Saturday, 4th January 2025

Ileana D’Cruz: ಮತ್ತೆ ತಾಯಿ ಆಗ್ತಿದ್ದಾರಾ ನಟಿ ಇಲಿಯಾನಾ? ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲೇನಿದೆ?

Illena D cruz

ನವದೆಹಲಿ: ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವ ವಿಡಿಯೊ ವೊಂದನ್ನು ಪೋಸ್ಟ್ ಮಾಡಿದ್ದು ನಟಿ ಮತ್ತೆ ಗರ್ಭಿಣಿ ಎನ್ನುವ ಸುಳಿವನ್ನು ನೀಡಿದ್ದಾರೆ. ಈ ವಿಡಿಯೊ ಇದೀಗ ಅವರ ಅಭಿಮಾನಿಗಳ ಗಮನ ಸೆಳೆದಿದೆ. ಇಲಿಯಾನಾ ತನ್ನ Instagram  ಖಾತೆಯಲ್ಲಿ 2024 ರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಪತಿ ಮೈಕೆಲ್ ಡೋಲನ್ ಮತ್ತು ಮಗ ಕೋವಾ ಅವರೊಂದಿಗಿನ 2024 ರ ನೆನಪುಗಳನ್ನು ಮೆಲುಕು ಹಾಕುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.(Viral Video)

ಆದರೆ ಈ ವಿಡಿಯೊದಲ್ಲಿ ಎಲ್ಲರ ಗಮನ ಸೆಳೆದಿದ್ದು, ಇಲಿಯಾನಾ ಅವರು ಕ್ಯಾಮೆರಾವನ್ನು ಗರ್ಭಧಾರಣೆಯ ಪರೀಕ್ಷಾ ಕಿಟ್‌ ಕಡೆ ತಿರುಗಿಸಿ ಭಾವುಕರಾಗಿರುವುದು ಕಂಡುಬಂದಿದೆ. ಅವರು ಈ  ಪೋಸ್ಟ್‌ಗೆ  ಪ್ರೀತಿ, ಶಾಂತಿ, ದಯೆ  2025ರಲ್ಲಿ ಇನ್ನೂ ಹೆಚ್ಚಿನವುಗಳ ನಿರೀಕ್ಷೆಯಿದೆ ಎಂದು ಶೀರ್ಷಿಕೆ ನೀಡಿದ್ದಾರೆ.  ಹಾಗಾಗಿ ನಟಿ ತನ್ನ ಎರಡನೇ ಮಗುವಿನ  ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ನಟಿ ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ ಎರಡನೇ ಗರ್ಭಧಾರಣೆಯ ಬಗ್ಗೆ ಏನನ್ನೂ ಉಲ್ಲೇಖಿಸದಿದ್ದರೂ, ನಟಿ  ಮತ್ತೊಂದು ಮಗುವಿನ  ನಿರೀಕ್ಷೆಯಲ್ಲಿದ್ದಾರೆ ಎಂದು ಈ  ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ನೀವು ಮತ್ತೆ ಪ್ರಗ್ನೆಂಟ್ ಆಗಿದ್ದೀರಾ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಎರಡನೇ ಮಗು 2025 ರಲ್ಲಿ ಬರಲಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮೇ 2023 ರಲ್ಲಿ ಇಲಿಯಾನಾ ಮೈಕೆಲ್ ಡೋಲನ್ ಅವರನ್ನು ವಿವಾಹವಾಗಿದ್ದು  ಆಗಸ್ಟ್ 2023 ರಲ್ಲಿ  ಮೊದಲ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಲಿಯಾನಾ ತನ್ನ ಮೊದಲ ಗರ್ಭಧಾರಣೆಯ ಸುದ್ದಿಯನ್ನು Instagram ನಲ್ಲಿ ಪ್ರಕಟಿಸುವಾಗ ಈ ಬಗ್ಗೆ ಪೋಸ್ಟ್ ಮಾಡಿ ಕೊಂಡಿದ್ದರು. ಶೀಘ್ರದಲ್ಲೇ ಬರಲಿದೆ ನನ್ನ ಪುಟ್ಟ ಪ್ರಿಯತಮೆ ನಿನ್ನನ್ನು ಭೇಟಿಯಾಗುವುದಕ್ಕೆ  ಕಾಯಲು ಸಾಧ್ಯವಿಲ್ಲ ಎಂದು  ಪೋಸ್ಟ್ ಮಾಡಿದ್ದರು. ಹಾಗಾಗಿ‌ ಈ  ವಿಡಿಯೊದ ಅಕ್ಟೋಬರ್  ಕ್ಲಿಪ್ ಅಭಿಮಾನಿಗಳನ್ನು ಹೆಚ್ಚು ಗಮನ ಸೆಳೆದಿದ್ದು ಇಲಿಯಾನಾ  ಕ್ಯಾಮೆರಾಗೆ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ತೋರಿಸುತ್ತಿದ್ದಂತೆ   ನಟಿ ಮತ್ತೆ ತಾಯಿಯಾಗುತ್ತಿದ್ದಾರೆ ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ:2024 Flashback: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು