Vikram Joshi Column: ಯಾವ ವಿಮಾನ ಹತ್ತಿದರೂ ಇವರಿಬ್ಬರಿಗೇ ಲಾಭ !

ಮನುಷ್ಯನ ಜೀವನಮಟ್ಟದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ಆ ದೇಶದ ಬಾಹ್ಯಾಕಾಶ ಸಂಶೋಧನೆ ಮತ್ತು ವಿಮಾನಗಳ ಲೆಕ್ಕದಲ್ಲಿ ಅಳೆಯುವುದುಂಟು. ಇಂದು ಮನುಷ್ಯನ

Profile Ashok Nayak December 29, 2024
ವಿಕ್ರಮ ಜೋಶಿ
ಇಂದು ವಿಮಾನಯಾನ ಸಾರ್ವತ್ರಿಕ. ಜನಸಾಮಾನ್ಯರೂ ವಿಮಾನದಲ್ಲಿ ಪಯಣಿಸುವ ಕ್ರಾಂತಿ ನಡೆದದ್ದು ಇಪ್ಪತ್ತೊಂದನೆಯ ಶತಮಾನದಲ್ಲಿ. ನಮ್ಮ ದೇಶದ ಬಹಳಷ್ಟು ಜನರು, ದೇಶದ ಒಳಗೂ, ಹೊರದೇಶಕ್ಕೂವಿಮಾಯಯಾನ ಮಾಡುತ್ತಿದ್ದಾರೆ. ಇಲ್ಲೊಂದು ಸ್ವಾರಸ್ಯವಿದೆ. ಪ್ರಯಾಣಿಕರು ಹಾರಿ ಹೋಗಬಲ್ಲ ಯಾವುದೇ ವಿಮಾನದಲ್ಲಿ ಪಯಣಿಸಿದರೂ, ಕೇವಲ ಎರಡೇ ಎರಡು ಸಂಸ್ಥೆಗಳಿಗೆ ಪರೋಕ್ಷ ಲಾಭ; ಏಕೆಂದರೆ, ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯಾಣಿಕ ವಿಮಾನಗಳನ್ನು ತಯಾರಿಸುವ ಕಂಪೆನಿಗಳು ಕೇವಲ ಎರಡು!
ನೂರು ವರ್ಷಗಳ ಹಿಂದಿನ ಮಾತಿದು. ಆಗ ಅಮೆರಿಕದವರ ತುಕಡಿಯಲ್ಲಿ ಕೇವಲ 23 ಯುದ್ಧ ವಿಮಾನಗಳಿದ್ದವು. ಅದೇ ಯುರೋಪಿನ ದೇಶಗಳಾದ ಪ್ರಾನ್ಸ್, ಜರ್ಮನಿ ಹಾಗೂ ಬ್ರಿಟನ್‌ಗಳ ಪಾಳಯದಲ್ಲಿ ಎರಡು ಸಾವಿರಕ್ಕೂ ಹೆಚ್ಚುಯುದ್ಧವಿಮಾನಗಳು. ಇವತ್ತು ಅದೇ ಕಾಲವು ಹೇಗೆ ಮಗುಚಿ ಬಿದ್ದಿದೆ ನೋಡಿ! ಇಂದು ಇಡೀ ಯುರೋಪಿಯನ್ ದೇಶಗಳ ಸೈನ್ಯಗಳಲ್ಲಿ ಇರುವುದಕ್ಕಿಂತ ಹೆಚ್ಚು ಯುದ್ಧ ವಿಮಾನಗಳು ಅಮೆರಿಕದ ಅಧೀನದಲ್ಲಿವೆ.
