Wednesday, 8th January 2025

Viral Video: ತನ್ನನ್ನು ‘ಮೋಟಿ’ ಎಂದವರಿಗೆ ಕ್ರಿಯೇಟಿವ್ ಹಾಡಿನ ಮೂಲಕ ಟಾಂಗ್ ಕೊಟ್ಟ ಮಹಿಳೆ – ಇಲ್ಲಿದೆ ವಿಡಿಯೋ

ತನ್ನ ದಢೂತಿ ದೇಹದ ಕುರಿತು ಸೋಷಿಯಲ್ ಮೀಡಿಯಾದಲ್ಲಿ (Social Media) ಕಮೆಂಟ್ ಮೂಲಕ ಟ್ರೋಲ್ ಮಾಡಿದವರಿಗೆ ಮಹಿಳೆಯೊಬ್ಬರು ಕ್ರಿಯೇಟಿವ್ ಸಾಂಗ್ ಮೂಲಕ ಸಖತ್ ತಿರುಗೇಟು ಕೊಟ್ಟಿದ್ದಾರೆ. ಮತ್ತು ಆಕೆ ರಚಿಸಿ ಹಾಡಿರುವ ಈ ಕ್ರಿಯೇಟಿವ್ ಸಾಂಗ್ (Creative Song) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ತನ್ನ ದೇಹದ ಬಗ್ಗೆ ಟ್ರೋಲ್ ಮಾಡಿ ಕಮೆಂಟ್ ಮಾಡಿದವರಿಗಾಗಿ ಈ ಮಹಿಳೆ ಬಹಳ ಬುದ್ಧಿವಂತಿಕೆಯಿಂದ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ತನ್ನ ಹಾಡಿನ ಪದಗಳಲ್ಲಿ ಆಕೆ ನೆಗೆಟಿವಿಟಿಯನ್ನು ಸೂಚ್ಯವಾಗಿ ತಂದಿದ್ದರೂ ಇದರ ಉದ್ದೇಶ ತನ್ನನ್ನು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಡುವುದೇ ಆಗಿತ್ತು.

ವಿಪಾಶಾ.ಮಲ್ಹೋತ್ರಾ (vipasha.malhotra) ಎಂಬ ಇನ್ ಸ್ಟಾ ಖಾತೆಯಲ್ಲಿ (Instagram) ಪೊಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿರುವಂತೆ, ತನ್ನ ಬಗ್ಗೆ, ‘ಮೋಟೇ ಕೋ ಮೋಟೇ ನಹೀ ಬೋಲೇಂಗೇ ತು ಫಿರ್ ಔರ್ ಕ್ಯಾ ಬೋಲೇಂಗೇ!’ (ದಪ್ಪದವರನ್ನು ದಪ್ಪ ಇದ್ದೀಯ ಎಂದು ಹೇಳದೆ ಬೇರೆನ್ನೀನು ಹೇಳುವುದು..!?’ ಎಂದು ಸಿಲ್ಲಿಯಾಗಿ ಕಮೆಂಟ್ ಮಾಡಿದ ನೆಟ್ಟಿಗರಿಗೆ ಈ ಯುವತಿ ಹಾಡಿನ ಮೂಲಕ ಟಾಂಗ್ ಕೊಟ್ಟಿದ್ದಾಳೆ.

