Thursday, 12th December 2024

ಕೋವಿಡ್‌ನಿಂದ ಬಳಲಿದವರಿಗೆ ವೈರಸ್‌, ಶಾಶ್ವತ ಹೃದಯ ಸಮಸ್ಯೆ ಉಂಟುಮಾಡಬಹುದು- ಅಧ್ಯಯನ

ಕೋವಿಡ್‌ ಸಂಖ್ಯೆ ಸಂಪೂರ್ಣ ಇಳಿಮುಖ ಕಂಡಿದ್ದರೂ ಕೋವಿಡ್‌ನಿಂದ ಉಂಟಾದ ಆರೋಗ್ಯ ಸಮಸ್ಯೆ ಈಗಲೂ ಜನರನ್ನು ಕಾಡುತ್ತಿದೆ, ಅಷ್ಟೇ ಅಲ್ಲ, ಈಗಾಗಲೇ ಹೃದಯ ಸಮಸ್ಯೆ ಇರುವವರಿಗೆ ಶಾಶ್ವತ ಹೃದಯ ಸಮಸ್ಯೆ ಉಂಟು ಮಾಡಲು ಕೋವಿಡ್‌ ಕಾರಣವಾಗಿದೆ !

ಹೌದು, ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕೋವಿಡ್‌ ಮಾರಕ ವಾಗಿದೆ. ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇದ್ದು, ಕೋವಿಡ್‌ನಿಂದ ಅತಿಹೆಚ್ಚು ಆರೋಗ್ಯ ಸಮಸ್ಯೆ ಎದುರಿಸಿದವರಿಗೆ ದೀರ್ಘ ಕಾಲದವರೆಗೆ ಹೃದಯ ಸಂಬಂಧಿ ಕಾಯಿಲೆ ಉಳಿಯಲಿದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

ನೇಚರ್‌ ಮೆಡಿಸನ್‌ ಅವರ ಅಧ್ಯಯನದ ಪ್ರಕಾರ ಕೋವಿಡ್‌ನಿಂದ ಬಳಲಿದವರಲ್ಲಿ ಹೃದಯ ಸಂಬಂಧಿ ಕಾಯಿಲೆ ದೀರ್ಘಕಾಲ ದವರೆಗೆ ಉಳಿಯಲಿದೆ ಎನ್ನಲಾಗಿದೆ. ಇದು ಎಲ್ಲಾ ಹೃದಯ ಸಂಬಂಧಿ ರೋಗಿಗಳಿಗೆ ಅನ್ವಯಿಸದೇ ಇದ್ದರೂ ಕೆಲವರು ಈ ಸಮಸ್ಯೆ ಎದುರಿಸಬೇಕಾಗಿದೆ.

ನೇಚರ್‌ ಮೆಡಿಸನ್‌ ಅಧ್ಯಯನದ ಪ್ರಕಾರ, ಕೋವಿಡ್‌ನಿಂದಾಗಿ ಹೃದಯ ಸಮಸ್ಯೆ ಹೊಂದಿರುವ ರೋಗಿಯ ದೇಹವು ಒಂದು ವರ್ಷದ ಬಳಿಕ ಅವರ ಕಾಲುಗಳು ಮತ್ತು ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ರುಜುವಾತು ಮಾಡಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಫೋರ್ಟಿಸ್‌ ಆಸ್ಪತ್ರೆ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕ ಡಾ. ರಾಜ್‌ಪಾಲ್‌ ಸಿಂಗ್‌, ಕೋವಿಡ್‌ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುವುದರಲ್ಲಿ ಅನುಮಾನ ವಿಲ್ಲ. ಕೋವಿಡ್‌ನಿಂದ ಚೇತರಿಕೆಯಾದ ಬಳಿಕವೂ ಹೃದಯ ಸಮಸ್ಯೆ ಇರುವ ರೋಗಿಗಳಿಗೆ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆ, ರಕ್ತ ಹೆಪ್ಪುಗಟ್ಟುವುದು, ಎದೆ ನೋವು, ತಲೆ ತಿರುಗುವಿಕೆ, ಹೃದಯಾಘಾತವೂ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನಲಾ ಗಿದೆ.

ನಿರ್ಲಕ್ಷ್ಯ ಬೇಡ: ಕೋವಿಡ್‌ನಿಂದ ಈಗಾಗಲೇ ಹೆಚ್ಚು ಆರೋಗ್ಯ ಸಮಸ್ಯೆ ಎದುರಿಸಿರುವವರು ಹೃದಯದ ಕಾಳಜಿ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಹೃದಯದಲ್ಲಿ ಸಣ್ಣ ಏರಿಳಿತವಾದರೂ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಏಕೆಂದರೆ, ಅಧ್ಯಯನದ ಪ್ರಕಾರ ಶೇ.೨೫ ರಿಂದ ೩೦ ರಷ್ಟು ಜನರಿಗೆ ಹೃದಯದ ಶಾಶ್ವತ ಅಥವಾ ದೀರ್ಘಕಾಲಿಕ ಸಮಸ್ಯೆ ಬಾಧೀಸಬಹುದು ಎಂದು ಹೇಳಲಾಗಿದೆ. ಕೋವಿಡ್‌ ವೈರಸ್‌ ನೇರವಾಗಿ ಹೃದಯದ ಸ್ನಾಯುವಿನ ಮೇಲೆ ದಾಳಿ ಮಾಡಿರುವ ಕಾರಣ ಈ ಕ್ಯಾಟಗರಿ ರೋಗಿಗಳು ಹೆಚ್ಚು ಜಾಗರೂಕರಾಗಿ ಇರಬೇಕು.

ವ್ಯಾಯಾಮ ಇರಲಿ: ಹೃದಯ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲಿ ಬೊಜ್ಜೂ ಕೂಡ ಒಂದು. ಈಗಾಗಲೇ ಈ ಸಮಸ್ಯೆ ಎದುರಿಸು ತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೀಗಾಗಿ ನಿಯಮಿತ ವ್ಯಾಯಾಮವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ರೂಢಿಸಿಕೊಳ್ಳಿ. ಇದು ನಿಮ್ಮ ಹೃದಯದ ಆರೋಗ್ಯವನ್ನು ಸಮತೋಲನದಿಂದ ಕಾಯ್ದುಕೊಳ್ಳಲಿದೆ. ಜೊತೆಗೆ, ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರ ಸೇವಿಸಿ.

ತಪಾಸಣೆ ಮಾಡಿಸಿಕೊಳ್ಳಿ: ಕೋವಿಡ್‌ ನಿಮ್ಮ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರಿರುತ್ತದೆ. ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಅತಿ ಮುಖ್ಯ. ಈಗಾಗಲೇ ಹೃದಯದ ಸಮಸ್ಯೆ ಇರುವವರು ಯಾವ ಕಾರಣಕ್ಕೂ ಈ ತಪಾಸಣೆಯನ್ನು ನಿರ್ಲಕ್ಷಿಸದಿರಿ.