ಮನುಷ್ಯನ ಜೀವನಮಟ್ಟದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ಆ ದೇಶದ ಬಾಹ್ಯಾಕಾಶ ಸಂಶೋಧನೆ ಮತ್ತು ವಿಮಾನಗಳ ಲೆಕ್ಕದಲ್ಲಿ ಅಳೆಯುವುದುಂಟು. ಇಂದು ಮನುಷ್ಯನ ಜೀವನಮಟ್ಟದಲ್ಲಿ, ದೇಶದ ಅಭಿವೃದ್ಧಿ ಯಲ್ಲಿ, ಅಂತರಿಕ್ಷಯಾನದಲ್ಲಿ, ವಿಮಾನದ ಅಂಕೆ ಸಂಖ್ಯೆಯಲ್ಲಿ ಎಲ್ಲದರಲ್ಲೂ ಅಮೆರಿಕದ ಒಂದು ಹತ್ತು ಹೆಜ್ಜೆ ಮುಂದೆಯೇ ಇದೆ. ಸಮಕಾಲೀನವಾಗಿ ಅಮೆರಿಕದ ಮುಕುಟದ ರತ್ನಗಳಾಗಿ ನಾಸಾ, ಎನ್ವಿಡಿಯಾ, ಮೈಕ್ರೋಸಾಫ್ಟ್, ಗೂಗಲ್, ಅದು, ಇದು ಅಂತ ನೂರು ಕಂಪನಿಗಳಿವೆ. ಮೊದಲೋ ಬೋಯಿಂಗ್ ತರಹದ ಒಂದೋ ಎರಡೋ ರತ್ನಗಳು ಮಾತ್ರ ಅದರ ಕಿರೀಟದಲ್ಲಿತ್ತು!
ಅಮೆರಿಕವು‌ ವೈಮಾನಿಕ ಕ್ಷೇತ್ರದಲ್ಲಿ ಜಗತ್ತಿನ ಸೂಪರ್ ಪವರ್ ಆಗುವುದಕ್ಕೆ ಮುಖ್ಯ ಕಾರಣ ಬೋಯಿಂಗ್ ಎನ್ನುವ ವಿಮಾನ ತಯಾರಿಕೆಯ ಕಂಪನಿ. 1916ರಲ್ಲಿ ಶುರುವಾದ ಈ ಕಂಪನಿ ೧೯೬೦ರೊಳಗೆ ಜಗತ್ತಿನ ಅತೀ ದೊಡ್ಡ ವಿಮಾನ ವ್ಯಾಪಾರದ ಕಂಪನಿಯಾಗಿ ಬೆಳೆದು ನಿಂತಿತ್ತು. ಆ ಸಮಯದಲ್ಲಿ ನಾಸಾದ ಪ್ರಮುಖವಾದ ಯೋಜನೆಗಳಿಗೆ ಬೇಕಾದ ರಾಕೆಟ್‌ಗಳನ್ನು ತಯಾರಿಸಿದ್ದೂ ಇದೇ ಕಂಪನಿ. ಮನುಜನು ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟಿದ್ದು ಕೂಡ ಈ ಬೋಯಿಂಗ್ ಕಂಪನಿಯು ವಿನ್ಯಾಸಗೊಳಿಸಿದ ರಾಕೆಟ್ ಮೂಲಕವೇ! ಯುದ್ಧ ವಿಮಾನ, ರಾಕೆಟ್ ಅಷ್ಟೇ ಅಲ್ಲ ಪ್ರಯಾಣಿಕ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಕೂಡ ಅದು ತಯಾರಿಸುತ್ತದೆ. ವಿಮಾನತಯಾರಿಕೆಯ ರಂಗದಲ್ಲಿ ಬೋಯಿಂಗ್ ಕಂಪನಿಯ ಭಾಯಿಗಿರಿಯನ್ನು ತಡೆಯಲು ಯುರೋಪಿಯನ್ ದೇಶಗಳ ಒಕ್ಕೂಟವು ಸಿದ್ಧಪಡಿಸಿದ ಇನ್ನೊಂದು ಪ್ರತಿಸ್ಪರ್ಧಿ ಏರ್‌ಬಸ್. ಇವತ್ತು ಜಗತ್ತಿನ ಅತೀ ದೊಡ್ಡ ವಿಮಾನ ಕಂಪನಿಗಳಲ್ಲಿ ಇವೆರಡೂ ಮೊದಲ ಸ್ಥಾನದಲ್ಲೇ ಬರುತ್ತವೆ!
ಇಬ್ಬರಿಗೂ ಪೈಪೋಟಿಈಗ ಬೋಯಿಂಗ್ ಕಂಪನಿಯು ಜಗತ್ತಿನ ಅತೀ ದೊಡ್ಡ ಪ್ರಯಾಣಿಕ ವಿಮಾನ ತಯಾರಿಕೆಯ ಕಂಪನಿ. ಇದಕ್ಕೆ ಹೋಲಿಸಿದರೆ ಏರ್‌ಬಸ್ ಏನು ಕಡಿಮೆಯಲ್ಲ; ವಿಮಾನವನ್ನು ಸರಬರಾಜು ಮಾಡುವಲ್ಲಿ ಅದರದ್ದೇ ಎತ್ತಿದ ಕೈ. ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟುಕೊಂಡು ಪೈಪೋಟಿಯಲ್ಲಿದ್ದಾರೆ. ಇಬ್ಬರ ಬೊಕ್ಕಸದಲ್ಲೂ ಆರ್ಡರ್‌ಗಳಿಗೇನು ಕಡಿಮೆಯಿಲ್ಲ. ಆದರೆ ಬೇಡಿಕೆಗೆ ತಕ್ಕ ವೇಗದಲ್ಲಿ ವಿಮಾನವನ್ನು ತಯಾರಿಸಲು ಇವರಿಬ್ಬರೂ ಹಿಂದೆ ಬಿದ್ದಿದ್ದಾರೆ. ಬೋಯಿಂಗ್ ಕಂಪನಿಯದ್ದಂತೂ ದಿನಬೆಳಗಾದರೆ ಒಂದಲ್ಲಾ ಇನ್ನೊಂದು ಸಮಸ್ಯೆ. ಏರ್ ಬಸ್‌ನ ಪರಿಸ್ಥಿತಿ ಕೊಂಚ ಒಳಿತಾಗಿದ್ದರೂ ಕೂಡ ಅದೂ ಬಿಡಿಭಾಗಗಳ ಸರಬರಾಜಿಲ್ಲದೆ ಒದ್ದಾಡುತ್ತಿದೆ. ವಿಮಾನಯಾನದ ಕ್ಷೇತ್ರದಲ್ಲಿ ನೂರಾರು ಕಂಪನಿಗಳಿರಬಹುದು, ಅತ್ಯಂತ ಬಿರುಸಿನ ಸ್ಪರ್ಧೆಯಿರಬಹುದು. ಆದರೆ ವಿಮಾನ ತಯಾರಿಕೆಯಲ್ಲಿ ಮಾತ್ರ ಈ ಇಬ್ಬರದ್ದೇ ದರ್ಬಾರು!
ಅವರು ಮಾಡಿಕೊಟ್ಟಾಗ ಗ್ರಾಹಕರು ವಿಮಾನವನ್ನು ತಗೆದುಕೊಳ್ಳಬೇಕು. ಇದನ್ನೇ ಏಕಸ್ವಾಮ್ಯತೆ ಎನ್ನುವುದು. ನೆನಪಿರಲಿ, ನಾವು ಈ ಪ್ರಥ್ವಿಯಲ್ಲಿ ಯಾವುದೇ ಪ್ರಯಾಣಿಕ ವಿಮಾನವನ್ನು ಹತ್ತಿದರೂ ಕೂಡ ಅದು ಒಂದೇಅಮೆರಿಕ ಇಲ್ಲವೇ ಪ್ರಾನ್ಸ್ ದೇಶದಲ್ಲಿ ತಯಾರಾಗಿದ್ದು. ವಿಮಾನಯಾನಕ್ಕೆ ನಾವು ತೆರುವ ಹಣದ ಕಿಂಚಿತ್ತು ಪಾಲು ಈ ಎರಡು ಕಂಪನಿಗಳಿಗೇ ತಲುಪುತ್ತದೆ ಎನ್ನಬಹುದು. ಏಕೆಂದರೆ ಇವೆರಡು ದೇಶದ ಈ ಎರಡು ಕಂಪೆನಿಗಳನ್ನು ಬಿಟ್ಟರೆ ಬೇರೆ ಯಾವ ದೇಶವೂ ಪ್ರಯಾಣಿಕ ವಿಮಾನಗಳನ್ನು ತಯಾರಿಸುವುದಿಲ್ಲ ಇಲ್ಲ ಎನ್ನಬಹುದು. ಎಲ್ಲೋ ಒಂದೆರಡು ಸಣ್ಣ ಪುಟ್ಟ ಗಾತ್ರದ ವಿಮಾನಗಳನ್ನು ಕೆಲವೊಂದು ಕಂಪನಿಗಳು ತಯಾರಿಸುತ್ತವೆ. ಆದರೆ ಅದರ ಷೇರು ನಗಣ್ಯ. ಕೆಲವು ವರ್ಷಗಳ ಹಿಂದೆ ಚೀನಾದ ಒಂದು ಕಂಪನಿಯು ತನ್ನದೇ ಸ್ವಂತ ಪರಿಶ್ರಮದಿಂದ ಪ್ರಯಾಣಿಕ ವಿಮಾನವನ್ನು ತಯಾರಿಸಿ ಪ್ರಯೋಗ ನಡೆಸುತ್ತಿದೆ. ಆದರೆ ಅದು ಬೋಯಿಂಗ್ ಹಾಗೂ ಏರ್‌ಬಸ್ ಜೊತೆಕುಸ್ತಿಗಿಳಿಯಲು ಇನ್ನೂ ಒಂದು ದಶಕವು ಬೇಕಾದೀತು. ಭಾರತವೂ ಈ ನಿಟ್ಟಿನಲ್ಲಿ ಅಂಬೆಗಾಲನಿಡುತ್ತಿದೆ!
ಅದೇನೇ ಇದ್ದರೂ ಈ ಜಗತ್ತಿಗೆ ವಿಮಾನ ಸರಬರಾಜು ಮಾಡುವವರು ಹಾಲಿಯಲ್ಲಿ ಇಬ್ಬರೇ. ನಾವು ಯಾವುದೇಏರ್ಲೈನ್ಸ್ ಬಳಸಿದರೂ ಅದಲ್ಲಿಷ್ಟು ಭಾಗ ಲಾಭವು ಬೋಯಿಂಗ್ ಅಥವಾ ಏರ್‌ಬಸ್‌ಗೆ ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಉಳಿದ ದೇಶಗಳು ವಿಮಾನ ತಯಾರಿಕೆಯ ಸಾಮರ್ಥ್ಯವನ್ನು ಯಾಕೆ ಹೊಂದಿಲ್ಲ? ಎನ್ನುವ ಪ್ರಶ್ನೆ ಮೂಡಬಹುದು. ಕಳೆದ ನೂರು ವರ್ಷಗಳಲ್ಲಿ ಅರ್ಧ ಭಾಗ ಅಮೆರಿಕ ಹಾಗೂ ಯುರೋಪಿಯನ್ ದೇಶಗಳನ್ನು ಬಿಟ್ಟರೆ ಬಹುತೇಕ ರಾಷ್ಟ್ರಗಳು ಗುಲಾಮಿಗಿರಿಯಲ್ಲೇ ಕಳೆದವು. ಸ್ವಾತಂತ್ರ್ಯ ಸಿಕ್ಕನಂತರ ಅವರಿಗೆ ವಸತಿ, ಆಹಾರ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದೇ ಮುಖ್ಯವೆನಿಸಿತು ವಿನಾ ವಿಮಾನ ತಯಾರಿಕೆಯಲ್ಲ. ವಿಮಾನತಯಾರಿಕೆಯು ಅತ್ಯಾಧುನಿಕ ತಂತ್ರಜ್ಞಾನದ ರಂಗ, ಅದರಲ್ಲಿ ಹೂಡಿಕೆಯು ಅತಿ ಹೆಚ್ಚು. ಮುಂದಿನ ನೂರು ವರ್ಷಗಳ ದೃಷ್ಟಿಕೋನವನ್ನು ಇಟ್ಟುಕೊಂಡು ಅದರ ಬೆಳವಣಿಗೆಗೆ ಕೈ ಹಾಕಬೇಕಾಗುತ್ತದೆ. ಹೀಗಾಗಿ ಯಾರೂ ಆ ಕಡೆ ನುಸುಳಲಿಲ್ಲ.
