ಘಟಕಕ್ಕೆ ವಹಿಸಲಾಗಿದೆ. […]
ನವದೆಹಲಿ: ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಿಆರ್ ಪಿಎಫ್ ಕವರ್ ಪ್ಯಾನ್ ಇಂಡಿಯಾ ದೊಂದಿಗೆ ‘ವೈ’ ಕ್ಯಾಟಗರಿ ಭದ್ರತೆ ನೀಡಲಾಗಿದೆ ಎಂದು...