Wednesday, 23rd October 2024

Viral Video: ನಾಯಿ ಜತೆ ಆಟವಾಡುವಾಗ 3ನೇ ಮಹಡಿಯಿಂದ ಬಿದ್ದುಯುವಕ ಸಾವು

Viral Video

ಹೈದರಾಬಾದ್‌ : ಹೊಟೆಲ್‌ನ ಕಾರಿಡಾರ್‌ನಲ್ಲಿ ನಾಯಿ ಜೊತೆ ಆಟವಾಡುತ್ತಿದ್ದ ಯುವಕನೊಬ್ಬ 3 ನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಹೈದರಾಬಾದ್‌ನ ಚಂದನನಗರದಲ್ಲಿ ನಡೆದಿದೆ. ಪಾಲಿಟೆಕ್ನಿಕ್‌ ವಿದ್ಯಾರ್ಥಿ 22 ವರ್ಷದ ಉದಯ ಮೃತಪಟ್ಟ ಯುವಕ. ತನ್ನ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಸ್ನೇಹಿತರೊಂದಿಗೆ ವಿವಿ ಪ್ರೈಡ್‌ ತೆರಳಿದ್ದ. ಹೊಟೆಲ್‌ನ ಕಾರಿಡಾರ್‌ ಮೇಲೆ ನಾಯಿ ಜೊತೆ ಆಟ ಆಡಿ ನಂತರ ಅದನ್ನು ಬೆದರಿಸುವ ಆಟವಾಡಿದ್ದ. ಆಯ ತಪ್ಪಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.

ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ:

ಉದಯ್‌ ತನ್ನ ಕೋಣೆಯಿಂದ ಹೊರಬಂದು ನಾಯಿ ಜೊತೆ ಆಟ ಆಡುತ್ತಾನೆ. ನಂತರ ಅದರ ಜೊತೆಗೆ ತಾನೂ ಓಡಲು ಪ್ರಾರಂಭಿಸುತ್ತಾನೆ. ತಮಾಷೆಗೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಈ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:Ratan Tata: ರತನ್‌ ಟಾಟಾ ಬಗ್ಗೆ ನೆಚ್ಚಿನ ಗೆಳೆಯ ಶಾಂತನು ಹೇಳಿದ್ದೇನು? ಭಾರೀ ವೈರಲ್‌ ಆಗ್ತಿದೆ ಇನ್‌ಸ್ಟಾ ಪೋಸ್ಟ್

ಸದ್ಯ ಘಟನೆ ಸಂಬಂಧ ಚಂದಾನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಹಿಂದೆ ನೋಯ್ಡಾದಲ್ಲೂ ಇಂತದೇ ಘಟನೆ ನಡೆದಿದ್ದು, ವ್ಯಕ್ತಿಯೋರ್ವ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿದ್ದರು. ಮಾನಸಿಕ ಯಾತನೆಯಿಂದ ಬಳಲುತ್ತಿದ್ದ ವ್ಯಕ್ತಿ 14ನೇ ಮಹಡಿಯಿಂದ ಜಿಗಿಯಲು ತಯಾರಿ ನಡೆಸಿದ್ದ. ಈತನನ್ನು ನೋಡಿದ ಸ್ಥಳೀಯರು ಕೂಡಲೇ ರಕ್ಷಿಸಿ ಕೆಳಗೆ ಕರೆತಂದಿದ್ದರು.ಈ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.