Thursday, 12th December 2024

ನಾನು ಎಂಬುದು ಅಹಂಕಾರ, ನನ್ನದು ಎಂಬುದು ಮಮಕಾರ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 66

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತಾ ಶಿವಮಯಿ ಸಂದೇಶ

ಬೆಂಗಳೂರು: ನಮ್ಮೊಳಗಿನ ಅನಂತ ಶಕ್ತಿ ಸೀಮಿತವಾಗಿದೆ ಎಂದು ಭಾವಿಸಿದ್ದೇವೆ. ಬ್ರಹ್ಮತ್ವ ನಮ್ಮೊಳಗಿದೆ. ಒಳಗಿನ ದೇಹ ನಾವು ಎಂದು ಭಾವಿಸಿ ಸೀಮಿತ ವಾಗಿಸುವುದು ಅಹಂ ಎಂದರ್ಥ. ಎಲ್ಲವೂ ನನ್ನದೆ ಎನ್ನುವುದು ತಪ್ಪು. ನಾನು ಎಂಬುದು ಅಹಂಕಾರ, ನನ್ನದು ಎಂಬುದು ಮಮಕಾರ. ನನಗೆ ಅನಂತ ಶಕ್ತಿ, ಜ್ಞಾನ ಬೇಕು ಎಂದರೆ ಹೊರಗಡೆ ಹುಡುಕಬೇಕು ಎಂದು ಗೋಕಾಕದ ಶಾರದಾ ಶಕ್ತಿ ಪೀಠದ ಮಾತಾ ಶಿವಮಯಿ ಸಂದೇಶ ನೀಡಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕ್ಷುದ್ರ ಮನಸು ಹೋಗ ಲಾಡಿಸಿ ಉದಾರವಾದಿಯಾಗಲು ಹಲವು ವರ್ಷಗಳು ತೆಗೆದುಕೊಳ್ಳುತ್ತದೆ. ಉದಾರ ಚರಿತ್ರೆಯವರಂತಾಗಲು ೧೭ ಶ್ಲೋಕಗಳು ಭಗವದ್ಗೀತೆಯಲ್ಲಿ ಇವೆ. ಇಡೀ ವಿಶ್ವವೇ ಕುಟುಂಬ ಎಂದು ಭಾವಿಸಿದರೆ ವಿಶ್ವದಲ್ಲಿ ಏನೇ ಕಷ್ಟ ಬಂದರೂ ಹೆಚ್ಚುಗಾರಿಕೆ ಎನೂ ಇಲ್ಲ ಅನಿಸುತ್ತದೆ. ನನ್ನ ಸಾಮರ್ಥ್ಯ ಎಷ್ಟಿದೆ, ಅದಕ್ಕೆ ಸರಿಯಾಗಿ ಹೇಗೆ ಸ್ಪಂದಿಸಬೇಕು ಎಂದು ರಕ್ತಗತವಾಗಿ ಬರುತ್ತದೆ. ಸಮಾಜಮುಖಿ ಕಾರ್ಯಗಳು ಶುರುವಾ ಗುತ್ತವೆ. ಮನುಷ್ಯನ ಜೀವನದ ಉದ್ದೇಶ ಕ್ಷುದ್ರ ಮನಸ್ಸಿನಿಂದ ಉದಾರತನವಾಗುವುದು ಎಂದರ್ಥ ಎಂದು ಅಭಿಪ್ರಾಯಪಟ್ಟರು.

