ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 103
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ.ಗುರು ಪ್ರಸಾದ್ ಮಾತು
ಆಗಿನಿಂದ ಈಗಿನವರೆಗೂ ತನ್ನ ದೇಶದ ಸುತ್ತಲೂ ಇರುವ ಶತ್ರುಗಳ ವಿರುದ್ಧ ಹೋರಾಟ
ಬೆಂಗಳೂರು: ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಇಸ್ರೇಲ್’ನ ಗೂಢಚಾರ ಸಂಸ್ಥೆಯಾದ ಮೊಸ್ಸಾದ್ ನ ರೋಚಕ ಕಾರ್ಯಾಚರಣೆಗಳೇ ಸೂರ್ತಿ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ.ಗುರು ಪ್ರಸಾದ್ ಅಭಿಪ್ರಾಯಪಟ್ಟರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸ್ವಂತಂತ್ರಗೊಂಡ ೯ ತಿಂಗಳ ನಂತರ ಇಸ್ರೇಲ್ ಸ್ವತಂತ್ರವಾಯಿತು. ಆಗಿನಿಂದ ಈಗಿನವರೆಗೂ ತನ್ನ ದೇಶದ ಸುತ್ತಲು ಇರುವ ಶತ್ರುಗಳ ವಿರುದ್ಧ ಹೋರಾಟ ವನ್ನು ಇಸ್ರೇಲ್ ನಡೆಸುತ್ತಿದೆ. ಇಸ್ರೇಲ್‌ನ ಗೂಢಚಾರ ಸಂಸ್ಥೆಯಾದ ಮೊಸ್ಸಾದ್ ಹಲವು ವರ್ಷಗಳ ಹಿಂದೆಯೇ ಹಲವು ರೋಚಕ ಕಾರ್ಯಾ ಚರಣೆಗಳನ್ನು ನಡೆಸಿವೆ. ಇದರಿಂದ ಸ್ಫೂರ್ತಿ ಪಡೆದ ಭಾರತವು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದರು.
ದೇಶ ಭಕ್ತಿಯಿಂದಾಗಿ ಮೊಸ್ಸಾದ್ ವಿಶ್ವವಿಖ್ಯಾತಿ ಪಡೆದಿದೆ. ಮೊಸ್ಸಾದ್ ಅಧಿಕಾರಿಗಳು ಕಠಿಣ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಕೊಡಲು ಸಿದ್ಧರಿರುತ್ತಾರೆ. ತಮ್ಮ ದೇಶ ಪ್ರೇಮ ಮತ್ತು ಕರ್ತವ್ಯ ನಿಷ್ಠೆಯಿಂದಾಗಿ ಮೊಸ್ಸಾದ್ ಹೆಸರುವಾಸಿಯಾಗಿದೆ. ಇಸ್ರೇಲ್ ತನ್ನ ಶತ್ರುಗಳು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕುಳಿತ್ತಿದ್ದರು ಅವರನ್ನು ಹುಡುಕಿ ಹೊಡೆದುರುಳಿಸುವ ಶಕ್ತಿ ಸಾಮರ್ಥ್ಯ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಮೊಸ್ಸಾದ್ ಸಂಸ್ಥೆ ಆಗಿದೆ ಎಂದು ತಿಳಿಸಿದರು.
ಅಮೆರಿಕಾದ ಸಿಐಎ, ರಷ್ಯದಾ ಕೆಜಿಬಿ, ಇರಾಕ್‌ನ ಎಂಐಆರ್ ಇವೆಲ್ಲದಕ್ಕೂ ಮೆಟ್ಟಿಲು ಮೊಸ್ಸಾದ್ ಸಂಸ್ಥೆಯಾಗಿದೆ. ಭಾರತದ ಗೂಢಚಾರ ಸಂಸ್ಥೆ ಸುಮಾರು 9 ಸಾವಿರ ಅಧಿಕಾರಿಗಳನ್ನು ಹೊಂದಿದೆ. ಆದರೆ, ಮೊಸ್ಸಾದ್ ಕೇವಲ 1500 ಗೂಢಚಾರರನ್ನು ಹೊಂದಿದ್ದು, ಅವರ ಕಾರ್ಯಕ್ಷಮತೆ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ಆವಿಷ್ಕಾರ. ಅವರ ದೇಶದ ವಿಜ್ಞಾನಿಗಳು ಕಂಡು ಹಿಡಿಯುವ ಆವಿಷ್ಕಾರವನ್ನು ಅಳವಡಿಸಿಕೊಳ್ಳುವುದು. ಶತ್ರುಗಳನ್ನು ಮಣಿಸಲು ಗೂಢಚಾ ರರನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವುದಾಗಿದೆ ಎಂದು ಹೇಳಿದರು.
