Saturday, 14th December 2024

ನಮ್ಮ ಭಾಷೆ ಪ್ರೀತಿಸಬೇಕು, ಇತರೆ ಭಾಷೆ ಕಲಿಯಬೇಕು : ಮೀರಾ ರಮಣ್ ಮಾತು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 133

ಮಹಾನಗರದ ಕೊಳಚೆ ನಿವಾಸಿಗಳನ್ನು ದೂರವಿಟ್ಟ ಪ್ರತಿಷ್ಠಿತರ ಔಚಿತ್ಯದ ಪ್ರಶ್ನೆ

ಬೆಂಗಳೂರು: ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಕಲಿಯಲೇ ಬೇಕು. ಅದರ ಜತೆಗೆ ಎಷ್ಟು ಸಾಧ್ಯವೋ ಅಷ್ಟೂ ಭಾಷೆ ಗಳನ್ನು ಕಲಿಯುವುದು ಮುಖ್ಯ. ಅದರಲ್ಲೂ ಯಾವುದೇ ದೇಶಕ್ಕೆ ಹೋಗಲಿ ಅಥವಾ ಭಾರತದ ಇರಲಿ ಎಲ್ಲಕ್ಕೂ ಆಂಗ್ಲ ಭಾಷೆ ಬೇಕು. ಅದು ನಮಗೆ ಜೀವನದಲ್ಲಿ ಬಹಳ ಮುಖ್ಯವೂ ಹೌದು. ಇದು ಕೊಳಗೇರಿ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲು ಆರಂಭ ವಾಗಿ ನಂತರದಲ್ಲಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಆಶಾ ಇನ್ಭಿ ನೈಟ್ ಫೌಂಡೇಷನ್‌ನ ಮೀರಾ ರಮಣ್ ಅವರ ಮಾತು.

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಶುಕ್ರವಾರ ವಿಶೇಷ ಅತಿಥಿಯಾಗಿ ಮಾತನಾಡಿ, ಪ್ರತಿಯೊಬ್ಬ ರಿಗೂ ತಮ್ಮ ಜೀವನದ ಸಾಧನೆಗಳನ್ನು ಹೊರತುಪಡಿಸಿ ಮನಸ್ಸಿಗೆ ತೃಪ್ತಿ ಸಿಗುವ ಕೆಲಸವನ್ನು ಮಾಡಬೇಕೆನ್ನುವ ತುಡಿತ ಖಂಡಿತ ಇರುತ್ತದೆ. ಆದರೆ, ಮಾರ್ಗ ಸ್ಪಷ್ಟ ವಾಗಿರುವುದಿಲ್ಲ. ಹೀಗಾಗಿ ತುಡಿತ ಮತ್ತು ಮಾರ್ಗಗಳನ್ನು ಒಂದುಗೂಡಿಸಿ ಮುಂದು ವರಿಯಬೇಕು ಎಂದರು.

ಭಾರತದ ಮಹಾ ನಗರಗಳಲ್ಲಿ ಪ್ರತಿಯೊಂದು ಪ್ರತಿಷ್ಠಿತ ಬಡಾವಣೆಯ ಜತೆಗೆ ಅಥವಾ ಪಕ್ಕದ ಒಂದು ಕೊಳಚೆ ಪ್ರದೇಶ ಇರುತ್ತದೆ. ಈ ಎರಡು ವಿಭಿನ್ನ ವರ್ಗಗಳವರು ಪರಸ್ಪರ ಅವಲಂಬಿತರಾಗಿದ್ದರೂ ಒಬ್ಬರಿಗೊಬ್ಬರು ದೂರ ದೂರವೇ ಇರುತ್ತಾರೆ. ಇವರ ಮಧ್ಯೆ ಒಂದು ರೀತಿಯ ಸೌಹಾರ್ದಯುತ ಸೇತುವೆಯಂತೆ ಆಶಾ ಇನ್ಛಿನೈಟ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಮೊದಲು ಆಂಗ್ಲ ಭಾಷೆ ಕಲಿಸುವ ಉದ್ದೇಶದಿಂದ ಆರಂಭವಾದ ಸಂಸ್ಥೆ ಈಗ ಈಗ ಸಾಕಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ದೆ ಎಂದು ಹೇಳಿದರು.