ಒಳಗಿರುವ ಬ್ರಹ್ಮ ಹೊರಬಂದ. ಇದು ಸಮಷ್ಟಿ ರೂಪದಲ್ಲಿ ಅರ್ಥ ಮಾಡಿಕೊಳ್ಳುವುದಲ್ಲ. ಇದು ವ್ಯಷ್ಟಿ ರೂಪದಲ್ಲಿ ಅರ್ಥ ಮಾಡಿಕೊಳ್ಳಬೇಕು. ತಾಯಿಯ ಹೊಟ್ಟೆಯಲ್ಲೂ ಇದೇ ಪ್ರಕ್ರಿಯೆ ಮುಂದುವರಿಯುತ್ತದೆ. ಎಂಬ್ರಿಯೊದಲ್ಲಿ ಜೀವಕೋಶ ಇದೆ. ಅದರಲ್ಲಿ ಡಿಎನ್‌ಎ ಇದೆ. ಡಿಎನ್‌ಎದಲ್ಲಿ ಅನಂತ ಜೀವಕೋಶ ಇರುತ್ತದೆ. ಎಂಬ್ರಿಯೋದಲ್ಲಿ ಇದ್ದ ಡಿಎನ್‌ಎ, ಪೂರ್ಣ ಬೆಳೆದ ಮಗುವಿನ ಅನಂತ ಕೋಶ, ಡಿಎನ್‌ಎಗೆ ವ್ಯತ್ಯಾಸವಿಲ್ಲ. ಜೀವಕೋಶದಲ್ಲಿ ಡಿಎನ್‌ಎ ಹೇಗಿದೆಯೊ ಬ್ರಹ್ಮದ ಅಂಡದಲ್ಲಿರುವ ಬ್ರಹ್ಮನೂ ಡಿಎನ್‌ಎ. ಸೃಷ್ಟಿಯ ಪ್ರತಿಯೊಂದರಲ್ಲೂ ಬ್ರಹ್ಮವೇ.

ಭ್ರೂಣದಿಂದ ರೂಪುಗೊಂಡ ಮಗು ತಾಯಿಯ ಹೊಟ್ಟೆಯಿಂದ ಹೊರಬಂದಾಗ ಮಗುವಿನ ರೂಪ ನೋಡಬಹುದು. ವಿಜ್ಞಾನ ಕಂಡು ಹಿಡಿಯುತ್ತಿರುವುದು ಬ್ರಹ್ಮವೇ.
ಭೂಮಿ, ಸೌರಮಂಡಲ, ಗ್ಯಾಲಕ್ಸಿ ಒಂದೇ, ಮಗುವಿನ ರೂಪ ಒಬ್ಬನೇ ಬ್ರಹ್ಮ ಎಂದರು. ಎಲ್ಲವೂ ಕೂಡ ಬ್ರಹ್ಮವೇ, ಸೃಷ್ಟಿಯ ಮಹತ್ವದಲ್ಲಿ ಬ್ಲೂಪ್ರಿಂಟ್. ಎಂಬ್ರಿಯೋದಲ್ಲಿ ನೂರು ವರ್ಷ ನಿರ್ಧಾರ ಮಾಡಿದರೆ, ಮಹಾತತ್ತ್ವದಲ್ಲಿ ಬ್ರಹ್ಮ ಸೃಷ್ಟಿಯಾದ ದಿನ. ಬ್ರಹ್ಮನ ಒಂದು ದಿನ ಒಂದು ಕಲ್ಪ ಸಂದರ್ಭ. ೨೮ ಮನ್ವಂತರ, ಅಂದರೆ ೮೫೮,೮೧೬೦ ಸಾವಿರ ವರ್ಷಗಳು ಬ್ರಹ್ಮನ ಒಂದು ದಿನ. ೩೬೫ ದಿನ ಸೇರಿಸಿದರೆ ಬ್ರಹ್ಮನ ಒಂದು ವರ್ಷ ಎಂದರು.

ಎಲ್ಲರೂ ಸಮಾನರು: ಹೊಸಪೇಟೆಯ ಹಂಸಾಂಬ ಶಾರದಾಶ್ರಮದ ಅಧ್ಯಕ್ಷರಾದ ಮಾತಾ ಪ್ರಬೋಧಮಯೀ ಮಾತನಾಡಿ, ವಸುಧೈವ ಕುಟುಂಬಕಂ ಎಂದರೆ ಇಡೀ ಭೂಮಂಡಲವೇ ಕುಟುಂಬ ಎಂದರ್ಥ. ಎಲ್ಲಾ ಯಾರಿಗೋ ದುಖಃ ಆದರೆ, ನಮಗೆ ದುಖಃ ಆಗುತ್ತದೆ. ಯಾರಿಗೋ ಸಂತೋಷ ಆದರೆ ನಮ್ಮ ಸಂತೋಷ. ಇದು ಕುಟುಂಬ. ಯಾವುದೇ ಪಕ್ಷಪಾತವಿಲ್ಲದ ನಡವಳಿಕೆ ಎಂಬುದು ತಿಳಿಯಬೇಕು. ಭಗವಂತನ ಸೃಷ್ಟಿ ಸೂರ್ಯ, ಚಂದಿರನಲ್ಲಿ ಕಾಣಲು ಸಾಧ್ಯ. ಪಂಚಭೂತ ಗಳು ಎಲ್ಲರನ್ನೂ ಸಮಾನವಾಗಿ ಕಾಣುತ್ತವೆ ಎಂದರು. ಅದೇ ಭಗವಂತನ ಸೃಷ್ಟಿ ಮಾಡಿದ ಮನುಕುಲದಲ್ಲಿ ಉನ್ನತ ಭಾವನೆ ಕಾಣಲು ಸಾಧ್ಯವಿಲ್ಲ. ಯಾವುದೇ ಮನುಷ್ಯ ಇಡೀ ಕುಟುಂಬವೇ ಜಗತ್ತು ಎಂದು ಅರ್ಥ ಮಾಡಿಕೊಂಡರೆ ಅನಂದ ಕಾಣಲು ಸಾಧ್ಯ.

