Fake Certificate: ಬೆಂಗಳೂರಲ್ಲಿ ಬಿಕರಿಗಿವೆ ಅಮೆರಿಕ ವಿವಿಯ ಗೌರವ ಡಾಕ್ಟರೇಟ್ !
ಬೊಲಿವಿಯಾ ದೇಶದ ಗೂಗಲ್ ಮ್ಯಾಪ್ ಏನಾದರೂ ತೆಗೆದು ನೋಡಿದರೆ ನಿಮಗೆ ಈ ವಿಶ್ವವಿದ್ಯಾಲಯ ಇರುವ ಯಾವುದೇ ಕುರುಹು ಕಂಡು ಬರುವು ದಿಲ್ಲ. ಸಿರ್ಸಿ ಮಾರಿಗುಡಿ ಪಕ್ಕದ ಪಾನ್ ಶಾಪ್ ಕೊಡ ಗೂಗಲ್ ಮ್ಯಾಪ್‌ನಲ್ಲಿ ರಾರಾಜಿಸುತ್ತದೆ, ಆದರೆ ಅದೂ ಪ್ರತಿವರ್ಷ 17 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ವಿಶ್ವವಿದ್ಯಾಲಯದ ನಿಖರ ವಿಳಾಸ ಗೂಗಲ್ ಮ್ಯಾನಲ್ಲಿ ನಿಮಗೆ ಸಿಗುವುದಿಲ್ಲ


ಡಾ.ಎಸ್ ರಾಧಾಕೃಷ್ಣನ್ ಟೀಚರ್ಸ್ ವೆಲ್ ಫೇರ್ ಅಸೋಸಿಯೇಷನ್ ಸಂಸ್ಥೆ ಹೆಸರಲ್ಲಿ ಶಿಫಾರಸ್ಸು
ನಿಮಗೋ, ನಿಮ್ಮ ಆಪ್ತರಿಗೋ ‘ಗೌರವ- ಡಾಕ್ಟರೇಟ್’ ಪದವಿ ಸಿಕ್ಕರೆ ಎಷ್ಟು ರೋಚಕ ಅಲ್ಲವೇ! ಆದರೆ ಆ ಖುಷಿಯನ್ನು ಅನುಭವಿಸುವ ಮೊದಲು ಒಮ್ಮೆ ಯೋಚಿಸಿ, ಅದೂ ‘ದಿ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ’ ದಿಂದ ಸಿಕ್ಕಿದ್ದರೆ ಒಂದು ನಿಮಿಷ ತಾಳಿ. ಹಾಗೆಯೇ ಖುಷಿ ಪಡಿ.
ಮತ್ತೇನೂ ಮಾಡಬೇಡಿ. ಬಹಳ ಖುಷಿಪಟ್ಟು ಆ ವಿಶ್ವವಿದ್ಯಾಲಯದ ಹೆಸರನ್ನು ಗೂಗಲ್ ಸರ್ಚ್ ಮಾಡಿ ಬಿಡಬೇಡಿ. ಆಗ ನಿಮ್ಮ ಸಂತೋಷ ಅರ್ಧ ಕಡಿಮೆ ಆಗುತ್ತದೆ. ಯಾಕೆಂದರೆ ಗೂಗಲ್‌ನಲ್ಲಿ ನಿಮಗೆ ತಿಳಿಯುವುದು ಈ ವಿಶ್ವವಿದ್ಯಾಲಯವಿರುವುದು ಯುಎಸ್‌ಎದಲ್ಲಿ ಅಲ್ಲ, ದಕ್ಷಿಣ ಅಮೆರಿಕ ದ ಬೊಲಿವಿಯಾ ಎಂಬ ದೇಶದಲ್ಲಿ.
ಆದರೆ ವಿಶ್ವವಿದ್ಯಾಲಯಕ್ಕೆ ಅದರದೇ ಆದ ಒಂದು ವೆಬ್‌ಸೈಟ್‌ಯಿದೆ. (www.ucab. us) ಕೊಡಲ್ಪಟ್ಟಿರುವ ಪ್ರಮಾಣ ಪತ್ರದಲ್ಲಿಯೂ ಇದೇ ವೆಬ್‌ಸೈಟ್‌ನ ವಿವರವನ್ನು ಅಚ್ಚೊತ್ತಲಾಗಿದೆ. ಅದು ಚಾಲ್ತಿ ಯಲ್ಲಿಯೂ ಇದೆ.
