Viral Video: ದಿಢೀರ್ ಬಂದ ಮಳೆಗೆ ಕುದುರೆ ಏರಿದ ವರ ಕಂಗಾಲು; ವೈರಲ್ ವಿಡಿಯೊ ನೋಡಿ
ಮಳೆ ಬಂದರೆ ಭೂಮಿ ಹಸಿರಾಗುವಂತೆ, ಮದುವೆಯ ದಿನ ಮಳೆ ಬಂದರೆ ಮಂಗಳಕರ ಎಂದು ಹೇಳಲಾಗುತ್ತದೆ. ಅಂತೆಯೆ ಮಳೆ ಯನ್ನು ಅಷ್ಟೆಲ್ಲ ಶುಭ ಎಂದು ಹೇಳಿದರೂ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲು ಮಳೆಯಿಂದ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮಳೆ ಬರುವುದು ಬೇಡವೆಂದು ಬಯಸುವವರೆ ಅಧಿಕ ಮಂದಿ ಇದ್ದಾರೆ. ಇಲ್ಲೊಂದು ಮದುವೆಗೆ ಅದ್ಧೂರಿಯಾದ ಸೆಟಪ್ ಮಾಡಿದ್ದರೂ ವರ ಮಂಟಪಕ್ಕೆ ತಲುಪುತ್ತಿದ್ದಂತೆ ಅನಿರೀಕ್ಷಿತವಾಗಿ ಮಳೆ ಆಗಮನವಾಗಿದ್ದು ವರ ಪರದಾಡುವ ವಿಡಿಯೋ ವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..

Groom Enters Wedding Venue Amid Rain

ನವದೆಹಲಿ: ಮದುವೆ ಎರಡು ಜೀವಗಳನ್ನು ಬೆಸೆಯುವ ಬಂಧ. ಬಂಧು ಮಿತ್ರರು ಒಡಗೂಡಿ ನಡೆಯುವ ಈ ಮದುವೆ ಸಂದರ್ಭದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆ ನಡೆದುಬಿಡುತ್ತದೆ. ಅದರಲ್ಲಿಯೂ ಮಳೆಗಾಲ ಸಮೀಪಿಸುತ್ತಿದ್ದಂತೆ ಅನಿರೀಕ್ಷಿತವಾಗಿ ಯಾವಾಗ ಬೇಕಾದರೂ ಮಳೆ ಬರುವ ಸಾಧ್ಯತೆ ಇದೆ. ಮದುವೆ ದಿನ ಬರುವ ಮಳೆಯನ್ನು ಶುಭ ಸಂಕೇತ ಎಂದೇ ಹೇಳುವುದುಂಟು. ಮದುವೆ ದಿನ ಮಳೆ ಬಂದರೆ ದಂಪತಿ ಸುಖ ಸಂಸಾರ ನಡೆಸುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಇದೆಲ್ಲದರ ಹೊರತಾಗಿ ವರ ಕಬ್ಬಿಣದ ಕಡಾಯಿ ಪಾತ್ರೆಯಲ್ಲಿ ಊಟ ಮಾಡಿದ್ರೆ ಮದುವೆ ಸಮಯಕ್ಕೆ ಮಳೆ ಬರುತ್ತದೆ ಎನ್ನುವ ವಿಡಿಯೊ ಇತ್ತೀಚೆಗಷ್ಟೆ ಸಖತ್ ವೈರಲ್ ಆಗಿದ್ದು (Viral Video) ಈ ಬಗ್ಗೆ ನೆಟ್ಟಿಗರು ಕಮೆಂಟ್ ನ ಸುರಿಮಳೆಗೈದಿದ್ದಾರೆ.
