ಜಂಕ್ ಫುಡ್ (junk food), ಅಸಹಜ ಜೀವನ ಶೈಲಿ ಮತ್ತು ನಮ್ಮ ದೈನಂದಿನ ಜೀವನ ಶೈಲಿಯಲ್ಲಿನ ಬದಲಾವಣೆಗಳಿಂದ ನಮ್ಮ ದೇಹದ ತೂಕ (extra weight) ಅಸಹಜ ರೀತಿಯಲ್ಲಿ ಏರಿಕೆ ಕಾಣುವುದು ಸಹಜ. ಮತ್ತು ಒಮ್ಮೆ ಈ ರೀತಿಯಾಗಿ ಹೆಚ್ಚುವರಿ ತೂಕ ಅಥವಾ ಬೊಜ್ಜು (Fat) ನಮ್ಮ ದೇಹವನ್ನು ಸೇರಿಕೊಂಡರೆ ಆ ಬಳಿಕ ಅದನ್ನು ಇಳಿಸಿ ದೇಹಕ್ಕೊಂದು ರೂಪವನ್ನು ಕೊಡುವುದು ಬಹಳ ಕಷ್ಟದ ಕೆಲಸವೇ ಸರಿ. ಮತ್ತು ಇದಕ್ಕಾಗಿ ಕಠಿಣ ಪ್ರಯತ್ನ ಮತ್ತು ಶಿಸ್ತಿನ ಡಯಟ್ ಅನುಕರಣೆ ಅನಿವಾರ್ಯವಾಗಿರುತ್ತದೆ. ಮತ್ತು ಇದನ್ನು ಸಾಧಿಸಿದರವರ ‘ಫ್ಯಾಟ್ ಟು ಫಿಟ್ ಜರ್ನಿ’ (fat to fit journey) ವಿಷಯ ವೈರಲ್ ಆಗುವುದು ಸಹಜ. ಅಂತಹ ಒಂದು ಡಯಟ್ ಸಾಧಕನ ಕಥೆಯನ್ನು ನಾವು ನಿಮಗಿಂದು ಹೇಳುತ್ತೇವೆ. ಮತ್ತು ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಫಿಟ್ನೆಸ್ ಕೋಚ್ (fitness coach) ಯತಿನೇಶ್ ನಿರ್ಭಾವನೆ (Yatinesh Nirbhavne) ಅವರ ಬಳಿಗೆ ಬಂದ ಯುವಕನೊಬ್ಬ ತನ್ನ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಂಡು ಅದು ಹೇಗೆ ಫಿಟ್ ಆಂಡ್ ಫೈನ್ ಆಗಿದ್ದಾನೆ ಎನ್ನುವ ಸ್ಪೂರ್ತಿಯ ಕಥೆ ಇಲ್ಲಿದೆ. ಇದು ಒಮರ್ ಎನ್ನುವ ಯುವಕ ಕೇವಲ ನಾಲ್ಕು ತಿಂಗಳಲ್ಲಿ 27 ಕೆ.ಜಿ. ತೂಕ ಕಳೆದುಕೊಂಡ ಕಥೆ. ಇದನ್ನು ಫಿಟ್ನೆಸ್ ಕೋಚ್ ಯತಿನೇಶ್ ತನ್ನ ಇನ್ ಸ್ಟಾ ಪೇಜ್ ನಲ್ಲಿ (Instagram Page) (yatinesh_here) ಹಂಚಿಕೊಂಡಿದ್ದು, ಜೊತೆಗೆ ಈ ಅವಧಿಯಲ್ಲಿ ಒಮರ್ ಸೇವಿಸಿದ ಮೂರು ಪ್ರಮುಖ ಕೊಬ್ಬು ಕರಗಿಸುವ ಆಹಾರಗಳ ವಿವರವನ್ನೂ ಸಹ ಅವರು ನೀಡಿದ್ದಾರೆ.
‘ಕೇವಲ ನಾಲ್ಕು ತಿಂಗಳುಗಳಲ್ಲಿ 27 ಕೆಜಿ ತೂಕವನ್ನು ಕಳೆದುಕೊಂಡ ಒಮರ್ ಎಂಬ ಯುವಕನನ್ನು ನೋಡಿ. ಆತನ ಪ್ರಥಮ ದಿನದ ತೂಕ = 95 ಕೆಜಿ, 120ನೇ ದಿನದ ತೂಕ = 68 ಕೆ.ಜಿಗಳು. ಅವಧಿ: ಒಟ್ಟು ಕೊಬ್ಬಿನಂಶ ನಷ್ಟಗೊಂಡಿರುವುದು 120 ದಿನಗಳಲ್ಲಿ 27 ಕೆಜಿ’ ಎಂದು ಯತಿನೇಶ್ ತನ್ನ ಇನ್ ಸ್ಟಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ಕೊಟ್ಟ ಮಾತಿನಂತೆ ಧನರಾಜ್ ಮನೆಗೆ ತೆರಳಿ ತೊಟ್ಟಿಲು ಗಿಫ್ಟ್ ಕೊಟ್ಟ ಗೋಲ್ಡ್ ಸುರೇಶ್
ಇದೀಗ 95 ಕೆಜಿಗೆ ಇಳಿದಿರುವ ಒಮರ್ 120 ದಿನಗಳಲ್ಲಿ 27 ಕೆಜಿ ಕಳೆದುಕೊಂಡಿರುವುದಾದರು ಹೇಗೆ? ಇದಕ್ಕೆಲ್ಲಾ ಆತ ಫ್ಯಾಟ್ ಲಾಸ್ ಕೋರ್ಸ್ ಅನುಸರಿಸಿದ್ದೇ ಕಾರಣ ಎನ್ನುವುದು ಫಿಟ್ನೆಸ್ ಕೋಚ್ ಅವರ ಹೇಳಿಕೆ. ಯತಿನೇಶ್ ನೀಡಿದ ಎರಡು ಫ್ಯಾಟ್ ಲಾಸ್ ಡಯಟ್ ಪದ್ಧತಿಯನ್ನು ಒಮರ್ ಅನುಸರಿಸಿದ ಕಾರಣ ಆತನ ದೇಹದ ತೂಕ ನಾಲ್ಕು ತಿಂಗಳಲ್ಲಿ 27 ಕೆಜಿಗಳಷ್ಟು ಕಡಿಮೆಯಾಗಿ ಇದೀಗ 68 ಕೆಜಿಗೆ ಇಳಿದಿದೆ. ಈ ಡಯಟ್ ಪದ್ಧತಿಯಲ್ಲಿ ಒಂದರ ಬದಲಿಗೆ ಒಂದು ಮೂರು ಪ್ರತ್ಯೇಕ ಆಹಾರ ಸೇವನೆ ವಿಧಾನ ಒಳಗೊಂಡಿತ್ತು.
ಒಟ್ಟಿನಲ್ಲಿ, ಜಂಕ್ ಫುಡ್ ಗಳ ಸೇವನೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ತಮ್ಮ ದೇಹದ ತೂಕವನ್ನು ಅಸಹಜವಾಗಿ ಹೆಚ್ಚಿಸಿಕೊಂಡು ಬಾಧೆ ಪಡುತ್ತಿರುವವರಿಗೆ ಒಮರ್ ದೇಹ ತೂಕ ಇಳಿಸಿಕೊಂಡ ವಿಚಾರ ಸ್ಪೂರ್ತಿಯಾಗುವುದಂತೂ ಸುಳ್ಳಲ್ಲ.