ಆವೋ ಸೀಖ್ನಾ ಹೋಗಾ ಆಸಾನ್ (ಆಶಾ),’ ‘ಬನ್ನಿ ಕಲಿಯುವಿಕೆ ಸುಲಭವಾಗಿದೆ,’ ಎನ್ನುವ ಘೋಷಣೆಯೊಂದಿಗೆ ‘ಆಶಾ ಇನ್ಛಿನೈಟ್ ಫೌಂಡೇಶನ್’ ಉಗಮವಾಯಿತು. ಈ ಸಂಸ್ಥೆ ಮೂಲಕ ಸಾಽಸುವ ಮನಸ್ಸಿರುವವರು ಮತ್ತು ಕಲಿಯುವ ಆಸೆಯಿದ್ದೂ ತೀರಿಸಿಕೊಳ್ಳಲಾರದ ಮಕ್ಕಳ ನಡುವೆ ಅನುಬಂಧವನ್ನು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಬಡಾವಣೆಯಲ್ಲಿ ಅನು ಕೂಲ ಇಲ್ಲದಿರುವ ಮಕ್ಕಳಿಗೆ ಅವರ ಶಾಲೆಯಲ್ಲಿ ಸಿಗದ ಶಿಕ್ಷಣವನ್ನು ಅಮುಟ್ಟಿಸುವ ಆಸೆ ನಮ್ಮ ಸಂಸ್ಥೆಯದ್ದು ಎಂದು ತಿಳಿಸಿ ದರು.

ಇಂಗ್ಲಿಷ್ ಭಾಷೆ ಶ್ರೀಮಂತರು ಹಾಗೂ ಬಡವರ ನಡುವಿನ ಗೋಡೆ ಇದ್ದ ಹಾಗೆ. ಈ ಗೋಡೆ ತೊಡೆದು ಹಾಕಲು ಪ್ರಯತ್ನಿಸು ತ್ತಿದ್ದೇವೆ. ಮೊದಲು 46 ಮಕ್ಕಳಿಂದ ಆರಂಭವಾದ ಇಂಗ್ಲಿಷ್ ತರಬೇತಿ ಕೇಂದ್ರದಲ್ಲಿ, ದಿನಕಳದಂತೆ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಸ್ವತಃ ಬರಲಾಗದಿದ್ದವರು ದಿನದಲ್ಲಿ ಹದಿನೈದು ನಿಮಿಷ ಒಂದು ಮಗುವಿನ ಜತೆ ಮಾತನಾಡುವ ಮೊಬೈಲ್
ಮೆಂಟರ್ ಯೋಜನೆ ಆರಂಭಿಸಿದೆವು. ಒಂದು ಮಗುವಿನ ಜತೆ ಮೊಬೈಲ್‌ನಲ್ಲಿ ದಿನದಲ್ಲಿ ಒಂದು ಗಂಟೆ ಮಾತನಾಡುವುದು, ತನ್ಮೂಲಕ ಆ ಮಗುವಿಗೆ ಆಂಗ್ಲ ಭಾಷೆ ಕಲಿಸುವುದು, ಅತಿಥಿ ಉಪನ್ಯಾಸಕರ ಮೂಲಕ ಮಕ್ಕಳಿಗೆ ವಿಭಿನ್ನ ವಿಷಯಗಳ ಬಗ್ಗೆ, ಸಂವಹನ ಕೌಶಲ್ಯ, ನೈರ್ಮಲ್ಯ, ಪೌಷ್ಟಿಕ ಆಹಾರ, ನಾಯಕತ್ವ ಕೌಶಲಗಳ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನನಗೆ ಸ್ಫೂರ್ತಿ
ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಕರ ದಿನಾಚರಣೆಯಂದು ತಮ್ಮ ಭಾಷಣದಲ್ಲಿ, ‘ನಮ್ಮ ದೇಶದಲ್ಲಿ ಶಿಕ್ಷಕರ ಕೊರತೆ ಬಹಳಷ್ಟಿದೆ. ಎಲ್ಲಾ ವಿದ್ಯಾವಂತರೂ ವಾರದಲ್ಲಿ ಒಂದು ಗಂಟೆಯಾದರೂ ಸರಕಾರಿ ಶಾಲೆಗೆ ಹೋಗಿ, ಆ ಮಕ್ಕಳ ಜತೆ ಕಾಲ ಕಳೆದು ಬಂದರೆ ಒಂದು ಮಗುವಿನ ಭವಿಷ್ಯದ ಭಾಷ್ಯ ಬದಲಾಯಿಸಲು ಸಾಧ್ಯ’ ಎಂದು ಹೇಳಿದ್ದರು. ಈ ಮಾತು ನನಗೆ ಸ್ಛೂರ್ತಿ ನೀಡಿತು. ನಾನು ಕೆಲವು ಗೆಳತಿಯರು ಸೇರಿ ಕೊಳಗೇರಿಯಲ್ಲಿರುವ ಮಕ್ಕಳಿಗೆ ಆಂಗ್ಲ ಭಾಷೆಯ ಪಾಠ ಹೇಳಲು ಪ್ರಾರಂಭ ಮಾಡಿದೆವು. ನಿರ್ಧಾರವೇನೋ ಸರಿ. ಆದರೆ ಸ್ಥಳವೆಲ್ಲಿ ಎಂಬ ಪ್ರಶ್ನೆ ಬಂತು. ಪಕ್ಕದ ಪಾರ್ಕಿನಲ್ಲಿ ಅಧಿಕಾರಿಗಳ ಪರವಾನಗಿ
ಪಡೆದು ಪಾಠ ಹೇಳಲು ಪ್ರಾರಂಭಿಸಿದೆವು. ಮೊದಲಿಗೆ ಹತ್ತು ಮಕ್ಕಳಿಗೆ ವಾರಕ್ಕೆ ಒಂದು ಬಾರಿ ಒಂದೂವರೆ ಗಂಟೆ ತರಗತಿ ಶುರು ಮಾಡಿದೆವು. ನಾಲ್ಕಾರು ಮಕ್ಕಳೊಡನೆ ಆರಂಭವಾದದ್ದು, ಈಗ ಐವತ್ತು ಮಕ್ಕಳಿದ್ದಾರೆ. ವಾರಕ್ಕೆ ಒಂದು ಬಾರಿ ಮಾಡುತ್ತಿದ್ದ ತರಗತಿ ಪ್ರತಿದಿನ ನಡೆಯುತ್ತಿದೆ. ನಾಲ್ಕಾರು ಗೆಳತಿಯರಿಂದ ಶುರುವಾದದ್ದು ಈಗ ದಿನಕ್ಕೆ ಮೂರು ಪಾಳಿಯಲ್ಲಿ 21 ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. 15 ಮಂದಿ ಆಗಾಗ ಭೇಟಿ ನೀಡುವವರಿದ್ದಾರೆ ಎಂದು ಮೀರಾ ರಮಣ್ ಹೇಳಿದರು.