ಇದನ್ನೂ ಓದಿ: Vishweshwar Bhat Column: ಪ್ರತಿಸ್ಪರ್ಧಿ ಮೇಲೆ ಹದ್ದಿನಗಣ್ಣು
ಅದರ ನಮೂದಿಸಿರುವ ವಿಳಾಸವನ್ನು ಬೊಲಿವಿಯಾ ದೇಶದ ಗೂಗಲ್ ಮ್ಯಾಪ್ ಏನಾದರೂ ತೆಗೆದು ನೋಡಿದರೆ ನಿಮಗೆ ಈ ವಿಶ್ವವಿದ್ಯಾಲಯ ಇರುವ ಯಾವುದೇ ಕುರುಹು ಕಂಡು ಬರುವು ದಿಲ್ಲ. ಸಿರ್ಸಿ ಮಾರಿಗುಡಿ ಪಕ್ಕದ ಪಾನ್ ಶಾಪ್ ಕೊಡ ಗೂಗಲ್ ಮ್ಯಾಪ್‌ನಲ್ಲಿ ರಾರಾಜಿಸುತ್ತದೆ, ಆದರೆ ಅದೂ ಪ್ರತಿವರ್ಷ 17 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ವಿಶ್ವವಿದ್ಯಾಲಯದ ನಿಖರ ವಿಳಾಸ ಗೂಗಲ್ ಮ್ಯಾನಲ್ಲಿ ನಿಮಗೆ ಸಿಗುವುದಿಲ್ಲ.
ಯಂಕಣ್ಣ-ಶೀನಣ್ಣ ಕೂಡ ಈ ವಿಶ್ವವಿದ್ಯಾಲಯದಲ್ಲಿ ನೊಂದಣಿ ಮಾಡಬಹುದು. ಎಲ್ಲಾ ತರಹದ ಕೋರ್ಸ್ ಗಳಿಗೂ ಅವಕಾಶವಿದೆ. ಯಾವುದೇ ವಿಶೇಷ ಮಾನದಂಡವೇ ಇಲ್ಲ. ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಕೊಟ್ಟರೆ ಅದೇ ಚೆಕ್ ಮಾಡಿ ಹೇಳುತ್ತದೆ, ನೀವು ಅಡ್ಮಿಷನ್ ಆಗಿದ್ದೀರಿ, ಸರ್ಟಿಫಿಕೆಟ್ ಕೊಟ್ಟಿ ದೆಯೇ ಇಲ್ಲವೋ ಎಂಬುದಾಗಿ. ಅಷ್ಟರಮಟ್ಟಿಗೆ ಅದು ಸತ್ಯವನ್ನೇ ತೋರಿಸುತ್ತದೆ.
ಬಹುತೇಕರ ಪ್ರಮಾಣ ಪತ್ರದಲ್ಲಿ ‘ಡಾ.ಎಸ್.ರಾಧಾಕೃಷ್ಣ ಟೀಚರ್ಸ್ ವೆಲ್ ಫೇರ್ ಅಸೋಸಿಯೇ ಷನ್’ನಿಂದ ಶಿಫಾರಸು ಮಾಡಲ್ಪಟ್ಟಿರುವಂತೆ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡ ಲಾಗುತ್ತಿದೆ ಎಂದು ಬರೆಯಲಾಗಿರುತ್ತದೆ.
ಅಷ್ಟಕ್ಕೂ ಈ ಸಂಸ್ಥೆ ಅಧಿಕೃತವೇ?: ಈ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಯ ಬಗ್ಗೆ ಮೊದಲಿಗೆ ಎದುರಾಗುವ ಪ್ರಶ್ನೆಯೆಂದರೆ, ಹೀಗೊಂದು ಅಧಿಕೃತ ಸಂಸ್ಥೆ ಇದೆಯೇ ? ಈ ಶಿಕ್ಷಕರ ಅಸೋಸಿ ಯೇಷನ್ ಬಗ್ಗೆ. ನೀವೂ ಒಮ್ಮೆ ( https:// www.allindiateacherswel fareassociation.org ) ತೆಗೆದು ನೋಡಿ. ಮೇಲ್ನೋಟಕ್ಕೆ ಇಡೀ ವೆಬ್ಸೈಟ್ ಸಂವಿಧಾನ ಬದ್ಧವಾಗಿ ರೂಪಿಸಿದ ಭಾರತದ ಶಿಕ್ಷಕರ ಒಕ್ಕೂಟ ಎನ್ನಿಸುತ್ತದೆ. ಹಾಗೆ ತಲೆಬರಹವೂ ಇದೆ. ಆದರೆ ರಿಜಿಸ್ಟರ್ ಮಾಡಿಸಿದ ಯಾವುದೇ ಕುರು ವಿಲ್ಲ. ಆದರೂ ಅದಕ್ಕೆ ಒಂದು ಆಡಳಿತ ಮಂಡಳಿ ಇದೆ.
ನಾವು ಶೋಧಿಸಿದಂತೆ ಅಲ್ಲಿರುವ ಎಲ್ಲ ಸಮಿತಿಯ ಸದಸ್ಯರ ಹೆಸರುಗಳು ಬೇನಾಮಿ ಯಾಗಿದೆ. ಈ ಸಮಿತಿಗೆ ಸಿಇಓ ಡಾ.ಆರ್.ಅಶೋಕ್ ಗೌಡ ಎಂದು ನಮೂದಿಸಲಾಗಿದೆ. ಹೀಗೊಬ್ಬರು ಇzರೋ ಇಲ್ಲವೋ ಎಂದು ಹುಡುಕೋದು ಪೊಲೀಸರೇ ಮಾಡಿದರೆ ಒಳಿತು. ಲಿಂಕ್‌ನಲ್ಲಿ ಮತ್ತು ಈ ಅಸೋಸಿ ಯೇಷನ್ ವೆಬ್‌ಸೈಟ್‌ನಲ್ಲಿ ಇವರ ಕೆಲವು ಮಾಹಿತಿಗಳು ಮೇಲ್ನೋಟಕ್ಕೆ ತಪ್ಪೇ ತೋರಿಸುತ್ತವೆ.
ಈ ಸಂಸ್ಥೆಗೆ ಶಿಕ್ಷಕರೇ ಟಾರ್ಗೆಟ್: ವಿಶ್ವವಿದ್ಯಾಲಯದಿಂದ ಕೊಡಿಸುವ ಗೌರವ ಡಾಕ್ಟರೇಟ್ ಇರಬ ಹುದು, ಶಿಫಾರಸು ಮಾಡುವ ಅಸೋಸಿಯೇಷನ್ ಇರಬಹುದು. ಈ ಎರಡರಲ್ಲಿಯೂ ಶಿಕ್ಷಕರೇ ಟಾರ್ಗೆಟ್! ಅಸೋಸಿಯೇಷನ್ ವೆಬ್ಸೈಟ್‌ನಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಅರ್ಜಿ ಹಾಕಬಹುದು! ನೀವು ಪ್ರಾಂಶುಪಾಲರು, ನಿರ್ದೇಶಕ, ಆಡಳಿತ ಮಂಡ್ಯ ಮಂಡಳಿಯ ಅಧಿಕಾರಿಗಳು, ಪ್ರಾಧ್ಯಾ ಪಕರು, ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಯಾರಿಗೆ ಬೇಕಾದರೂ ಇವರು ಗೌರವ ಡಾಕ್ಟರೇಟ್ ಕೊಡುತ್ತಾರೆ.
