Thursday, 12th December 2024

ಫಟಾಫಟ್ ಮಾತಾಡಿ: ಫಟಾಫಟ್‌ ಸಕ್ಸಸ್‌

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 65

ಕೇಳುಗರಿಂದಲೇ ಮಾತನಾಡಿಸುವ ವಿನೂತನ ಪ್ರಯತ್ನ ಯಶಸ್ಸು

ಉತ್ಸಾಹದಿಂದ ಭಾಗವಹಿಸಿದ ಅನೇಕರು

ಬೆಂಗಳೂರು: ಕೇಳುಗರಿಂದಲೇ ಮಾತನಾಡಿಸುವ ಮೂಲಕ ವಿಶ್ವವಾಣಿ ಕ್ಲಬ್‌ಹೌಸ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಅದಕ್ಕೆ ಮೊದಲನೇ ದಿನವೇ ಭಾರಿ ಯಶಸ್ಸು ಸಿಕ್ಕಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸಾಹದಿಂದ ಮಾತನಾಡಿದ 25 ಜನರಲ್ಲಿ ಐದು ಜನರನ್ನು ಆಯ್ಕೆ ಮಾಡಿ ಅವರಿಗೆ ಬಹುಮಾನ ಘೋಷಣೆ ಮಾಡಲಾಯಿತು. ಉತ್ತಮವಾಗಿ ಮಾತನಾಡಿದ ಕೆಲವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪ್ರತಿದಿನ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಒಬ್ಬರು ಅತಿಥಿಗಳು ಭಾಗವಹಿಸಿ, ಒಂದು ವಿಷಯದ ಕುರಿತು ಮಾತನ್ನಾಡುತ್ತಿದ್ದರು. ಆದರೆ, ಭಾನುವಾರ ನಡೆದ ಕಾರ್ಯಕ್ರಮ ದಲ್ಲಿ ಕ್ಲಬ್‌ಹೌಸ್ ಕೇಳುಗ ರನ್ನೇ ಆಯ್ಕೆ ಮಾಡಿ ಫಟಾಫಟ್ ಮಾತುಕತೆಯ ಮೂಲಕ ಕ್ಷಣದಲ್ಲೇ ಅವರಿಂದ ಮಾತನಾಡಿಸುವ ಪ್ರಯತ್ನ ನಡೆಯಿತು.

25 ಕೇಳುಗರು ಕಾರ್ಯಕ್ರಮದಲ್ಲಿ ಬಹಳ ಸಮಂಜಸವಾಗಿ ಮಾತನಾಡಿದರು. ಅವರಿಗೆ ಆ ಕ್ಷಣದಲ್ಲೇ ವಿಷಯ ವನ್ನು ಆಯ್ಕೆ ಮಾಡಿ ನೀಡಲಾಯಿತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಂಜನಗೂಡು ಮೋಹನ್, ರೂಪಾ ಗುರುರಾಜ್ ಪ್ರಶ್ನೆಗಳನ್ನು ಕೇಳಿದರು. ಅಂಕಣಕಾರ ಎಸ್.ಷಡಕ್ಷರಿ ಮತ್ತು ರೇಣುಕಾ
ಮಂಜುನಾಥ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಮೊದಲ ಬಹುಮಾನ ಪಡೆದ ರಕ್ಷಾ ಅವರು ಜೀವನದಲ್ಲಿ ಸಂಗೀತ ಎಂಬ ವಿಷಯದ ಕುರಿತು ಮಾತ ನಾಡಿದರು. ತಮ್ಮ ಮಾತಿನಲ್ಲಿ ನಾವಾಡುವ ಮಾತೇ ಸಂಗೀತ, ಮಾತುಗಳನ್ನೇ ಜೋಡಿಸಿ ಸಂಗೀತವನ್ನಾಗಿಸಬಹುದು. ಸಂಗೀತ ಕೇಳುವುದು ಮತ್ತು ಹಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.

