ನವ ದೆಹಲಿ: ಹೈದರಾಬಾದ್ ಮೆಟ್ರೋದಲ್ಲಿ ಜೋಡಿಯೊಂದು ಸರಪ ಸಲ್ಲಾಪದಲ್ಲಿ ತೊಡಗಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಮೂಲಕ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು ಸಾರ್ವಜನಿಕ ಸ್ಥಳದಲ್ಲಿ ಈ ಜೋಡಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.(Viral Video)
ಹೈದರಾಬಾದ್ ಚೈತ್ಯನ ಪುರಿಯಿಂದ ಎಲ್‌ಬಿ ನಗರಕ್ಕೆ ತೆರಳುತ್ತಿದ್ದ ಮೆಟ್ರೋದಲ್ಲಿ ಯುವಕ ಯುವತಿಗೆ ಕಿಸ್ ಮಾಡುತ್ತಿದ್ದ. ಮೆಟ್ರೋದಲ್ಲಿ ಸುತ್ತಮುತ್ತ ಜನ ಇದ್ದರೂ ಯುವಕ ಕ್ಯಾರೇ ಎನ್ನದೆ ಯುವತಿಗೆ ಚುಂಬಿಸುತ್ತಿದ್ದಾನೆ. ಸದ್ಯ ಯುವಕ ಯುವತಿಯ ಈ ಜೋಡಿಯ ಬಹಿರಂಗವಾಗಿ ಮುತ್ತಿನಾಟ ನೋಡಿದ ಪ್ರಯಾಣಿಕರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ರೈಲಿನ ಸೀಟಿನ ಮೇಲೆ ಕುಳಿತಿದ್ದ ಯುವಕನು ತನ್ನ ಮಡಿಲಲ್ಲಿ ಮಲಗಿರುವ ಯುವತಿಗೆ ಚುಂಬಿಸುತ್ತಿದ್ದಾನೆ. ಯುವಕ ಯುವತಿಯ ತುಟಿಗೆ ಮುತ್ತಿಕ್ಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ನೋಡಿ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೋದಲ್ಲಿ ಅನೇಕ ನಿಯಮಗಳಿದ್ದರೂ ಸಹ ಪ್ರಯಾಣಿಕರು ಇಂದು ಮೆಟ್ರೋ ರೈಲಿನಲ್ಲಿ ತಮಗೆ ಬಂದಂತೆ ವರ್ತಿಸುವುದನ್ನು ಕಂಡು ನೋಡುಗರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಹ್ಯಕರ ಕೃತ್ಯ ಎಸಗಿದರೆ ಹೇಗೆ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಬಳಕೆದಾರರೊಬ್ಬರು ಮೆಟ್ರೋದಲ್ಲಿ ನಡೆಯುವ ಇಂತಹ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಮರ್ಯಾದೆ ಇಲ್ಲದ ಜನ, ಇದು ಅನಿಮಲ್ ಸಿನಿಮಾದ ರಿಮೇಕ್ ಸೀನ್ ಎಂದು ಕಾಮೆಂಟ್ ಮಾಡಿದ್ದಾರೆ.
ಅದರಲ್ಲೂ ದೆಹಲಿ ಮತ್ತು ಮುಂಬೈ, ಹೈದರಾಬಾದ್ ಮೆಟ್ರೋದಲ್ಲಿ ಯುವತಿ ಯುವಕರ ಸರಸ ಸಲ್ಲಾಪಗಳ ವಿಡಿಯೊಗಳು ಇಂದು ಹೆಚ್ಚಾಗಿ ಕಂಡು ಬರುತ್ತಿದ್ದು, ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್ ನಲ್ಲಿ ದಂಪತಿ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಅಲ್ಲದೇ ಯುವಕ ಯುವತಿ ಇಬ್ಬರೂ ಲಿಪ್‌ಲಾಕ್ ಮಾಡುವ ವಿಡಿಯೊ ಕೂಡ ಬಹಳಷ್ಟು ವೈರಲ್ ಆಗಿತ್ತು.
ಇದನ್ನು ಓದಿ:Viral Video: 19ನೇ ವಯಸ್ಸಿಗೆ 90 ದೇಶ ಸುತ್ತಿದ ಯುವತಿ! ಈ ವಿಡಿಯೊ ಭಾರೀ ವೈರಲ್