#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಆಲಿಘಡ್‌ ವಿವಿ ಹಾಸ್ಟೆಲ್‌ ನೋಟಿಸ್‌ನಲ್ಲಿ ಬೀಫ್‌ ಬಿರಿಯಾನಿ ಉಲ್ಲೇಖ: ಆಡಳಿತ ಮಂಡಳಿ ಹೇಳಿದ್ದೇನು?

ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತೆ ವಿವಾದಕ್ಕೆ ಸಿಲುಕಿದೆ. ಸುಲೇಮಾನ್ ಹಾಸ್ಟೆಲ್‌ನಲ್ಲಿ ಹಾಕಿದ್ದ ನೋಟಿಸ್‌ನಲ್ಲಿ 'ಬೀಫ್ ಬಿರಿಯಾನಿ' ಅಂತ ಬರೆದಿದ್ದರಿಂದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿವೆ. ಆಡಳಿತ ಮಂಡಳಿ ಟೈಪಿಂಗ್‌ ಮಿಸ್ಟೇಕ್‌ ಎಂದು ಹೇಳುವ ಮೂಲಕ ನುಣುಚಿಕೊಂಡಿದೆ.

ಆಲಿಘಡ್‌ ವಿವಿ ಹಾಸ್ಟೆಲ್‌ನಲ್ಲಿ ಬೀಫ್‌ ಬಿರಿಯಾನಿ ವಿವಾದ

Viral News

Profile Deekshith Nair Feb 9, 2025 6:32 PM

ಲಖನೌ: ಉತ್ತರ ಪ್ರದೇಶದ ಆಲಿಘಡ್(Aligarh) ಮುಸ್ಲಿಂ ವಿಶ್ವವಿದ್ಯಾಲಯ (Muslim University) ಮತ್ತೆ ವಿವಾದಕ್ಕೆ ಸಿಲುಕಿದೆ. ಸುಲೇಮಾನ್ ಹಾಸ್ಟೆಲ್‌ನಲ್ಲಿ ಹಾಕಿದ್ದ ನೋಟಿಸ್‌ನಲ್ಲಿ 'ಬೀಫ್ ಬಿರಿಯಾನಿ' (Beef Biriyani) ಅಂತ ಬರೆದಿದ್ದರಿಂದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ. ಆಡಳಿತ ಮಂಡಳಿ ಟೈಪಿಂಗ್‌ ಮಿಸ್ಟೇಕ್‌ ಎಂದು ಹೇಳುವ ಮೂಲಕ ನುಣುಚಿಕೊಂಡಿದೆ. ಈ ಸುದ್ದಿ(Viral News) ಇದೀಗ ಸಾಕಷ್ಟು ವೈರಲ್‌ ಆಗಿದೆ. ನೋಟಿಸ್ ವೈರಲ್ ಆದ ನಂತರ ಎಎಂಯು ಆಡಳಿತ ಮಂಡಳಿ ಟೈಪಿಂಗ್ ತಪ್ಪಿನಿಂದ ಈ ರೀತಿ ಆಗಿದೆ ಎಂದು ಸ್ಪಷ್ಟನೆ ನೀಡಿದೆ.

ಕಳೆದ ತಿಂಗಳಷ್ಟೇ ಆಲಿಘಡ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಬಾಂಗ್ಲಾ ಮೂಲದ ವಿದ್ಯಾರ್ಥಿಗಳು ಹಿಂದೂ ದೇವತೆಗಳು ಮತ್ತು ಇಲ್ಲಿನ ಹೆಣ್ಣು ಮಕ್ಕಳನ್ನು ಅವಮಾನಿಸಿ ಭಾರೀ ಕೋಲಾಹಲವನ್ನು ಹುಟ್ಟು ಹಾಕಿದ್ದರು. ಆ ವಿವಾದದ ಕಿಡಿ ಆರುವ ಮುನ್ನವೇ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ಯೂನಿವರ್ಸಿಟಿಯ ಸುಲೇಮಾನ್‌ ಹಾಸ್ಟೆಲ್‌ನ ನೋಟಿಸ್‌ನಲ್ಲಿ ʼಬೀಫ್‌ ಬಿರಿಯಾನಿʼ ಎಂದು ಬರೆಯುವ ಮೂಲಕ ಹಿಂದೂ ವಿದ್ಯಾರ್ಥಿಗಳನ್ನು ಕೆರಳಿಸಿದ್ದಾರೆ.



ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತನಿಖೆ ಆರಂಭಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಹಿಂದೂ ಸಂಘಟನೆಯ ಪ್ರತಿಭಟನಾಕಾರರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.‌

ಈ ಸುದ್ದಿಯನ್ನೂ ಓದಿ:Bangladesh Unrest: ಬಾಂಗ್ಲಾದಲ್ಲಿ ಮತ್ತೆ ಕಿಡಿ ಹೊತ್ತಿಸಿದ ಶೇಖ್‌ ಹಸೀನಾ ಭಾಷಣ; ಉದ್ರಿಕ್ತರಿಂದ ಮುಜಿಬುರ್ ರೆಹಮಾನ್ ನಿವಾಸ ಧ್ವಂಸ

ಬಿಜೆಪಿಯುವ ಮೋರ್ಚಾ ಮಹಾನಗರ ಕಾರ್ಯದರ್ಶಿ ಮತ್ತು ಇತರ ಹಿಂದೂ ಸಂಘಟನೆಗಳು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ AMU ಹಳೆಯ ವಿದ್ಯಾರ್ಥಿ ನಿಶಿತ್ ಶರ್ಮಾ ವಿಶ್ವವಿದ್ಯಾಲಯವು ಈ ವಿಷಯವನ್ನು ನಿರ್ವಹಿಸಿದ ರೀತಿಯನ್ನು ಟೀಕಿಸಿದ್ದಾರೆ. "ಇದರಲ್ಲಿ ಆಡಳಿತ ಮಂಡಳಿಯ ಪಾತ್ರ ನಾಚಿಕೆಗೇಡಿನದು. ಸರ್ ಶಾ ಸುಲೈಮಾನ್ ಹಾಲ್‌ನಲ್ಲಿ ಚಿಕನ್ ಬಿರಿಯಾನಿಯ ಬದಲಿಗೆ ಗೋಮಾಂಸ ಬಿರಿಯಾನಿ ನೀಡಲಾಗುವುದು ಎಂದು ತಿಳಿಸುವ ಸೂಚನೆಯನ್ನು ನೀಡಿದ್ದಾರೆ. ಈ ಸೂಚನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಅದು ಹಿರಿಯ ಆಹಾರ ಸಮಿತಿ ಸದಸ್ಯರ ಜವಾಬ್ದಾರಿಯಾಗಿದೆ. ಇಂತಹ ನಡೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆ. ಇದು ಇಲ್ಲಿನ ಕೆಲವು ಮುಸ್ಲಿಂ ವಿದ್ಯಾರ್ಥಿಗಳದ್ದೇ ದುಷ್ಕೃತ್ಯ ಎಂದು ಶರ್ಮಾ ಆರೋಪಿಸಿದ್ದಾರೆ.