Thursday, 12th December 2024

ಅಕ್ರಮ ಸಂಪತ್ತು, ಕಾದಿದೆ ಆಪತ್ತು

ವಿಶ್ವವಾಣಿ ಕ್ಲಬ್ ಹೌಸ್‌ ಸಂವಾದ ೧೧೧

ಐಟಿ ದಾಳಿ ಹೇಗೆ ಆಗುತ್ತೆ, ಏಕೆ ಆಗುತ್ತೆ ಎಂಬ ಮಾಹಿತಿ 
ಕ್ಲಬ್‌ಹೌಸ್‌ನಲ್ಲಿ ನಿವೃತ್ತ ಐಟಿ ಅಧಿಕಾರಿ ಶ್ರೀಧರ್ ವಿಶ್ಲೇಷಣೆ

ಬೆಂಗಳೂರು: ಅತಿ ಹೆಚ್ಚು ಅಕ್ರಮ ಸಂಪತ್ತು ಆಪತ್ತಿಗೆ ಕಾರಣ ಎಂಬುದು ಐಟಿ ಇಲಾಖೆ ದಾಳಿಯಿಂದ ಆಗಾಗ ಸಾಬೀತಾಗುತ್ತಲೇ ಇದೆ. ಮಿತ ಮತ್ತು ಕಾನೂನು ವ್ಯಾಪ್ತಿಯಲ್ಲಿ ಗಳಿಸಿದ ಸಂಪತ್ತು ಪ್ರತಿ ವ್ಯಕ್ತಿಯ ಹಿತಕ್ಕೆ ಒಳ್ಳೆಯದು ಎಂದು ನಿವೃತ್ತ ಐಟಿ ಅಧಿಕಾರಿ ಶ್ರೀಧರ್ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಟಿ ದಾಳಿ ಏಕೆ ಆಗುತ್ತದೆ? ಹೇಗೆ ಆಗುತ್ತದೆ? ಅದರ ಪರಿಣಾಮವೇನು?
ಎಂಬ ಬಗ್ಗೆ ತಿಳಿಸಿಕೊಟ್ಟರು. ಅಕ್ರಮ ಸಂಪತ್ತು ಕಾದಿದೆ ಆಪತ್ತು ಎಂಬ ಮಾತಿನಂತೆ ದಾಳಿ, ವಿಚಾರಣೆ, ಬಂಧನ, ಜಾಮೀನುಗಳ ಸುತ್ತ ನಡೆಯುವ ಕಾರ್ಯಾಚರಣೆ ಐಟಿ ದಾಳಿ. ಆದರೆ, ಇಲ್ಲಿ ನಡೆಯುವುದು ಎಲ್ಲ ಕಾನೂನಿನ ಪ್ರಕಾರದ ಲೆಕ್ಕಾಚಾರ. ಐಟಿ ಇಲಾಖೆಯಲ್ಲಿ ಎರಡು ಮೂರು ರೀತಿಯ ಅವಕಾಶ ಇರುತ್ತವೆ. ಮೊದಲು ಆದಾಯ ಗಳಿಸಿದ ಬಗ್ಗೆ ಮಾಹಿತಿ ಕೇಳುವುದು. ಈ ಮಾಹಿತಿಯನ್ನು ಸರಿಯಾಗಿ ನೀಡಿದರೆ ಏನೂ ತೊಂದರೆ ಉಂಟಾ ಗುವುದಿಲ್ಲ ಎಂದರು.