ಹಾಗೇ ನೋಡಿದರೆ, ಕೊನೆಗೆ ಯಾರೂ ಸಿಗಲಿಲ್ಲವೆಂದರೆ ಶಿಕ್ಷಕರಿಗೂ ‘ಗೌರವ-ಡಾಕ್ಟರೇಟ್’ ಪದವಿಗೆ ಅರ್ಜಿ ಸಲ್ಲಿಸಬಹುದು. ಕೇವಲ ಒಂದು ಪುಟ ಅರ್ಜಿ ಸಲ್ಲಿಸಿದರೆ, ಮುಂದಿನ 45 ವಾರಗಳಲ್ಲಿ ನೀವು ‘ಗೌಡಾ’ ಪದವಿ ನಿಮ್ಮದಾಗಬಹುದು. ನೆನಪಿರಲಿ ಈ ಪ್ರಶಸ್ತಿಯನ್ನು ಶಿಫಾರಸು ಮೂಲಕ ಮಾತ್ರ ಕೊಡಲಾಗುವುದು. ನಿಮ್ಮ ಸಂಸ್ಥೆಯ ಪ್ರಾಂಶುಪಾಲರು ಅಥವಾ ಅಧ್ಯಕ್ಷರ ಶಿಫಾರಸು ಕಡ್ಡಾಯ. ಈ ಆದರೆ ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ಅರ್ಜಿಗೆ ಯಾವುದೇ ಶುಲ್ಕವಿಲ್ಲ ಎಂದು ಮೂದಿಸಲಾಗಿದೆ.
ಕೊನೆಯಲ್ಲಿ ಬರೆದ ಎರಡು ತುಣುಕುಗಳು ಈ ಗೌರವ ಡಾಕ್ಟರೇಟ್ ಪದವಿಯ ಸತ್ಯಾ-ಸತ್ಯತೆಯನ್ನು ತಿಳಿಸುತ್ತದೆ. ಅವರೇ ಹೇಳುವ ಪ್ರಕಾರ ಪ್ರಶಸ್ತಿ ನೀಡುವ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವು ಸ್ವಾಯಸ್ಥ ಸಂಸ್ಥೆ ಆಗಿರ ಬಹುದು. ಇದಕ್ಕೆ ಬೇರೆ ಯಾವ ದೇಶದ ದೃಢೀಕರಿಸಬೇಕು ಎಂದಿಲ್ಲ. ಎರಡನೇಯದಾಗಿ ಒಪ್ಪಿಗೆ ಪತ್ರ ಬಂದ ನಂತರ ಸೇವಾ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಇವೆರಡೂ ಸಂಗತಿಗಳು, ಅರ್ಜಿಯಲ್ಲಿಯೇ ನಮೂದಿಸಿದ್ದರೂ, ಅದನ್ನು ತುಂಬಿ, ಶಿಫಾರಸ್ಸು ತೆಗೆದುಕೊಳ್ಳುವವ ಎಂತಹ ಪಂಡಿತನಿರ ಬೇಕು !
ಕೊನೆಯಲ್ಲಿ ಇದೇ ಅಸೋಸಿಯೇಷನ್ ವೆಬ್‌ಸೈಟ್‌ನಲ್ಲಿ ಕಾನೂನು ವಿಭಾಗಕ್ಕೂ ಸಂಪರ್ಕ ಕೊಡ ಲಾಗಿದೆ. ಅಲ್ಲಿ, ಯಾವುದೋ ಮತ್ತೊಬ್ಬ ಗೌಡರ ಹೆಸರನ್ನು ಉಚ್ಚ ನ್ಯಾಯಾಲಯದ ವಕೀಲರು ಎಂದು ನಮೂದಿಸಿಲಾಗಿದೆ. ಅಸಲಿಗೆ ಮೇಲಿನ ವ್ಯಕ್ತಿ ಸಿಇಒ ಹತ್ತಿರದ ಸಂಬಂಧಿ ಎನಿಸುತ್ತಾರೆ. ಅವರ ಹೆಸರಿನಲ್ಲಿ ಯಾವುದೇ ಅಽಕೃತ ಮಾಹಿತಿ ಸಿಗುವುದು ಕಷ್ಟ. ಅಂದಹಾಗೆ ಎಲ್ಲರ ವಿಳಾಸವೂ, ಬೆಂಗಳೂರಿನ ಜ್ಞಾನ ಭಾರತಿ, ನಾಗರಬಾವಿ ಹತ್ತಿರವೇ ಇದೆ.