ಈ ಫನ್ನಿ ಟಾಂಗ್ ವೀಡಿಯೋ ನೋಡಿ ಸೋಷಿಯಲ್ ಮೀಡಿಯಾ ಯೂಸರ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಲವು ನೆಟ್ಟಿಗರು ಈ ಮಹಿಳೆಗೆ ಸಪೋರ್ಟ್ ಮಾಡಿ ಕಮೆಂಟ್ ಹಾಕಿದ್ದಾರೆ. ತನ್ನ ಬಗ್ಗೆ ಹಗುರವಾಗಿ ಮಾತನಾಡಿದರೂ, ಈಕೆ ಆ ಪರಿಸ್ಥಿತಿಯನ್ನು ನಿಭಾಯಿಸಿರುವ ಬಗೆಯನ್ನು ಹಲವರು ಪ್ರಶಂಸಿದ್ದಾರೆ. ಮಾತ್ರವಲ್ಲದೇ ಆಕೆಯ ಫನ್ನಿ ಲಿರಿಕ್ಸ್ ಬಗ್ಗೆಯೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Web Series: 2025ರಲ್ಲಿ ತೆರೆಕಾಣಲಿರುವ  ಮೋಸ್ಟ್ ಇಂಟ್ರೆಸ್ಟಿಂಗ್‌ ವೆಬ್ ಸಿರೀಸ್‌ ಲಿಸ್ಟ್ ಇಲ್ಲಿದೆ!

‘ಧೈರ್ಯವಂತ ಹುಡುಗಿ! ನನಗೆ ಈ ಹಾಡೂ ಇಷ್ಟವಾಯ್ತು.’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಆಕೆಯ ಬಗ್ಗೆ ಗೌರವ ಬಂತು.. ಆಕೆ ತನ್ನ ಬಗ್ಗೆ ಕಮೆಂಟ್ ಮಾಡಿದ ‍ವ್ಯಕ್ತಿಯ ಹೆಸರನ್ನೂ ಸಹ ಮರೆಮಾಚಿದ್ದಾಳೆ’ ಎಂದು ಇನ್ನೊಬ್ಬರ ಕಮೆಂಟ್ ಆಗಿದೆ. ‘ಈ ಎಪಿಕ್ ರಿಪ್ಲೈ ನಂಗೆ ತುಂಬಾ ಇಷ್ಟವಾಯ್ತು’ ಎಂಬ ಕಮೆಂಟ್ ಇನ್ನೊಬ್ಬರದ್ದಾಗಿದೆ. ‘ಸಕಾಲಿಕವಾಗಿದೆ. ಯಾರಾದರೂ ನೀವು ದಪ್ಪಗಿದ್ದೀರಿ ಅಥವಾ ತೂಕ ಹೆಚ್ಚಿಸಿಕೊಂಡಿದ್ದೀರಿ ಎಂದು ಹೇಳಿದಾಗ ನಾವು ಸುಮ್ಮನಿದ್ದು ನಗೆಯಾಡಬೇಕು ಎಂದು ಜನ ಬಯಸುತ್ತಾರೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಆದ್ರೆ, ಇನ್ನು ಕೆಲವರು ಮಹಿಳೆಯ ಈ ಹಾಡಿನ ಬಗ್ಗೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ‘ಬೊಜ್ಜನ್ನು ವೈಭವೀಕರಿಸುವುದನ್ನು ನಿಲ್ಲಿಸಿ’ ಎಂದು ಒಬ್ಬರು ಹೇಳಿದ್ದರೆ, ‘ದಪ್ಪವಾಗಿರುವುದನ್ನು ವೈಭವಿಕರಿಸಬೇಡಿ.. ಇದು ಆರೋಗ್ಯಕರವಲ್ಲ..’ ಎಂದು ಇನ್ನೊಬ್ಬರು ತಮ್ಮ ಆಕ್ಷೇಪವನ್ನು ಕಮೆಂಟ ಮೂಲಕ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಪ್ರಾರಂಭದಲ್ಲಿ, ತನ್ನ ಬಟ್ಟೆಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಟಿವಿ ನಿರೂಪಕಿಯೊಬ್ಬರು ಸರಿಯಾದ ತಿರುಗೇಟು ನೀಡುವ ಮೂಲಕ ಟ್ರೋಲರ್ ಗಳ ಬಾಯಿ ಮುಚ್ಚಿಸಿದ್ದ ಘಟನೆ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಗರ ಪ್ರಶಂಸೆಗೆ ಪಾತ್ರವಾಗಿತ್ತು.