ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಲೂನಿನಂತೆ ಊದಿಕೊಂಡ ಈಕೆಯ ಹೊಟ್ಟೆಯಲ್ಲಿದ್ದ ಮಕ್ಕಳೆಷ್ಟು ಗೊತ್ತಾ? ವಿಡಿಯೊ ನೋಡಿದ್ರೆ ಶಾಕ್‌ ಆಗ್ತೀರಿ!

ಇಲ್ಲೊಬ್ಬ ತಾಯಿಯ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳು ಬೆಳೆಯುತ್ತಿದ್ದವಂತೆ. ಇದರಿಂದಾಗಿ ಆಕೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದ್ದು, ನಡೆಯಲು ಕಷ್ಟಪಡುತ್ತಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಇದನ್ನು ನೋಡಿ ಶಾಕ್‌ ಆಗಿದ್ದಾರೆ.

ಬಲೂನಿನಂತೆ ಊದಿಕೊಂಡ ಈಕೆಯ ಹೊಟ್ಟೆಯಲ್ಲಿದ್ದ ಮಕ್ಕಳೆಷ್ಟು ಗೊತ್ತಾ?

Profile pavithra Jul 2, 2025 3:17 PM

ಗರ್ಭಧಾರಣೆ ಮಹಿಳೆಯ ಜೀವನದ ಪ್ರಮುಖ ಘಟ್ಟವಾಗಿದೆ. ಇಲ್ಲೊಬ್ಬ ತಾಯಿಯ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳು ಬೆಳೆಯುತ್ತಿದ್ದಾವೆ. ಇದರಿಂದ ಆಕೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದ್ದು, ಇದರಿಂದ ಆಕೆಗೆ ನಡೆಯಲು, ಕುಳಿತುಕೊಳ್ಳಲು ತುಂಬಾ ಕಷ್ಟಪಡುವಂತಾಗಿದೆ. ಆಕೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರು ಬೆಚ್ಚಿಬೀಳುವಂತೆ ಮಾಡಿದೆ. ಈ ವಿಡಿಯೊ ಈಗಾಗಲೇ ಲಕ್ಷಾಂತರ ವ್ಯೂವ್ಸ್ ಗಳಿಸಿದೆ.

ವೈರಲ್ ಆದ ವಿಡಿಯೊದಲ್ಲಿ, ನಾಲ್ಕು ಶಿಶುಗಳನ್ನು ಹೊತ್ತು ಆಕೆ ನಡೆಯಲು ಕಷ್ಟಪಡುವ ದೃಶ್ಯ ಸೆರೆಯಾಗಿದೆ. ಇನ್ನು ತನ್ನ ಹೊಟ್ಟೆಯಲ್ಲಿ ನಾಲ್ಕು ಮಕ್ಕಳು ಇರುವುದನ್ನು ತಿಳಿದು ಮಹಿಳೆ ಕೂಡ ಶಾಕ್‌ ಆಗಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...

ಅಮೇರಿಕನ್ ಪ್ರೆಗ್ನೆನ್ಸಿ ಅಸೋಸಿಯೇಷನ್ ​​ಪ್ರಕಾರ, ನೈಸರ್ಗಿಕವಾಗಿ ಸಂಭವಿಸುವ ಗರ್ಭಧಾರಣೆಯಲ್ಲಿ ನಾಲ್ಕು ಮಕ್ಕಳು ಬೆಳೆಯುವ ಸಾಧ್ಯತೆಗಳು ಅಪರೂಪ ಮತ್ತು ಆಶ್ಚರ್ಯಕರವಾಗಿದೆ ಎನ್ನಲಾಗಿದೆ. ಸರಿಸುಮಾರು 7 ಕೋಟಿ ಜನರಲ್ಲಿ ಒಬ್ಬರು ಈ ರೀತಿ ಗರ್ಭ ಧರಿಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಗರ್ಭಧಾರಣೆಯು ತಾಯಿ ಮತ್ತು ಹುಟ್ಟಲಿರುವ ಮಕ್ಕಳು ಇಬ್ಬರ ಆರೋಗ್ಯದ ಮೇಲೂ ಅಪಾಯಗಳನ್ನುಂಟುಮಾಡುತ್ತದೆ. ಅಕಾಲಿಕ ಹೆರಿಗೆ, ಸರಿಯಾಗಿ ಬೆಳೆವಣಿಗೆಯಾಗದ ಅಂಗಗಳು ಮತ್ತು ಕಡಿಮೆ ಜನನ ತೂಕದಂತಹ ಸಮಸ್ಯೆಗಳು ಕಾಡುತ್ತವೆ. ಇಂತಹ ಗರ್ಭಧಾರಣೆಯಲ್ಲಿ ತಾಯಿಗೆ ಪೌಷ್ಟಿಕಾಂಶದ ಕೊರತೆಗಳು, ನಡೆದಾಡಲು ಸಮಸ್ಯೆಗಳು ಮತ್ತು ಹೆರಿಗೆಯ ಸಮಯದಲ್ಲಿ ಉಂಟಾಗುವ ತೊಂದರೆಗಳ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರು ಮಹಿಳೆಗೆ ಕಟ್ಟುನಿಟ್ಟಿನ ಬೆಡ್ ರೆಸ್ಟ್ ಅನ್ನು ಪಾಲಿಸುವಂತೆ ಮತ್ತು ಆಗಾಗ್ಗೆ ವೈದ್ಯಕೀಯ ಮೇಲ್ವಿಚಾರಣೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಇದರಿಂದ ಗರ್ಭಧಾರಣೆಯನ್ನು ಸುರಕ್ಷಿತವಾಗಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. ಅನೇಕರು ತಾಯಿಯ ಬಗ್ಗೆ ಮೆಚ್ಚುಗೆ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಐತಿಹಾಸಿಕ ಹಿನ್ನೆಲೆಯುಳ್ಳ ಕೊಳದಲ್ಲಿ ಪ್ರವಾಸಿಗರ ಮೋಜು ಮಸ್ತಿ; ಇದೆಂಥಾ ಅನಾಗರಿಕ ವರ್ತನೆ ಎಂದು ಕಿಡಿಕಾರಿದ ನೆಟ್ಟಿಗರು

ಇತ್ತೀಚೆಗೆ ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತುಕೊಂಡ ವೈದ್ಯೆ, ಡ್ಯಾನ್ಸರ್‌ ಆದಸೋನಮ್ ದಯಾ ಡಿಂಗ್ ಡಾಂಗ್ ಡಿಂಗ್ ಎಂದು ಸಖತ್‌ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ವೈರಲ್ ವಿಡಿಯೊದಲ್ಲಿ ಆಕೆ ಮಾಡಿದ್ದ ಕೆಲವು ಡ್ಯಾನ್ಸ್ ಸ್ಟೆಪ್‍ಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಹಾಗಾಗಿ ಕೆಲವರು ಗರ್ಭಾವಸ್ಥೆಯಲ್ಲಿ ಡ್ಯಾನ್ಸ್ ಮಾಡುವುದು ಅಪಾಯಕಾರಿ ಎಂದು ಹೇಳಿದ್ದಾರೆ. ಕೆಲವರು ಮಹಿಳೆಯ ಧೈರ್ಯವನ್ನು ಹೊಗಳಿದ್ದಾರೆ. ಇತರರು ಅವಳನ್ನು ಅಜಾಗರೂಕ ತಾಯಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ.