Saturday, 7th September 2024

ಉಪವಾಸವೇ ಮಧುಮೇಹ ಉಪಶಮನದ ಮಾರ್ಗ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 65

ಕ್ಲಬ್‌ಹೌಸ್‌ನ ನಾನು ಡಯಾಬಿಟೀಸ್ ಗೆದ್ದೆ ಸಂವಾದದಲ್ಲಿ ಡಾ. ಭುಜಂಗಶೆಟ್ಟಿ ಹೇಳಿಕೆ

ಬೆಂಗಳೂರು : ಸಾಧ್ಯವಾದಷ್ಟು ಉಪವಾಸ ಮಾಡುವುದು, ಕಾರ್ಬೋಹೈಡ್ರೇಟ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಮಧುಮೇಹದಿಂದ ಸಂಪೂರ್ಣವಾಗಿ ಹೊರಬರಹುದು ಎಂದು ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನ ‘ನಾನು ಮಧುಮೇಹ ಗೆದ್ದೆ’ ಎಂಬ ವಿಷಯದ ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಮೇಹ ನಿಯಂತ್ರಣಕ್ಕೆ ಉಪವಾಸ ಮಾಡು ವುದು ಒಳ್ಳೆಯದು. ಹಿಂದಿನವರು ಹೇಳಿದಂತೆ ಒಮ್ಮೆ ತಿಂದವ ಯೋಗಿ, ಎರಡು ಸಲ ತಿಂದವ ಭೋಗಿ, ಮೂರು ಸಲ ತಿಂದವ ರೋಗಿ, ನಾಲ್ಕು ಸಲ ತಿಂದವನ ಹೊತ್ಕೊಂಡು ಹೋಗಿ ಎಂಬ ಮಾತು ಬಹಳ ನಿಜ. ಹಿಂದಿನವರು ಎರಡು ಅಥವಾ ಮೂರು ಬಾರಿ ಊಟ ಮಾಡುತ್ತಿದ್ದರು. ಆದರೆ, ಈಗಿನ ಕಾಲಘಟ್ಟದಲ್ಲಿ ದಿನಕ್ಕೆ ಮೂರು ಊಟ, ಮೂರು ಸಲ ಸ್ನ್ಯಾಕ್ಸ್ ತೆಗೆದುಕೊಳ್ಳುವ ಕಾರಣ ದಿಂದ ನಮಗೆ ಮಧುಮೇಹದ ಸಮಸ್ಯೆ ಜಾಸ್ತಿಯಾಗು ತ್ತಿದೆ.

ಇದಕ್ಕಾಗಿ ನಾನು ರಾತ್ರಿ ಸಂಜೆ ೬ ಗಂಟೆಗೆ ಊಟ ಮಾಡಿದರೆ, ಬೆಳಗ್ಗೆ ಎಂಟು ಗಂಟೆಗೆ ತಿಂಡಿ ತಿನ್ನುತ್ತೇನೆ. ಅಲ್ಲಿವರೆಗೆ ಯಾವುದೇ ಆಹಾರ ಮುಟ್ಟುವುದಿಲ್ಲ. ಆಗ ನನಗೆ ೧೪ ಗಂಟೆ ಅವಕಾಶ ಸಿಗುತ್ತದೆ. ಇದರಿಂದ ನನ್ನ ಮಧುಮೇಹದ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆ. ೩೦-೪೦ ನಿಮಿಷ ವ್ಯಾಯಾಮ ಮಾಡಬೇಕು. ಜತೆಗೆ ಆರೋಗ್ಯಕರವಾದ ಫ್ಯಾಟ್ ಅಂಶವೂ ಕೂಡ ಉತ್ತಮವಾದುದು ಎಂದು ತಿಳಿಸಿದರು.

*ಬೆಲ್ಲಿ ಫ್ಯಾಟ್ ಬಂದರೆ ಡಯಾಬಿಟೀಸ್‌ಗೆ ಹತ್ತಿರದಲ್ಲಿದ್ದೇವೆ ಎಂದರ್ಥ.

*ಹೆಲ್ತಿ ಫ್ಯಾಟ್ಸ್ ಬಳಕೆ ಮಾಡುವುದು ಒಳ್ಳೆಯದು.

*ಬಟರ್ ಫ್ರೂಟ್ ಬಹಳ ಒಳ್ಳೆಯದು.

*ಸಕ್ಕರೆ ತಿನ್ನುವುದು ಕಡಿಮೆ ಮಾಡಬೇಕು.

*ಹಣ್ಣುಗಳು ಕೂಡ ಅಷ್ಟೇ ಅಪಾಯಕಾರಿ.

*ಐದು ಲೀಟರ್ ರಕ್ತದಲ್ಲಿ ೫ ಗ್ರಾಂ ಶುಗರ್ ಇರುತ್ತದೆ.

*ಒಂದು ಬಾಳೆಹಣ್ಣಿನಲ್ಲಿ ೧೦ ಗ್ರಾಂ ಶುಗರ್ ಇರುತ್ತದೆ.

*ದಿನಕ್ಕೆ ೨೦೦ ಜನಕ್ಕೆ ಮಧುಮೇಹದಿಂದ ಕಣ್ಣಿನ ಸಮಸ್ಯೆ

ಬಳಸಬಹುದಾದ ಆಹಾರ
*ಮಾಂಸ, ಮೀನು ನಿಯಮಿತವಾಗಿ ತಿನ್ನಬಹುದು
*ನೆಲದ ಮೇಲೆ ಬೆಳೆಯುವ ಎಲ್ಲ ತರಕಾರಿ ತಿನ್ನಬಹುದು
*ತೆಂಗಿನಕಾಯಿ, ಆಲಿವ್ ಆಯಿಲ್ ಗಳಲ್ಲಿ ಬಳಸಬಹುದು
*ನಟ್ಸ್ ತೆಗೆದುಕೊಳ್ಳಬಹುದು
*ಕಾಲಿಫ್ಲವರ್ ಪಲ್ಯ ಮಾಡಿಕೊಂಡು ತಿನ್ನಬಹುದು.

***

ಕ್ಲಬ್‌ ಹೌಸ್ ಕೇಳುಗರಿಗೆ ವಿಶ್ವವಾಣಿ ಬಂಪರ್ ಆಫರ್
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪ್ರತಿ ಭಾನುವಾರ ಕೇಳುಗರಿಗೆ ಮೂರು ನಿಮಿಷ ಮಾತನಾಡಲು ಅವಕಾಶ ನೀಡಲಾಗುತ್ತದೆ. ಚೆನ್ನಾಗಿ ಮಾತಾಡುವವರನ್ನು ಆಯ್ಕೆ
ಮಾಡಿ ಮೂರು ಬಹುಮಾನ ನೀಡಲಾಗುತ್ತದೆ. ಮೊದಲ ಸ್ಥಾನ ಪಡೆದವರಿಗೆ ಮೂರು ತಿಂಗಳು ವಿಶ್ವವಾಣಿ ಪತ್ರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಎರಡನೇ ಸ್ಥಾನ ಪಡೆದವರಿಗೆ ಎರಡು ತಿಂಗಳ ಪತ್ರಿಕೆ ಉಚಿತವಾಗಿ ಸಿಗಲಿದೆ. ಮೂರನೇ ಸ್ಥಾನ ಪಡೆದವರಿಗೆ ಒಂದು ತಿಂಗಳ ಪತ್ರಿಕೆ ಉಚಿತವಾಗಿ ಸಿಗಲಿದೆ.
ತೀರ್ಪುಗಾರರ ಮೆಚ್ಚುಗೆ ಗಳಿಸಿದವರಿಗೆ ಒಂದು ನಿರ್ದಿಷ್ಟ ಬೆಲೆಯ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ. ಆ ಮೂಲಕ ಮಾತನಾಡುವ ಪ್ರತಿಭೆಗಳನ್ನು
ಗುರುತಿಸುವುದು ಮತ್ತು ಕೇಳುಗರನ್ನು ಓದುಗರನ್ನಾಗಿ ಮಾಡುವುದು, ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಲು ತೀರ್ಮಾನಿಸಲಾಗಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!