ಐಕ್‌ಮನ್‌ನ ಸೆರೆ ಬಲು ರೋಚಕ: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಎರಡೂವರೆ ಲಕ್ಷ ಯಹೂದಿಗಳನ್ನು
ಮಾರಣಹೋಮ ಮಾಡಿದ್ದ. ಇದಕ್ಕೆ ಐಕ್‌ಮನ್ ಎಂಬಾತ ಕಾರಣನಾಗಿದ್ದ. ಬಳಿಕ ಆತ ಅರ್ಜೆಂಟೀನಾಗೆ ಹೋಗಿ ರಿಕಾರ್ಡೋ
ಎಂದು ಹೆಸರು ಬದಲಿಸಿಕೊಂಡು ತಲೆಮರೆಸಿಕೊಂಡಿದ್ದ. 1948ರಲ್ಲಿ ಮೊಸ್ಸಾದ್‌ನ ಗೂಢಚಾರಿಗಳು ಅರ್ಜೆಂಟೀನಾದಲ್ಲಿ ಕಾರ್ಯಾಚರಣೆ ನಡೆಸಿ, ಆತನನ್ನು ವಿಮಾನದ ಮೂಲಕ ಇಸ್ರೇಲ್‌ಗೆ ಜೀವಂತವಾಗಿ ಕರೆತಂದು ನ್ಯಾಯಾಲಯದ ಮುಂದೆ ನಿಲ್ಲಿಸಲಾಗಿತ್ತು. ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿತು.
1978ರಲ್ಲಿ ಜರ್ಮನಿಯಲ್ಲಿ ನಡೆದ ಒಲಂಪಿಕ್ ಇಸ್ರೇಲ್‌ನ ತಂಡ ಭಾಗವಹಿಸಿತ್ತು. ಬ್ಲಾಕ್ ಸೆಪ್ಟೆಂಬರ್ ಎಂಬ ಆತಂಕವಾದಿಗಳು ಅವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಕೊಂದಿದ್ದರು. ಇದರಿಂದ ಸಿಟ್ಟಿಗೆದ್ದ ಇಸ್ರೇಲ್ ಪ್ರಧಾನಿ ಆಪರೇಷನ್ ರಾತ್ ಆಫ್ ಗಾಡ್ (ಭಗವಂತನ ಶಾಪ) ಎಂಬ ಕಾರ್ಯಾಚರಣೆ ಮಾಡಿ, ಇಸ್ರೇಲ್‌ನ ತಂಡ ಸಾವಿಗೆ ಕಾರಣ ರಾದವರನ್ನು ರೋಮ್, ಪ್ಯಾರಿಸ್‌ನಲ್ಲಿ ಹುಡುಕಿ ಕೊಂದಿದ್ದರು.
ನಂತರ 1958 ಇರಾನ್‌ನಲ್ಲಿ ಮಾನವ ರಹಿತವಾಗಿ ಕಾರ್ಯಾಚರಣೆ ನಡೆಸಿ, ಫಕ್ರಿಜಾದೆ ಎಂಬಾತನನ್ನು ಕೊಂದು ಮೊಸ್ಸಾದ್ ವಿಶ್ವದ ಗಮನ ಸೆಳೆಯಿತು. ಮೊಸ್ಸಾದ್‌ನಲ್ಲಿ ಕೆಲಸ ಮಾಡಿದ ಮೂವರು ಇಸ್ರೇಲ್‌ನ ಪ್ರಧಾನಮಂತ್ರಿಗಳಾಗಿದ್ದರು ಎಂದು ವಿವರಿಸಿ ದರು.