ಉನ್ನತಮಟ್ಟದ ಆದರ್ಶಗಳನ್ನು ಜೀವನದ ಮೂಲಕ ಪರಿಚಯಿಸಿದವರು ಶಾರದಾದೇವಿ, ರಾಮಕೃಷ್ಣ ಪರಮ ಹಂಸರು. ರಾಮಕೃಷ್ಣ ಪರಮಹಂಸ ಅವರು ಕಾಳಿ ಮಾತೆಯ ಮೂಲಕ ಭಕ್ತಿ ಪ್ರಚುರ ಪಡಿಸಿದರು. ಕಾಳಿ ಮಾತೆಯ ಸಲಹೆಗಳನ್ನು ಕೇಳುತ್ತಿದ್ದರು. ಕಾಳಿ ಮಾತೆಯೂ ಸೂಚನೆ ನೀಡುತ್ತಿದರು. ಮಾಯೆಯ ದರ್ಶನ ಮಾಡಿಸಿದರು ರಾಮಕೃಷ್ಣರು. ಕಾಳಿ ಮಾತೆ ಸಾಕ್ಷಾತ್ಕರಿಸಿ ಸುಮ್ಮನಾಗಲಿಲ್ಲ. ಮುಸ್ಲಿಂ ಧರ್ಮ ಆಚರಣೆ ತಂದು ಸಾಕ್ಷಾತ್ಕಾರ ಮಾಡಿಕೊಂಡರು. ಮಸೀದಿಗೆ  ಹೋಗಿ ಅವರ ಧರ್ಮ ಸಾಕ್ಷಾತ್ಕಾರ ಮಾಡಿಕೊಂಡರು. ಇದೇ ಕ್ರೈಸ್ತ ಧರ್ಮದಲ್ಲಿ ಮುಂದುವರಿಸಿದರು. ಇಡೀ ಧರ್ಮವನ್ನು ಭಕ್ತಿ ಮೂಲಕ ತನ್ನದಾಗಿಸಲು ಎಲ್ಲಾ  ಧರ್ಮ ಆಚರಣೆ ಮಾಡಿಕೊಂಡರು. ಅವರಿಗೆ ಬೇರೆ ಧರ್ಮ ಎನಿಸಲಿಲ್ಲ. ರಾಮಕೃಷ್ಣರು ಸತ್ಯಯುಗದ ಚಿತ್ರಣ ಕಲಿಯುಗದಲ್ಲಿ ತೋರಿಸಿಕೊಟ್ಟರು ಎಂದರು.