ಕೌನ್ ಬನೆಗಾ ಕನ್ನಡ ಬನೇಗಾ ತರಬೇತಿ ಶಿಬಿರ
ಮುಂಬೈನಿಂದ ಬೆಂಗಳೂರಿಗೆ ಬಂದಾಗ ಇಲ್ಲಿ ಹೊರ ರಾಜ್ಯದವರಿಗೆ ಯಾವ ರೀತಿ ಕನ್ನಡ ಕಲಿಸಬಹುದು ಎಂದು ಯೋಚನೆ ಮಾಡಿದೆ. ತರಗತಿ ಮಾಡಲು ಒಂದು ಪಠ್ಯ ರಚಿಸಲಾಯಿತು. ನಾವು ತಯಾರಿಸಿದ ಪುಸ್ತಕಗಳು ಸುಲಭವಾಗಿ ಓದಬಹುದು. ಕೌನ್ ಬನೇಗಾ ಕನ್ನಡ ಬನೆಗಾ ಎಂಬ ಶೀರ್ಷಿಕೆಯಡಿ ಉಚಿತ ತರಬೇತಿ ಶಿಬಿರ ಆಯೋಜಿಸಲಾಯಿತು. ಇಂಗ್ಲಿಷ್ ಮತ್ತು ಕನ್ನಡ
ಕಲಿಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕರೋನಾ ಶುರುವಾದ ಮುಂಚೆ 140 ಸ್ವಯಂಸೇವರಕರಿದ್ದರು. ಸಾಂಕ್ರಾಮಿಕದ ಪ್ರಭಾವ ದಿಂದ ವಾಟ್ಸ್‌ಆಪ್ ಮೂಲಕ ಕಲಿಕೆ ಆರಂಭಿಸಲಾಗಿದೆ ಎಂದು ಮೀರಾ ರಮಣ್ ತಿಳಿಸಿದರು.