Viral Video: ರಾಂಚಿಯ ವಾಟರ್ ಪಾರ್ಕ್‌ನಲ್ಲಿ ದಿವ್ಯಾಂಗ ವಿದ್ಯಾರ್ಥಿಗಳ ಮೋಜು ಮಸ್ತಿ-ವಿಡಿಯೋ ವೈರಲ್
ರಾಂಚಿಯ ರಿಮ್ಜಿಮ್ ವಾಟರ್ ಪಾರ್ಕ್ ಗೆ ಅಂಧ ವಿದ್ಯಾರ್ಥಿಗಳು ಭೇಟಿ ನೀಡಿ ಖುಷಿಯ ಕ್ಷಣವನ್ನು ಕಳೆದಿದ್ದಾರೆ. ಸಾಮಾನ್ಯ ಮಕ್ಕಳಂತೆ ನೀರಿನಲ್ಲಿ ಎಂಜಾಯ್ ಮಾಡಿ ಮಕ್ಕಳು ಬಹಳ ಖುಷಿ ಪಟ್ಟಿದ್ದಾರೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.


ನವದೆಹಲಿ: ಈಗಂತೂ ಬೇಸಿಗೆ ರಜೆಯಾದ ಕಾರಣ ಫ್ಯಾಮಿಲಿ ಮಕ್ಕಳು ಜೊತೆಗೂಡಿ ಟ್ರಿಪ್ ಹೋಗುವುದು ಸಾಮಾನ್ಯವಾಗಿದೆ. ಅದರಲ್ಲೂ ಮಕ್ಕಳಿಗೆ ರಜೆ ಇರುವ ಕಾರಣ ವಾಟರ್ ಪಾರ್ಕ್ , ಅಮ್ಯುಸ್ ಮೆಂಟ್ ಪಾರ್ಕ್ ನಲ್ಲಿ ಖುಷಿಯ ಕ್ಷಣಗಳನ್ನು ಕಳೆಯಲು ಅನೇಕರು ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ರಾಂಚಿಯ ರಿಮ್ಜಿಮ್ ವಾಟರ್ ಪಾರ್ಕ್‌ಗೆ ದಿವ್ಯಾಂಗ ವಿದ್ಯಾರ್ಥಿಗಳು ಭೇಟಿ ನೀಡಿ ಖುಷಿಯ ಕ್ಷಣವನ್ನು ಕಳೆದಿದ್ದಾರೆ. ಸಾಮಾನ್ಯ ಮಕ್ಕಳಂತೆ ನೀರಿನಲ್ಲಿ ಎಂಜಾಯ್ ಮಾಡಿ ಮಕ್ಕಳು ಬಹಳ ಖುಷಿ ಪಟ್ಟಿದ್ದಾರೆ. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ (Viral Video) ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ಇಂದು ಅಂಧ ಮಕ್ಕಳನ್ನು ಪ್ರೋತ್ಸಾಹಿಸಲು ಸರಕಾರ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ದಿವ್ಯಾಂಗ ಮಕ್ಕಳಿಗಾಗಿ ಕೆಲವೊಂದು ವಿಶೇಷ ಚೇತನರ ಶಾಲೆಗಳಿದ್ದು ಅಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ, ವೃತ್ತಿ ಕೌಶಲ್ಯ ಇತ್ಯಾದಿಗಳನ್ನು ಕಲಿಸಲು ಪ್ರೋತ್ಸಾಹಿಸಲಾಗುತ್ತಿದೆ. ಕಲಿಕೆಯ ಜೊತೆಗೆ ಮನೋರಂಜನಾತ್ಮಕ ಕೌಶಲ್ಯದಲ್ಲೂ ಮಕ್ಕಳು ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಂಚಿಯ ದಿವ್ಯಾಂಗ ವಿದ್ಯಾರ್ಥಿಗಳನ್ನು ರಿಮ್ಜಿಮ್ ವಾಟರ್ ಪಾರ್ಕ್‌ಗೆ ಕರೆದುಕೊಂಡು ಹೋಗಲಾಗಿದ್ದು ಮಕ್ಕಳ ಖುಷಿಯ ಕ್ಷಣದ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ
ಬೇಸಿಗೆ ಕಾಲದಲ್ಲಿ ಸದಾ ಜನ ಜಂಗುಳಿಯಲ್ಲಿ ವಾಟರ್ ಪಾರ್ಕ್ ಗಳು ತುಂಬಿರುತ್ತವೆ ಆದರೆ ರಾಂಚಿಯ ರಿಮ್ಜಿಮ್ ವಾಟರ್ ಪಾರ್ಕ್ ಅನ್ನು ಅಂಧ ಮಕ್ಕಳಿಗಾಗಿಯೇ ಒಂದು ದಿನದ ಮಟ್ಟಿಗೆ ತೆರವುಗೊಳಿಸಲಾಯಿತು.ವೈರಲ್ ಆದ ವಿಡಿಯೋದಲ್ಲಿ ದೃಷ್ಟಿ ಹೀನ ಮಕ್ಕಳು ಬಸ್ ನಿಂದ ಇಳಿದು ಸಾಲಾಗಿ ನಿಂತಿರುವ ದೃಶ್ಯ ಇದೆ. ಅದರ ಜೊತೆಗೆ ಎಲ್ಲ ಮಕ್ಕಳು ಒಬ್ಬರನ್ನೊಬ್ಬರು ಹಿಡಿದು ಖುಷಿಯಿಂದ ಈಜುಕೊಳದತ್ತ ಹೆಜ್ಜೆ ಹಾಕಿದ್ದು ನೋಡುಗರ ಮನ ಮುಟ್ಟುವಂತಿದೆ.
ಇದನ್ನು ಓದಿ: Viral News: ಪೈಲೆಟ್ ಇಲ್ಲದೆ 10 ನಿಮಿಷ ಆಕಾಶದಲ್ಲಿ ಹಾರಾಡಿದ ನಾಗರಿಕ ವಿಮಾನ! ಮುಂದೆ ಆಗಿದ್ದೇನು?
ದಿವ್ಯಾಂಗ ಮಕ್ಕಳ ಸುರಕ್ಷತೆಗಾಗಿ ಅಲ್ಲಿನ ಸಿಬಂದಿಗಳು ಸದಾ ಜಾಗೃತರಾಗಿದ್ದು ಈಜುಕೊಳಗಳ ಸುತ್ತಲೂ ಮಾರ್ಗದರ್ಶನ ನೀಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಸಿಬಂದಿಗಳ ಸಹಕಾರದಿಂದ ಮಕ್ಕಳು ಈಜುವುದು, ರೈನ್ ಡ್ಯಾನ್ಸ್, ಇತ್ಯಾದಿ ಖುಷಿಯ ಕ್ಷಣ ಕಳೆಯುತ್ತಿದ್ದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ಜನ ಮೆಚ್ಚುಗೆ ಪಡೆದಿದೆ.
ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು ಬಳಕೆದಾರರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಇಂತಹ ಮಕ್ಕಳು ಜಗತ್ತನ್ನು ನೋಡಲು ಸಾಧ್ಯವಾಗದಿದ್ದರೂ ವಾಟರ್ ಪಾರ್ಕ್ ನಲ್ಲಿ ಮನಸಾರೆ ಖುಷಿ ಪಟ್ಟರು, ಇದಕ್ಕೆ ಸಿಬಂದಿಗಳು ಮಕ್ಕಳ ಸುರಕ್ಷತೆಗೆ ತುಂಬಾ ಬೆಂಬಲ ನೀಡಿದ್ದು ಮನಮುಟ್ಟುವಂತಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯ ಮಕ್ಕಳಂತೆ ಬದುಕಲು ಅಂಧ ಮಕ್ಕಳಿಗೂ ಅವಕಾಶ ನೀಡಿದ್ದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.