ಬಹುಮಾನ ವಿಜೇತರು
ಮೊದಲ ಬಹುಮಾನ: ರಕ್ಷಾ ಮಹೇಂದ್ರ-ಸಂಗೀತ ಮತ್ತು ಜೀವನ
ಎರಡನೇ ಬಹುಮಾನ(ಜಂಟಿ): ಸಿದ್ದು ನಾವಿ ಹಂಜಗಿ-ವೈಚಾರಿಕತೆ ಮತ್ತು ವಾಸ್ತವ ಬದುಕು
ಎರಡನೇ ಬಹುಮಾನ: ಶ್ರೀಶೈಲ-ಗ್ರಾಹಕರ ತೃಪ್ತಿ
ಮೂರನೇ ಬಹುಮಾನ: ರಘು ಶೆಟ್ಟಿ-ಉಡುಪಿ ಶ್ರೀಕೃಷ್ಣ
ನಾಲ್ಕನೇ ಬಹುಮಾನ: ವೈದೇಹಿ ಪ್ರಾಣೇಶ್-ಪ್ರಾಣೇಶ್ ಅವರ ವೀಕ್ನೆಸ್‌ಗಳು
ಸಮಾಧಾನಕರ ಬಹುಮಾನ: ಗಾನವಿ-ಚಂದಿರನೇಕೆ ಓಡುವನಮ್ಮ
ತೀರ್ಪುಗಾರರು: ಎಸ್.ಷಡಕ್ಷರಿ ಮತ್ತು ರೇಣುಕಾ ಮಂಜುನಾಥ್.

ಗಮನ ಸೆಳೆದ ಗಾನವಿ: ಚೆಂದಿರನೇಕೆ ಓಡುವನಮ್ಮ ಎಂಬ ಪದ್ಯದ ಬಗ್ಗೆ ಮಾತನಾಡಿದ ಪುಟಾಣಿ ಗಾನವಿ ಅವರು ಸಮಾಧಾನ ಕರ ಬಹುಮಾನ ಪಡೆಯುವ
ಜತೆಗೆ ತೀರ್ಪುಗಾರರು ಮತ್ತು ಮೂವರು ಕಾರ್ಯಕ್ರಮ ರೂಪಕರ ಗಮನ ಸೆಳೆದರು. ಗಂಗಾವತಿ ಪ್ರಾಣೇಶ್ ಅವರ ಪುತ್ರಿ ವೈದೇಹಿ ಪ್ರಾಣೇಶ್ ಅವರು, ತಮ್ಮ ತಂದೆಯ ವೀಕ್‌ನೆಸ್ ಬಗ್ಗೆ ಮಾತನಾಡುವ ಸವಾಲು ಸ್ವೀಕರಿಸಿ, ತಂದೆಯ ಒಳ್ಳೆಯ ಗುಣಗಳನ್ನೇ ಜನರಿಗೆ ತಿಳಿಸಿದರು.

ನಂತರ ತೀರ್ಪುಗಾರರು ಪ್ರಶ್ನಿಸಿದಾಗಲೂ, ಅವರು ತಂದೆ ಇರುವುದೇ ಹಾಗೆ, ಎಂಬುದನ್ನು ಮತ್ತೊಮ್ಮೆ ಹೇಳಿದರು. ಉಡುಪಿಯ ರಘು ಶೆಟ್ಟಿ ಎಂಬುವವರು
ಉಡುಪಿ ಕೃಷ್ಣನ ಬಗ್ಗೆ, ಉಡುಪಿಯ ಆಚರಣೆಯ ಬಗ್ಗೆ ಮಾತನಾಡುವ ಮೂಲಕ ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಬಹಳ ಅನುಕೂಲ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ತಾವು ತೆಲುಗಿನಿಂದ ತ್ಯಾಗರಾಜರ ಕೀರ್ತನೆಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಹಾಡುತ್ತಿರುವ ಬಗ್ಗೆಯೂ ಮಾತ ನಾಡಿದರು. ಅವರ ಮಾತುಗಾರಿಕೆಗೆ ಮೊದಲ ಬಹುಮಾನ ನೀಡಲಾಯಿತು.