ಇನ್ನೊಂದು ಗಂಭೀರವಾದ ವಿಷಯವೆಂದರೆ ಅಮೆರಿಕ ಹಾಗೂ ಯುರೋಪ್ ದೇಶಗಳು ವಿಮಾನ ತಯಾರಿಕೆಯ ಕುರಿತಾದ ರಹಸ್ಯಗಳನ್ನು ಎಲ್ಲರಿಗೂ ಬಿಟ್ಟುಕೊಡಲಿಲ್ಲ. ಹಾಗೆಯೇ ಅಲ್ಲಿ ಬೇಕಾದ ವಿನ್ಯಾಸದ ಪರಿಭಾಷೆಗಳನ್ನು ಕೂಡ ತಮಗೆ ಪೂರಕವಾಗುವಂತೆ ಇಟ್ಟುಕೊಂಡಿದ್ದಾರೆ. ಇವೆಲ್ಲ ಕಾರಣಗಳಿಂದ ಇಂದು ನಾವು ಹತ್ತುವ ವಿಮಾನ ಗಳು ಕೇವಲ ಎರಡೇ ರಾಷ್ಟ್ರಗಳಲ್ಲಿ ತಯಾರಾಗಿರುವಂತಹದ್ದು!
ನಮ್ಮ ದೇಶ ಬಹು ದೊಡ್ಡ ಗ್ರಾಹಕಇವತ್ತಿನ ಮಟ್ಟಿಗೆ ಬೋಯಿಂಗ್ ಕಂಪನಿಯ ಹತ್ತಿರ ಸುಮಾರು 5700 ವಿಮಾನಗಳ ಮತ್ತು ಏರ್‌ಬಸ್‌ಗೆ ಅಜಮಾಸು ೮೫೦೦ ಕ್ಕೂ ಹೆಚ್ಚು ವಿಮಾನಗಳ ಆರ್ಡರ್‌ಗಳು ಸಿಕ್ಕಿವೆ. ಒಂದು ವಿಮಾನದ ಬೆಲೆ ಸರಾಸರಿ ನೂರು ಮಿಲಿಯನ್ ಡಾಲರ್ ಅಂದುಕೊಂಡರೂ ಒಟ್ಟೂ ವಹಿವಾಟಿನ ಮೌಲ್ಯ ಒಂದು ಟ್ರಿಲಿಯನ್ ಡಾಲರ್‌ಗಳಷ್ಟು! ಅದರ ನಂತರ ಆ ವಿಮಾನಗಳ ದೇಖರೇಕೆ ಮಾಡುವುದು, ತರಬೇತಿ, ಅದು, ಇದು ಅಂತ ಇನ್ನಷ್ಟು ವ್ಯಾಪಾರ. ಇವೆಲ್ಲವೂ ಎರಡೇ ದೇಶದ ಕೈಯಲ್ಲಿದೆಯಲ್ಲ! ಭಾರತದ ಏರ್ಲೈನ್ಸ್ ಕಂಪನಿಗಳದ್ದೇ ಸಾವಿರಕ್ಕೂ ಹೆಚ್ಚು ವಿಮಾನಗಳ ಆರ್ಡರ್ ಇದೆ. ಭಾರತಕ್ಕೆ ಎಂತಹ ನಷ್ಟ! ಆಗಿದ್ದು ಆಗಿ ಹೋಯಿತು, ಮಿಂಚಿದ ಕಾಲಕ್ಕೆ ತುಂಬಾ ಚಿಂತಿಸಿ ಫಲವಿಲ್ಲ. ಇವತ್ತಿನದು ತಂತ್ರಜ್ಞಾನ ಲೋಕ, ಭವಿಷ್ಯದಲ್ಲಿ ಭಾರತದ ಪರಿಸ್ಥಿತಿ ಮತ್ತೆ ಹೀಗಾಗಬಾರದು.
ವಿಶೇಷವಾಗಿ ಸೃಷ್ಟಿಶೀಲ ಕೃತಕ ಬುದ್ಧಿಮತ್ತೆಯ ಯುಗದಲ್ಲಂತೂ ಭಾರತವು ಮುಂಚೂಣಿಯಲ್ಲಿರಬೇಕು. ಹಾಗೆಯೇ ಆಗಿತ್ತಿದೆ. ನಾವು, ನೂರಾ ನಲವತ್ತು ಕೋಟಿ ಜನರು ಸೇರಿ, ಜಗತ್ತಿನ ಕೃತಕ ಬುದ್ಧಿಮತ್ತೆಯ ರಥವನ್ನು ಎಳೆಯು ತ್ತಿದ್ದೇವೆ!
ನಮ್ಮ ದೇಶದ ಎ ಐಇವತ್ತು ಏರ್‌ಇಂಡಿಯಾದ ಏಐಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಏರ್ ಇಂಡಿಯಾದ ಏಐ.ಜಿ ಎನ್ನುವುದು ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವ ಒಂದು ಚಾಟ್‌ಬಾಟ್. ೨೦೨೩ರಲ್ಲಿ ಬಿಡುಗಡೆಯಾದ ಈ ಸೃಷ್ಟಿಶೀಲ ಕೃತಕ ಬುದ್ಧಿಮತ್ತೆಯ ಮೇಲೆ ತಯಾರಾದ ಚಾಟ್‌ಬಾಟ್ ಇಲ್ಲಿಯ ತನಕ ಸುಮಾರು ನಾಲ್ಕು ಕೋಟಿ ಗ್ರಾಹಕರ ಸವಾಲುಗಳನ್ನು ಸ್ವೀಕರಿಸಿ ಅದಕ್ಕೆ ಉತ್ತರಿಸಿದೆ. ಪ್ರತಿದಿನವೂ ಸುಮಾರು ಮೂವತ್ತು ಸಾವಿರ ಗ್ರಾಹಕರ ಪ್ರಶ್ನೆಗಳನ್ನು ಇದು ಬಗೆಹರಿಸುತ್ತದೆ. ಏರ್‌ಇಂಡಿಯಾದ 97% ಗೂ ಹೆಚ್ಚು ಗ್ರಾಹಕರ ಸಮಸ್ಯೆಗಳು ಯಾವುದೇ ಗ್ರಾಹಕ ಪ್ರತಿನಿಽಗಳ ಸಹಾಯವಿಲ್ಲದೇ ಕೇವಲ ಏಐ.ಜಿಯ ಮೂಲಕ ಬಗೆಹರಿಯುತ್ತವೆ. ಇಂತಹ ಒಂದು ಅದ್ಭುತ ತಂತ್ರಜ್ಞಾನ ವನ್ನುಸೃಷ್ಟಿಸುವುದು ಸುಲಭವಲ್ಲ. ಈ ಸೇವೆಗೆ ಮನಸೋತು ಜಗತ್ತಿನ ಪ್ರಮುಖ ಏರ್ಲೈನ್ಸ್ ಗಳು ಒಂದೇ ಸವನೆ ತಮಗೂ ಒದಗಿಸಿಕೊಡಬೇಕೆಂದು ಬೇಡಿಕೆಯಿಟ್ಟಿವೆ. ಮುಂದೆ ಏರ್‌ಇಂಡಿಯಾವು ವಿಮಾನಯಾನ ಕ್ಷೇತ್ರದಗ್ರಾಹಕರ ಸೇವೆಯಲ್ಲಿ ಬಳಸಬಹುದಾದ ಜಗತ್ತಿನ ಅತೀ ದೊಡ್ಡ ಚಾಟ್ ಬಾಟ್ ಸೇವೆಯನ್ನು ನೀಡುವ ಸಾಧ್ಯತೆ ಯಿದೆ. ಆಗ ನಾವು ಜಗತ್ತಿನ ಯಾವುದೇ ಏರ್ ಲೈನ್ಸ್ ಆಗಿರಲಿ ಅದರಲ್ಲಿ ಬಳಸುವ ಏಐ ಭಾರತದ್ದು ಎಂದು ಹೆಮ್ಮೆ ಪಡಬಹುದು!
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