ಮಳೆಯನ್ನು ಹಿಂದೂ ಸಂಪ್ರದಾಯದಲ್ಲಿ ಧನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಮದುವೆಯ ದಿನ ಮಳೆ ಬಂದರೆ ಶುಭವೆಂದು ಪರಿಗಣಿಸಲಾಗುತ್ತದೆ. ಮಳೆ ಬಂದರೆ ಭೂಮಿ ಹಸಿರಾಗುವಂತೆ, ಮದುವೆಯ ದಿನ ಮಳೆ ಬಂದರೆ ಮಂಗಳಕರ ಎಂದು ಹೇಳಲಾಗುತ್ತದೆ. ಅಂತೆಯೆ ಮಳೆಯನ್ನು ಅಷ್ಟೆಲ್ಲ ಶುಭ ಎಂದು ಹೇಳಿದರೂ ಮದುವೆ ವೇಳೆ ಧಿಡೀರ್ ಸುರಿದರೆ ತೊಂದರೆಯೂ ಆಗುತ್ತದೆ, ಗೊಂದಲ ಏರ್ಪಡುತ್ತದೆ. ಹೀಗಾಗಿ ಮದುವೆ ವೇಳೆ ಮಳೆ ಬರುವುದು ಬೇಡವೆಂದು ಬಯಸುವವರೇ ಅಧಿಕ ಮಂದಿ. ಇಲ್ಲೊಂದು ಮದುವೆಗೆ ಅದ್ಧೂರಿಯಾದ ಸೆಟಪ್ ಮಾಡಿದ್ದರೂ ವರ ಮಂಟಪಕ್ಕೆ ತಲುಪುತ್ತಿದ್ದಂತೆ ಅನಿರೀಕ್ಷಿತವಾಗಿ ಮಳೆ ಬಂದಿದ್ದು, ವರ ಪರದಾಡುವ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: Viral Video: ರಸ್ತೆ ಮಧ್ಯೆ ಸಿಕ್ಕಿದ ಮಗ, ಆತನ ಗೆಳತಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ
ಅದ್ಧೂರಿಯಾದ ಮದುವೆ ಮಂಟಪಕ್ಕೆ ವರನು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾನೆ. ರಾಜನಂತೆ ಕುದುರೆ ಏರಿ ಬರುತ್ತಿದ್ದ ವರ ಮಂಟಪ ತಲುಪಿ ಇನ್ನೇನು ಕೆಳಗಿಳಿಯಬೇಕು ಅನ್ನುವಾಗಲೇ ಜೋರಾಗಿ ಮಳೆ ಸುರಿದಿದೆ. ಹೀಗಾಗಿ ಉಳಿದ ಸಂಬಂಧಿಕರು ಮಂಟಪದ ಒಳ ಹೊಕ್ಕರೆ ವರ ಮಾತ್ರ ಕುದುರೆ ಮೇಲೆ ಕಂಗಾಲಾಗಿ ನಿಂತಿದ್ದಾನೆ. ಬಳಿಕ ವರನಿಗೆ ಕೆಲವು ಸಂಬಂಧಿಕರು ಕೊಡೆ ನೀಡಿದ್ದಾರೆ. ಕುದುರೆಯಿಂದ ಇಳಿಯಲು ವರ ಕಷ್ಟ ಪಡುತ್ತಿದ್ದರೆ ಕಡಾಯಿಯಲ್ಲಿ ಊಟ ಮಾಡಿದ್ರೆ ಹೀಗೆ ಆಗುತ್ತೆ ಎಂದು ವರನ ಮಿತ್ರನೊಬ್ಬ ತಮಾಷೆ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಕಂಡು ಬಂದಿದೆ.
ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು 7 ಮಿಲಿಯನ್‌ಗಿಂತ ಅಧಿಕ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ಈ ವಿಡಿಯೊಗೆ ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ಈತ ಕಡಾಯ್‌ನಲ್ಲಿ ಊಟ ಮಾಡಿದ್ದಲ್ಲ ಕುಕ್ಕರ್‌ನಲ್ಲಿ ಮಾಡಿರಬೇಕು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ವಧು ಕೂಡ ಕಡಾಯಿಯಲ್ಲಿ ಊಟ ಮಾಡಿರಬಹುದಲ್ಲ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಅಯ್ಯೋ ನಾನು ಕೂಡ ಕಡಾಯಿ ಊಟ ಮಾಡಿದ್ದೆ ವರನ ಪರಿಸ್ಥಿತಿ ಕಂಡರೆ ನನಗೀಗ ಭಯವಾಗುತ್ತೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.