ಕೆಲವು ಸಮಯದಲ್ಲಿ ಮಾಹಿತಿ ನೀಡದಿದ್ದರೆ ಅವರಿಗೆ ಕಲಂ ೧೩೧ ಪ್ರಕಾರ ಸಮನ್ಸ್ ನೀಡುವ ಅವಕಾಶ ಇರುತ್ತದೆ. ಸಮನ್ಸ್ ನೀಡಿದರೆ ತಪ್ಪಿತಸ್ಥರು ಹಾಜರಾಗಬೇಕು. ಅಧಿಕಾರಿಗಳು ಅವರಿಗೆ ಪ್ರಶ್ನೆಗಳನ್ನು ಕೇಳಿ ಏನೇ ಸಂಶಯಗಳಿದ್ದರೂ ಇತ್ಯರ್ಥ ಪಡಿಸಿಕೊಳ್ಳಬೇಕು. ಐಟಿ ಇಲಾಖೆ ತಪಾಸಣೆ ಸಾಮಾನ್ಯ ವಾಗಿ ವ್ಯಾಪಾರದ ಸ್ಥಳಗಳಲ್ಲಿ ನಡೆಯುತ್ತದೆ. ಮನೆಯಲ್ಲಿ ಸರ್ವೇ ಮಾಡುವುದು ಮನೆಯಲ್ಲಿ ವ್ಯಾವಹಾರಿಕ ಚಟುವಟಿಕೆಗಳಿದ್ದರೆ ಮಾತ್ರ. ಈ ವೇಳೆ ಯಲ್ಲಿ ಕೆಲವು ನಿರ್ಬಂಧಗಳಿರುತ್ತವೆ. ಸರ್ವೇ ನಡೆಸಿ ಅಲ್ಲೇ ಮಾಹಿತಿ ಸಿಗುವುದಿಲ್ಲ, ಏಕೆಂದರೆ ಸರ್ವೇಯಲ್ಲಿ ಸೀಜ್ ಮಾಡುವ ಅವಕಾಶ ಇರುವುದಿಲ್ಲ. ಸರ್ಚ್ ಆಂಡ್ ಸೀಜ್ ಕೆಲವು ದೇಶಗಳು ಸೇರಿ ನಮ್ಮ ದೇಶದಲ್ಲಿ ಮಾತ್ರ ಕಾಣಬಹುದು ಎಂದು ಶ್ರೀಧರ್ ತಿಳಿಸಿದರು.

ಮೊದಲನೆಯದಾಗಿ ಐಟಿ ದಾಳಿ ನಡೆದಾಗ ಹೊರಗಿನವರಿಗೆ ಮಾಹಿತಿ ಕೇಳಿದರೆ ಕೊಡುವುದಿಲ್ಲ. ಅದಕ್ಕಾಗಿಯೇ ಒಂದು ಇಲಾಖೆ ಇದೆ. ಸಾಮಾನ್ಯವಾಗಿ ಕಮಿಷನರ್ ಹೆಡ್ ಮತ್ತು ಡೈರೆಕ್ಟರ್ ಹೆಡ್ ಇರುತ್ತಾರೆ. ಎಲ್ಲ ಮಾಹಿತಿ ಒಟ್ಟುಗೂಡಿಸಿ, ತನಿಖೆ ನಡೆಸಿ ನಂತರ ವರದಿ ಮಾಡುತ್ತಾರೆ. ತನಿಖೆ ನಡೆಸಿ ಅಸೆಸ್ಸಿಂಗ್ ಆಫೀಸರ್‌ಗಳಿಗೆ ಈ ಮಾಹಿತಿ ತಲುಪಿಸುತ್ತಾರೆ. ಅಸೆಸ್ಸಿಂಗ್ ಆಫೀಸರ‍್ಸ್ ಈ ಮಾಹಿತಿಯನ್ನು ತೆಗೆದುಕೊಂಡು ಆಸ್ತಿಯ ಒಟ್ಟು ಮೌಲ್ಯಮಾಪನ ಮಾಡುತ್ತಾರೆ ಎಂದು ತಿಳಿಸಿದರು.

ಐಟಿ ದಾಳಿಗೆ ನಾಲ್ಕು ಅಧಿಕಾರಿಗಳ ಕ್ಲಿಯರೆನ್ಸ್ ಬೇಕು ದಾಖಲೆ ಮತ್ತು ಸಾಕ್ಷಿ ಇರುವ ಜಾಗ ತಪಾಸಣೆ ಆಗಬೇಕು ದಾಖಲೆ ರೂಪದ ಸಾಕ್ಷಿ, ಪ್ರಾಪರ್ಟಿ ಪಡೆಯಬೇಕು ನಂತರ ಪ್ರಮಾಣೀಕೃತ ಹೇಳಿಕೆ ಪಡೆಯಬೇಕು