ದೇಶ ಪ್ರೇಮ ಮತ್ತು ಕರ್ತವ್ಯ: ದೇಶ ಭಕ್ತಿಯಿಂದಾಗಿ ಮೊಸ್ಸಾದ್ ವಿಶ್ವವಿಖ್ಯಾತಿ ಪಡೆದಿದೆ. ಮೊಸ್ಸಾದ್ ಅಧಿಕಾರಿಗಳು ಕಠಿಣ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಕೊಡಲು ಸಿದ್ಧರಿರುತ್ತಾರೆ. ತಮ್ಮ ದೇಶ ಪ್ರೇಮ ಮತ್ತು ಕರ್ತವ್ಯ ನಿಷ್ಠೆಯಿಂದಾಗಿ ಮೊಸ್ಸಾದ್ ಹೆಸರುವಾಸಿಯಾಗಿದೆ. ಇಸ್ರೇಲ್ ತನ್ನ ಶತ್ರುಗಳು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕುಳಿತ್ತಿದ್ದರು ಅವರನ್ನು ಹುಡುಕಿ ಹೊಡೆದುರುಳಿಸುವ ಶಕ್ತಿ ಸಾಮರ್ಥ್ಯ ಹೊಂದಿದ್ದೆ. ಇದಕ್ಕೆ ಪ್ರಮುಖ ಕಾರಣ ಮೊಸ್ಸಾದ್ ಸಂಸ್ಥೆ ಆಗಿದೆ ಎಂದು ತಿಳಿಸಿದರು.
ಅಮೇರಿಕಾದ ಸಿಐಎ, ರಷ್ಯದಾ ಕೆಜಿಬಿ, ಇರಾಕ್‌ನ ಎಂಐಆರ್ ಇವೆಲ್ಲದಕ್ಕೂ ಮೆಟ್ಟಿಲು ಮೊಸ್ಸಾದ್ ಸಂಸ್ಥೆಯಾಗಿದೆ. ಭಾರತದ ಗೂಢಚಾರ ಸಂಸ್ಥೆ ಸುಮಾರು 9 ಸಾವಿರ ಅಧಿಕಾರಿಗಳನ್ನು ಹೊಂದಿದೆ. ಆದರೆ ಮೊಸ್ಸಾದ್ ಕೇವಲ 1500 ಗೂಢಚಾರರನ್ನು ಹೊಂದಿದ್ದು, ಅವರ ಕಾರ್ಯಕ್ಷಮತೆ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ಆವಿಷ್ಕಾರ. ಅವರ ದೇಶದ ವಿಜ್ಞಾನಿಗಳು ಕಂಡು ಹಿಡಿಯುವ ಆವಿಷ್ಕಾರವನ್ನು ಅಳವಡಿಸಿಕೊಳ್ಳುವುದು. ಶತ್ರುಗಳನ್ನು ಮಣಿಸಲು ಗೂಢಚಾರರನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವುದಾಗಿದೆ.
ಗೂಢಚಾರಿ ಆಗಬೇಕು ಎಂಬ ಆಸೆ ಇತ್ತು
ನನಗೆ ಬಾಲ್ಯದಿಂದಲೂ ಗೂಢಚಾರಿಯಾಗಬೇಕು ಎಂಬ ದೊಡ್ಡ ಆಸೆ ಇತ್ತು. ಪತ್ತೆದಾರಿ ಕಾದಂಬರಿಗಳನ್ನು ಓದಿ ತುಂಬಾ ಪ್ರಭಾವಿತನಾಗಿದ್ದೆ. ಗೂಢಚಾರಿಯೊಬ್ಬರನ್ನು ಭೇಟಿಯಾಗಿದ್ದೆ. ರಾ ಸಂಸ್ಥೆ ಸೇರಬೇಕು ಎಂಬ ದೊಡ್ಡ ಕನಸಿತ್ತು. ಕಾರಣಾಂತರ ಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ೨೦೧೦ ರಲ್ಲಿ ಡಿಜಿಪಿಯಾಗಿದ್ದ ವೇಳೆ ಮೊಸ್ಸಾದ್‌ನ ಭದ್ರತೆ ಮತ್ತು ರಕ್ಷಣೆ ಬಗ್ಗೆ ತಿಳಿದು ಕೊಳ್ಳುವ ಅವಕಾಶ ಒದಗಿ ಬಂದಿತ್ತು. ಇಸ್ರೇಲ್‌ಗೆ ತೆರಳಿ ಮೊಸ್ಸಾದ್‌ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕಾರ್ಯಾ ಚರಣೆಯ ಬಗ್ಗೆ ಹಲವು ರೋಚಕ ಮಾಹಿತಿಗಳನ್ನು ಪಡೆದು, ಜತೆಗೆ ತರಬೇತಿಯನ್ನು ಪಡೆದುಕೊಂಡಿದ್ದೆ. ಮೊಸ್ಸಾದ್ ಬಗ್ಗೆ ನನ್ನ ಪ್ರತಿಕಾರ ಎಂಬ ಪುಸ್ತಕದಲ್ಲಿ ಸವಿಸ್ತಾರವಾಗಿ ಬರೆದಿದ್ದೇನೆ. ಆಸಕ್ತಿವುಳ್ಳವರು ಅದನ್ನು ಕೊಂಡು ಓದಿ ತಿಳಿಯಬಹುದು.
೨೦೧೦ರಲ್ಲಿ ಡಿಜಿಪಿಯಾಗಿದ್ದ ವೇಳೆ ಮೊಸ್ಸಾದ್‌ನ ಭದ್ರತೆ,
ರಕ್ಷಣೆ ಬಗ್ಗೆ ತಿಳಿದುಕೊಳ್ಳುವ ಅವಕಾಶ ಒದಗಿ ಬಂದಿತ್ತು.
ಮೊಸ್ಸಾದ್ ಯಶಸ್ಸಿಗೆ ಆವಿಷ್ಕಾರ, ಗೂಢಚಾರರನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿರುವುದೇ ಕಾರಣ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಎರಡೂವರೆ ಲಕ್ಷ ಯಹೂದಿಗಳನ್ನು ಮಾರಣಹೋಮ ಮಾಡಿದ್ದ
ಶತ್ರುಗಳು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಹುಡುಕಿ ಹೊಡೆದುರುಳಿಸುವ ಶಕ್ತಿ ಸಾಮರ್ಥ್ಯ
***
ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ.ಗುರು ಪ್ರಸಾದ್ ಅವರು, ದಕ್ಷ ಅಧಿಕಾರಿಯಾಗಿದ್ದವರು ಮಾತ್ರವಲ್ಲದೆ ಉತ್ತಮ ಅಂಕಣ ಕಾರರು, ಕಥೆಗಾರರು ಹಾಗೂ ಭಾಷಣಕಾರರು ಆಗಿದ್ದಾರೆ. ೫೦ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ೬೬ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇಸ್ರೇಲ್‌ನ ಗೂಢಚಾರ ಸಂಸ್ಥೆಯಾದ ಮೊಸ್ಸಾದ್‌ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಜತೆಗೆ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಮೊಸ್ಸಾದ್ ಬಗ್ಗೆ ಕುರಿತು ಗುರು ಪ್ರಸಾದ್ ಬರೆದಿರುವ ಪ್ರತಿಕಾರ ಎಂಬ ಪುಸ್ತಕ ಕೇವಲ ೧೦ ದಿನಗಳಲ್ಲಿ ಮೊದಲ ಆವೃತ್ತಿ ಖಾಲಿಯಾಗಿದೆ. ಎರಡನೇ ಆವೃತ್ತಿಗೆ ಜನರು ಕಾಯುತ್ತಿದ್ದಾರೆ. ಮೊಸ್ಸಾದ್ ಬಗ್ಗೆ ಬೆಳಕು
ಚೆಲ್ಲುವ ಮೊದಲ ಕೃತಿ ಇದಾಗಿದೆ.
-ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ ಸಂಪಾದಕರು