ಮುಂಬೈ: ವಾಹನಗಳಿಗೆ ಅದರಲ್ಲು ಕಾರುಗಳಿಗೆ ರಸ್ತೆಯಲ್ಲೇ ಬೆಂಕಿ ಹತ್ತಿಕೊಳ್ಳುವ (Fire Accident) ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ವರದಿಯಾಗುತ್ತಲೇ ಇದೆ. ಅದರಲ್ಲೂ ವಿಶ್ವದ ಪ್ರತಿಷ್ಠಿತ ಕಂಪೆನಿಗಳಾದ ಮರ್ಸಿಡಿಸ್ ಬೆಂಝ್ (Mercedes-Benz), ಬಿ.ಎಂ.ಡಬ್ಲ್ಯು(BMW). ನಂತಹ ಕಂಪೆನಿಗಳ ಕಾರುಗಳಲ್ಲೇ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇಂತಹದ್ದೇ ಒಂದು ದುರ್ಘಟನೆಯಲ್ಲಿ ದುಬಾರಿ ಲ್ಯಾಂಬೊರ್ಗಿನಿ (Lamborghini ) ಕಾರೊಂದು ರಸ್ತೆ ನಡುವೆ ಬೆಂಕಿಗಾಹುತಿಯಾಗಿರುವ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral Video) ಆಗಿದೆ.
ಡಿ.25ರ ಬುಧವಾರ ಮುಂಬಯಿಯ (Mumbai) ಕೋಸ್ಟಲ್ ರೋಡ್ ನ (Coastal Road) ಕ್ಯಾಂಡಿ ಸಿಗ್ನಲ್ ನಲ್ಲಿ (Candy signal) ಈ ಘಟನೆ ನಡೆದಿದ್ದು, ಬೆಂಕಿ ಹತ್ತಿಕೊಂಡ ತಕ್ಷಣವೇ ರಾತ್ರಿ 10.20ರ ಸುಮಾರಿಗೆ ಫೈರ್ ಬ್ರಿಗೇಡ್ ಗೆ (Fire Brigade) ಮಾಹಿತಿ ನೀಡಲಾಗಿತ್ತು, ಆದರೆ ಫೈರ್ ಬ್ರಿಗೇಡ್ ಘಟನಾ ಸ್ಥಳಕ್ಕೆ ತಲುಪಿದಾಗ 10.59 ಆಗಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹತ್ತಿಕೊಂಡ ದುರ್ಘಟನೆಯ ವಿಡಿಯೋವನ್ನು ರೇಮಂಡ್ ಗ್ರೂಪಿನ (Raymond Group) ಅಧ್ಯಕ್ಷರಾಗಿರುವ ಗೌತಮ್ ಸಿಂಘಾನಿಯಾ (Gautam Singhania) ತನ್ನಇನ್ ಸ್ಟಾಗ್ರಾಂ (Instagram) ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಈ ಪೋಸ್ಟ್ ನಲ್ಲಿ ಅವರು ಮುಂಬೈ ಪೊಲೀಸನ್ನು ಟ್ಯಾಗ್ ಮಾಡಿದ್ದಾರೆ.
ಮತ್ತು ಈ ಪೋಸ್ಟಿಗೆ ಸಿಂಘಾನಿಯ ಅವರು ಈ ರಿತಿಯಾಗಿ ಕ್ಯಾಪ್ಷನ್ ನೀಡಿದ್ದಾರೆ. ‘ನನ್ನ ಕಣ್ಣಿಗೆ ಬಿತ್ತು: ಮುಂಬಯಿಯ ಕೋಸ್ಟಲ್ ರೋಡ್ ನಲ್ಲಿ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ ಈ ರೀತಿಯ ಘಟನೆಗಳು ಲ್ಯಾಂಬೋರ್ಗಿನ ಕಾರಿನ ವಿಶ್ವಾಸಾರ್ಹತೆ ಮತ್ತು ಸುರಕ್ಷತಾ ಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬೆಲೆ ಮತ್ತು ಪ್ರತಿಷ್ಠೆಗಾಗಿ ಈ ಕಾರನ್ನು ಖರೀದಿಸುವವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ – ಯಾವುದೇ ರೀತಿಯ ತೊಂದರೆಗಳನ್ನು ನಿರೀಕ್ಷಿಸುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: Divya Uruduga: ಐಷಾರಾಮಿ ಕಾರು ಖರೀದಿಸಿದ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ; ವಿಶೇಷ ಪೋಸ್ಟ್ ಹಂಚಿಕೊಂಡ ಡಿಯು
ಇತ್ತೀಚಿನ ದಿನಗಳಲ್ಲಿ ಲ್ಯಾಂಬೋರ್ಗಿನಿ ಕಾರು ಬೆಂಕಿಗಾಹುತಿಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದ್ದು ಇದು ಈ ಕಾರಿನ ಸುರಕ್ಷತೆಯ ಕುರಿತಾಗಿ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಅಕ್ಟೋಬರ್ 2024ರಂದು, ಲ್ಯಾಂಬೋರ್ಗಿನಿಯ ಹೊಸ ವಿ12 ಮಾಡೆಲ್ ರೆವ್ ಮ್ಯೂಲ್ಟೋ ಕಾರಿನಲ್ಲಿ ಎಲೆಕ್ಟ್ರಿಕಲ್ ಸಮಸ್ಯೆಗಳಿವೆ ಎಂಬ ಕಳವಳನ್ನು ಎತ್ತಿದ್ದರು. ಅವರು ಈ ಮಾಡಲ್ ನ ಟೆಸ್ಟ್ ಡ್ರೈವ್ ಮುಂಬಯಿಯ ಅಟಲ್ ಸೇತುವಿನಲ್ಲಿ ಟೆಸ್ಟ್ ಡ್ರೈವ್ ಮಾಡ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಹೊಸ ಮಾಡೆಲ್ ನ ಕಾರಿನಲ್ಲಿ ಈ ಸಮಸ್ಯೆಗಳು ಕಂಡುಬಂದಿತ್ತು.