ಅದು ಮಾತೃ ವಾತ್ಸಲ್ಯ
ಮಾತೆ ಶಾರದಾ ದೇವಿ ಅವರ ಜೀವನದಲ್ಲಿ ಎದ್ದು ಕಾಣುವುದು ಮಾತೃ ವಾತ್ಸಲ್ಯ. ಎಲ್ಲರ ಮೇಲೂ ಅಮೃತಧಾರೆ ಸಮಾನವಾಗಿ ಸುರಿಸಿದರು. ಸಣ್ಣ ಪ್ರಾಣಿ ಯಿಂದ ಎಲ್ಲಾ ಜೀವಿಗಳ ಮೇಲೆ ಮಾತೃವಾತ್ಸಲ್ಯ ತೋರಿದರು. ಅಮ್ಜದ್ ಎಂಬ ಮುಸ್ಲಿಂ ಯುವಕ ಕಳ್ಳ. ಕಳ್ಳತನ ಮಾಡುತ್ತಿದ್ದರಿಂದ ಜೈಲಿಗೆ ಹೋಗುತ್ತಿದ್ದ. ಇವನು ಮಾತೆ ಬಳಿ ಹೋಗುತ್ತಿದ್ದ. ಮಾತೆ ಒಳ್ಳೆಯ ವಿಚಾರ ಉಣಬಡಿಸುತ್ತಿದ್ದರು. ಶರತ್ ಎಂಬ ರಾಮಕೃಷ್ಣರ ಸನ್ಯಾಸ ಶಿಷ್ಯ. ಇವರಿಬ್ಬರು ನನ್ನ ಮಕ್ಕಳು ಎನ್ನುತ್ತಿದ್ದರು ಮಾತಾ ಶಾರದಾದೇವಿ. ಯಾವುದೇ ಭೇದ ಭಾವ ಪಕ್ಷಪಾತವಿಲ್ಲದೆ ಮಾತೃವಾತ್ಸಲ್ಯ ತೋರಿಸಿzರೆ. ಇವರಿಂದ ಹಲವು ಜನ ಮಂತ್ರ ದೀಕ್ಷೆ ತೆಗೆದುಕೊಂಡಿzರೆ ಎಂದು ತಿಳಿಸಿದರು.

ವಿವೇಕಾನಂದರು ವಿಶ್ವಮಾನ್ಯರು. ವಿವೇಕಾನಂದ ಭಾವನೆ ವಸುಧೈವ ಕುಟುಂಬಕಂ. ಇಡೀ ಲೋಕಕ್ಕೆ ಬೋಧಿಸಿ ಬೆಳಕು ನೀಡಿದ ಅವರು ವಿಶ್ವಮಾನವ.
ಅವರಿಗೆ ಒಂದು ರಾತ್ರಿ ನಿದ್ದೆ ಬರಲಿಲ್ಲ. ಹೃದಯದಲ್ಲಿ ನೋವು, ಕಣ್ಣೀರಿನಿಂದ ಮಲಗಿದ್ದರು. ಬೆಳಗ್ಗೆ ಅವರಿಗೆ ಗೊತ್ತಾಗುತ್ತದೆ. ನೋವಾದ ಸಮಯದಲ್ಲಿ ಫಿಜಿ ದೇಶದಲ್ಲಿ ಭೂ ಕುಸಿತ ಆಗಿದ್ದ ನೋವು ವಿವೇಕಾನಂದರಿಗೆ ತಟ್ಟಿದೆ. ಇದನ್ನು ಅವರು ಅನುಭವಿಸಿದರು. ಮತ್ತೆ ಅವರು ಪಾಶ್ಚಿಮಾತ್ಯ ದೇಶ ಚಿಕಾಗೋ ಹೋಗಿ
ಅಮೆರಿಕದ ಎಲ್ಲ ಸೋದರ ಸೋದರಿಯರೇ ಎಂದು ಹೇಳುವ ಭಾವನೆ ಯಲ್ಲಿ ವಸುಧೈವ ಕುಟುಂಬಕಂ ಕಾಣಬಹುದು.

***

ಮಾತಾ ಪ್ರಬೋಧಮಯೀ ಮತ್ತು ಮಾತಾ ಶಿವಮಯಿ ಅವರು ನಿರ್ಭಯಾನಂದರ ಶಿಷ್ಯೆಯರು. ಅಕ್ಷಯ ತೃತೀಯ ದಿನ ಇಬ್ಬರೂ ಸೋದರಿಯರು ಸನ್ಯಾಸತ್ವ ಸ್ವೀಕಾರ ಮಾಡಿದರು. ಶಾಲಾ, ಕಾಲೇಜಿಗೆ ಹೋಗಿ ಯುವಕರಿಗೆ ಮಾರ್ಗದರ್ಶನ ನೀಡಿ ಸಂವಹನ, ಕಲೆ, ಕೌಶಲ ದೈವಭಕ್ತಿ ಅರಿವು ಮೂಡಿಸುತ್ತಿದ್ದಾರೆ. ನೂರಾರು ಶಿಕ್ಷಕರಿಗೆ ಮಾರ್ಗಸ್ವರೂಪಿ ಆಗಿದ್ದಾರೆ.
-ಷಡಕ್ಷರಿ ಅಂಕಣಕಾರರು