ಇಲ್ಲಿ ಗಮನಿಸಲೇ ಬೇಕಾದ ಅಂಶವೆಂದರೆ, ಅರ್ಜಿಯ ವಿವರಗಳು ಟಿಪ್ಪಣಿ ಗಳಿದ್ದರೂ, ಅರ್ಜಿ ಹಾಕುವುವರು, ಶಿಫಾರಸ್ಸು ಮಾಡುವು ವರು ಇರುತ್ತಾರೆ. ಅಸೋಸಿಯೇಷನ್ ಹೆಸರಿನಲ್ಲಿ ಮೋಸ ಮಾಡುವುದು ಯಾವ ಲೆಕ್ಕ. ಒಟ್ಟಿನಲ್ಲಿ ಎಲ್ಲರಿಗೂ ಬೇಕು ಡಾಕ್ಟರ್ ಎಂಬ ಹೆಗ್ಗಳಿಕೆ. ಯೂನಿ ವರ್ಸಿಟಿ ವೆಬ್‌ಸೈಟ್ ಮಾಡಿದ್ದು ಯಾರು? ನಮ್ಮಲ್ಲಿಯ ಎಷ್ಟು ಜನ ಮಾಸ್ತರುಗಳು ಭಾಗೀದಾರರು, ಮತ್ತು ಭಾಗ್ಯದಾರರು? ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ ಭಾಗ್ಯದಾರರು ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ಸೀಮಿತ ಭಾರತದ ಬೇರೆ ಬೇರೆ ನಗರಗಳಿಗೂ ಹಬ್ಬಿದ್ದಾರೆ. ಎಲ್ಲದಕ್ಕೂ ಸರಿಯಾದ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ.
ಅಶೋಕ್‌ಗೌಡ ಶಿಫಾರಸೇ ಎಲ್ಲ ಡಾಕ್ಟರೇಟ್‌ಗೂ ಮಾನದಂಡ
ಇದು ಇಂದು ನಿನ್ನೆಯ ಮಾತಲ್ಲ. ಇದೇ ಶಿಕ್ಷಕರ ಅಸೋಸಿಯೇಷನ್ ಶಿಫಾರಸ್ಸಿನ ಮೇಲೆ ಹೆಸರಿನಲ್ಲಿ 2017ರಲ್ಲಿ ಹಲವಾರು ಜನರಿಗೆ ಸೌಥ್ ಅಮೆರಿಕನ್ ಯುನಿವರ್ಸಿಟಿಯಲ್ಲಿ ಡಿ.ಲಿಟ್ ಪದವಿಯನ್ನೂ ವಿತರಣೆ ಮಾಡಲಾಗಿದೆ. ಈಗಲೂ ಈ ವಿಶ್ವವಿದ್ಯಾಲಯದ ಹೆಸರಿನಲ್ಲಿ ವೆಬ್‌ಸೈಟ್‌ಯಿದೆ. ಪನಾಮ ದೇಶದ ಈ ವಿಶ್ವವಿದ್ಯಾಲಯದಲ್ಲಿ ೫೫ ಸಾವಿರ ಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ವೆಬ್ ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆದರೂ ನಿಖರ ವಿಳಾಸ ಗೂಗಲ್ ಮ್ಯಾಗೆ ಗೊತ್ತಿಲ್ಲ. ಇಲ್ಲಿಯೂ ಶಿಕ್ಷಕರ ಮೂಲ ಪದವಿ ಅನುಗುಣ ವಾಗಿ ಡಿ.ಎಸ್‌ಸಿ ಅಥವಾ ಡಿ.ಲಿಟ್ ಪದವಿಯು ಗೌರವದ ಮೂಲಕ ಸಿಗುತ್ತದೆ. ಆದರೆ ವಿಚಿತ್ರ ಎಂದರೆ, ಎಲ್ಲಾ ನದಿಗಳು ಸಮುದ್ರ ಸೇರುವಂತೆ, ಎಲ್ಲಾ ಡಾಕ್ಟರೇಟ್ ಡಿಗ್ರಿಗೆ ಬೆಂಗಳೂರಿನ ಡಾ. ಅಶೋಕ ಗೌಡರ ಅಸೋಸಿಯೇಷನ್ ಶಿಫಾರಸು ಮುಖ್ಯ ಅಷ್ಟೇ. ಮೂಲತಃ ಅವರ ಡಾಕ್ಟರೇಟ್ ಕೂಡ ‘ಅಮೆರಿಕನ್’ ವಿವಿ ಎಂಬುದು ಹಲವರ ಅಂಬೋಣ.
ಬೆಂಗಳೂರಿನ ವಿಳಾಸ
ಅಮೆರಿಕದ (ದಕ್ಷಿಣ ಅಮೆರಿಕದ, ಬೊಲಿವಿಯಾ ಎಂದೂ ಹೇಳದ) ಡಿಗ್ರಿ, ಕೇವಲ ಹತ್ತು ಸಾವಿರ ದಿಂದ- ಲಕ್ಷದವರೆಗೆ ವಿಶ್ವವಿದ್ಯಾಲಯದ ಸೇವಾ ಶುಲ್ಕ ಕಟ್ಟಿದರೆ ಸಿಗುತ್ತದೆ. ಡಿಗ್ರಿ ಅಮೆರಿಕದ್ದಾದರೂ ಸೇವಾಶುಲ್ಕ ಮಾತ್ರ ಬೆಂಗಳೂರಿನ ನಾಗರಬಾವಿ ಅಥವಾ eನಭಾರತಿ ವಿಳಾಸಕ್ಕೆ ಕಳುಹಿಸಬೇಕು. ಸರಿಯಾಗಿ ಒಂದು ಸಲ ಈ ಮೇಲಿನ ವಿಶ್ವವಿದ್ಯಾಲಯ ಎಂದು ಕರೆಯಲ್ಪಟ್ಟ ವೆಬ್ ಸೈಟ್ ನೋಡಿ ದರೆ ಎರಡು ನಿಮಿಷದಲ್ಲಿ ಫೇಕ್ ಎಂದು ಹೇಳಬಹುದು. ನಮ್ಮಲ್ಲಿಯ ಹಲವು ಡಿಪ್ಲೊಮಾ ಕಾಲೇ ಜಿನ ವೆಬ್‌ಸೈಟ್‌ಗಳು ಉತ್ತಮವಾಗಿರುತ್ತದೆ. ಅಲ್ಲಿ ಕೊಟ್ಟಿರುವ ಕುಲಪತಿ ಅಥವಾ ಅಧಿಕಾರಿ ಗಳ ಹೆಸರೂ ಕೂಡ ಅಸಲಿಯದಲ್ಲ. ಯಾವುದೋ ಗುರುತು ಪರಿಚಯವಿರದ ಪಾಶ್ಚಿಮಾತ್ಯರ ಫೋಟೋ, ಎಂದೂ ಕೇಳದ ಹೆಸರುಗಳು, ಈ ವೆಬ್‌ಸೈಟ್‌ಗಳ, ಡಿಗ್ರಿ ಕೊಂಡುಕೊಳ್ಳುವುರ ಭರವಸೆ ಯ ಬುನಾದಿಗಳು. ಎರಡು ವೆಬ್‌ಸೈಟ್ ಹುಟ್ಟುಹಾಕುವ ಕರಾಮತ್ತನ್ನು ಕಾಲೇಜು ಮೆಟ್ಟಿಲು ತುಳಿ ಯದ ಮಾಣಿಯೂ ಮಾಡಬಹುದು ಎಂಬುದು ನಮ್ಮಲ್ಲಿಯ ಕಾಲೇಜು ಮಾಸ್ತರಿಗೆ ತಿಳಿದಿಲ್ಲವೇ!
ಬೋಲಿವಿಯ ಯೂನಿವರ್ಸಿಟಿ ವೆಬ್‌ಸೈಟ್ ಹೇಳುತ್ತದೆ, ಬೊಲಿವಿಯಾವಿಯಾದ ಜೀವನ ಭಾರತೀ ಯ ಸಂಸ್ಕೃತಿಯನ್ನು ಹೋಲುತ್ತದೆ ಮತ್ತು ಅನುಸರಿಸುತ್ತಿದೆ ಎಂದು. ಭಾರತದಲ್ಲಿಯೇ ಕುಳಿತು ವೆಬ್‌ಸೈಟ್ ರೂಪಿಸಿದರೆ, ಇನ್ನೇನು ಬರೆಯಲು ಸಾಧ್ಯ? ಎನ್ನುವುದು ಅನೇಕರ ಆರೋಪವಾಗಿದೆ.