Thursday, 21st November 2024

Viral Video: ಕ್ಲಾಸ್ ರೂಂನೊಳಗೆ ಜಡೆ ಎಳೆದಾಡಿಕೊಂಡು ಹೊಡೆದಾಡಿದ ವಿದ್ಯಾರ್ಥಿನಿಯರು!

Viral Video


ನವದೆಹಲಿ: ಕಾಲೇಜು ಅಂದ ಮೇಲೆ ಕ್ಯಾಪಸ್‌ನಲ್ಲಿ, ಕ್ಲಾಸ್ ರೂಂನೊಳಗೆ ವಿದ್ಯಾರ್ಥಿಗಳ ನಡುವೆ ಜಗಳ ನಡೆಯುವುದು ಸಹಜ. ಚಿಕ್ಕ ಪುಟ್ಟ ವಿಚಾರಗಳಿಗೂ ವಿದ್ಯಾರ್ಥಿಗಳು ಜಗಳ ಮಾಡುತ್ತಾರೆ. ಆದರೆ ಇಲ್ಲೊಂದು ಕಾಲೇಜಿನಲ್ಲಿ ಕ್ಲಾಸ್ ರೂಂನೊಳಗೆ ವಿದ್ಯಾರ್ಥಿನಿಯರಿಬ್ಬರು ತಮ್ಮ ಜಡೆ ಹಿಡಿದುಕೊಂಡು ಹೊಡೆದಾಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ತರಗತಿಯೊಳಗೆ ಹೊಡೆದಾಡುತ್ತಾ ಜಗಳ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಗೊಂದಲವನ್ನುಂಟು ಮಾಡಿದೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗುತ್ತಿದೆ.

ಈ ವಿಡಿಯೊವನ್ನು ಘರ್ ಕಾ ಕಾಲೇಶ್ ಎಂಬ ಜನಪ್ರಿಯ ಹ್ಯಾಂಡಲ್ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಿಂಸಾತ್ಮಕವಾಗಿ ಜಗಳ ಮಾಡುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರ ನಡುವೆ ಜಗಳ ಶುರುವಾಗಿ ಆ ವೇಳೆ ಇಬ್ಬರು ಒಬ್ಬರ ಮೇಲೆ ಒಬ್ಬರು ನಿಂದನೆಗಳನ್ನು ಮಾಡುತ್ತಾ ಕೊನೆಗೆ ಈ ಜಗಳ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಜಗಳ ಬಿಡಿಸಲು ಸಹಪಾಠಿಗಳು ಮಧ್ಯಪ್ರವೇಶ ಮಾಡಿದ್ದಾರೆ. ವಿದ್ಯಾರ್ಥಿನಿಯರ ಹೊಡೆದಾಟ ತರಗತಿಯಲ್ಲಿ ಅಳವಡಿಸಲಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈಗಾಗಲೇ ಸಾವಿರಾರು ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಗಳಿಸಿರುವ ಈ ವಿಡಿಯೊದಲ್ಲಿ ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ, ಇತರರು ಘಟನೆಯನ್ನು ತಮ್ಮ ಫೋನ್ ಗಳಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ. ನಾಟಕೀಯ ಮತ್ತು ಕೆಲವೊಮ್ಮೆ ಹಾಸ್ಯಮಯ ವಿಷಯಗಳನ್ನು ಪೋಸ್ಟ್ ಮಾಡುವ ಘರ್ ಕಾ ಕಾಲೇಶ್ ಇದಕ್ಕೆ ಶೀರ್ಷಿಕೆ ಕೂಡ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಶಾಲೆಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಸ್ತನ್ನು ಕಲಿಸುತ್ತಿಲ್ಲ ಎಂಬ ಕಳವಳದ ಜೊತೆಗೆ ಈ ಉಗ್ರ ಹೋರಾಟದ ಬಗ್ಗೆ ಹಲವರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಸಮಾರಂಭದಲ್ಲಿ ಭಾಗಿಯಾಗಲು 5 ಲಕ್ಷ ರೂ. ಶುಲ್ಕ, ಸ್ಟಾರ್‌ ಹೋಟೆಲ್‌ ವಾಸ್ತವ್ಯ! ಇದು ಬೀದಿಬದಿಯ ಚಾಯ್‌ವಾಲಾನ ಡಿಮ್ಯಾಂಡ್‌!

ಅವರು ಜಗಳವಾಡುವ ರೀತಿಯನ್ನು ಕಂಡು ಅನೇಕರು ಆಶ್ಚರ್ಯಚಕಿತರಾದರೆ, ಅನೇಕರು ಹೋರಾಟವನ್ನು ತಡೆಯಲು ಸಹಪಾಠಿಗಳು ಮೊದಲೇ ಮುಂದೆ ಬರಬೇಕಾಗಿತ್ತು ಎಂದು ಹೇಳಿದ್ದಾರೆ. ಕೆಲವು ವೀಕ್ಷಕರು ಅಂತಹ ಘಟನೆಗಳನ್ನು ರೆಕಾರ್ಡ್ ಮಾಡುವ ಮತ್ತು ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಸಂಸ್ಕೃತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ. ಕೆಲವರು ಇದು ಬೇರೆ ವಿದ್ಯಾರ್ಥಿಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೊ ಶಾಲಾ ಶಿಸ್ತು ಮತ್ತು ಕಲಿಕೆಯ ಸ್ಥಳವನ್ನು ಸುರಕ್ಷಿತವಾಗಿಡಲು ಯಾರು ಜವಾಬ್ದಾರಿಯುತರು ವಿದ್ಯಾರ್ಥಿಗಳೇ? ಅಥವಾ ಶಿಕ್ಷಕರೇ? ಎಂಬುದರ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.