Saturday, 11th January 2025

Green Nano Tech: ಗ್ರೀನ್‌ ನ್ಯಾನೋ ಟೆಕ್‌ ಕ್ಷೇತ್ರದಲ್ಲಿ ಅನಂತಕುಮಾರ್‌ ಹೆಗಡೆ ವಿಶ್ವಕ್ರಾಂತಿ

ಸಸ್ಯಜನ್ಯ ಔಷಧಿಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ

ವಿಶ್ವದ ಮೊದಲ ಗ್ರೀನ್ ನ್ಯಾನೋ ಕೇಂದ್ರ ಬೆಂಗಳೂರಿನಲ್ಲಿ

ಬೆಂಗಳೂರು: ರಾಜಕೀಯದಿಂದ ವಿಶ್ರಾಂತಿ ಪಡೆಯುತ್ತಿರುವ ಹಿಂದುತ್ವದ ಫೈರ್ ಬ್ರ್ಯಾಂಡ್ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಪ್ರಪಂಚದಲ್ಲೇ ಮೊದಲ ಬಾರಿಗೆ ಸದ್ದಿಲ್ಲದೆ ಹಸಿರು ನ್ಯಾನೋ ಕ್ರಾಂತಿ ಮಾಡಿದ್ದಾರೆ. ಇವರೊಂದಿಗೆ ಹಸಿರು ನ್ಯಾನೋದ ಪಿತಾಮಹ ವಿಜ್ಞಾನಿಯೊಬ್ಬರು ಕೈಜೋಡಿಸಿದ್ದು, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಕದಂಬ ಸಂಸ್ಥೆಯ ಔಷಧಿ ಹಾಗೂ ಇನ್ನಿತರ ಉತ್ಪನ್ನಗಳು ರಾಮಬಾಣವಾಗಿ ಹೊರಹೊಮ್ಮಿದೆ.

ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ವೇದಿಕ್ ಜ್ಞಾನವನ್ನು ೨೧ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ವಿಶ್ವದ ಮೊಟ್ಟ ಮೊದಲ ಬಾರಿಗೆ ಗ್ರೀನ್ ನ್ಯಾನೋ ರಿಯಾಕ್ಟರ್ ಸ್ಥಾಪಿಸ ಲಾಗಿದೆ. ನ್ಯಾನೋರ್ವೇದದ (ನ್ಯಾನೋ ಆಯುರ್ವೇದ) ಸುಮಾರು 8 ಪೇಟೆಂಟ್ ಸೇರಿ ತಮ್ಮ ಎಲ್ಲ ಗ್ರೀನ್ ನ್ಯಾನೋ ಉತ್ಪನ್ನಗಳಿಗೂ ಕದಂಬ ಸಂಸ್ಥೆ ರಾಷ್ಟ್ರೀಯ ಆರೋಗ್ಯ ಮಂಡಳಿಯ ಒಪ್ಪಿಗೆ ಪಡೆದುಕೊಂಡಿದೆ. ಗ್ರೀನ್ ನ್ಯಾನೋ ತಂತ್ರಜ್ಞಾನ ಮೂಲಕ ಔಷಧಿಯ ಗುಣಗಳುಳ್ಳ ಗಿಡಮೂಲಿಕೆಗಳಿಂದ ಮಾಲಿಕ್ಯೂಲ್ಸ್ (ಕಣ) ತೆಗೆದು ಔಷಧಗಳನ್ನು ತಯಾರಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಈ ಔಷಧ ಕಾಯಿಲೆಗಳ ಮೇಲೆ ಖಚಿತ ಪ್ರಭಾವ ಬೀರುವುದನ್ನು ಸಾಬೀತುಪಡಿಸುವ ಬಗ್ಗೆ ಆಧಾರಗಳನ್ನು ಕೊಡುವಂಥ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ನ್ಯಾನೋಕೇರ್ ಔಷಧಿ?
ಡಾ.ಕಟ್ಟೇಶ್ ಕಟ್ಟಿ ಹಾಗೂ ಅನಂತಕುಮಾರ್ ಅವರು ಅಭಿವೃದ್ಧಿಪಡಿಸಿರುವ ಈ ನ್ಯಾನೋಕೇರ್ ಔಷಧಗಳು ಭಾರತದ ಆಯುರ್ವೇದ ಹಾಗೂ ಪಾಶ್ಚಿಮಾತ್ಯ ಅಲೋಪತಿ ಔಷಧಗಳ ನಡುವಿನ ಸೇತುವೆಯಾಗಿದೆ. ಈ ನ್ಯಾನೋ ಆರೋಗ್ಯ ವಿಜ್ಞಾನವು ಕಾಯಿಲೆಗಳ ಚಿಕಿತ್ಸೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಕ್ರಾಂತಿ ಉಂಟು ಮಾಡಲಿದ್ದು, ಈಗಾಗಲೇ ಹಲವು ದೇಶಗಳಿಂದ ಇವರ ಉತ್ಪನ್ನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಇನ್ನಿತರ ದೇಶಗಳ ವಿಜ್ಞಾನಿಗಳು ಹಾಗೂ ತಜ್ಞರು ಇವರ ಸಂಸ್ಥೆಗೆ ಭೇಟಿ ನೀಡಿ ಸಂಶೋಧನೆ ಹಾಗೂ ಉತ್ಪನ್ನಗಳಿಗೆ ಬೇಡಿಕೆ ಇಡುತ್ತಿದ್ದಾರೆ.

ನ್ಯಾನೋ ಮೆಡಿಸಿನ್ ಇತರೆ ಔಷಧಿಗಿಂತ ಭಿನ್ನ ತಮ್ಮ ಗ್ರೀನ್ ನ್ಯಾನೋ ಕೇರ್ ಉತ್ಪನ್ನಗಳ ಬಗ್ಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಗ್ರೀನ್ ನ್ಯಾನೋ ತಂತ್ರಜ್ಞಾನದ ನೆರವಿನಿಂದ ನ್ಯಾನೋ ಗಾತ್ರದಲ್ಲಿ ಔಷಧಗಳನ್ನು ಮಾಡಬಹುದು. ಇದೊಂದು ಶುದ್ಧ ವಿಜ್ಞಾನ. ಮನುಷ್ಯನ ಜೀವಕಣಗಳು 12 ರಿಂದ 18ರಷ್ಟು ಮೈಕ್ರಾನ್ ನಷ್ಟು ಸೂಕ್ಷ್ಮ ಗಾತ್ರ ಹೊಂದಿರುತ್ತದೆ. ಕ್ಯಾನ್ಸರ್ ಟ್ಯೂಮರ್ ಕಣಗಳು ಅಷ್ಟೇ ಗಾತ್ರ ಹೊಂದಿರುತ್ತವೆ. ಈಗಿನ ಔಷಧಗಳು ಈ ಕಣಗಳಿಗಿಂತ ದೊಡ್ಡ ಗಾತ್ರ ಹೊಂದಿರುವುದರಿಂದ ಜೀವಕಣಗಳ ಒಳ ನುಸುಳಿ ಪ್ರಭಾವ
ಬೀರಬಲ್ಲಷ್ಟು ಶಕ್ತಿಶಾಲಿ ಆಗಿಲ್ಲ. ಆದರೆ ನ್ಯಾನೋ ಔಷಧಿಯ ಕಣಗಳು ಜೀವಕಣಗಳಿಗಿಂತ ಅತ್ಯಂತ ಸೂಕ್ಷ್ಮ ವಾಗಿರುವುದರಿಂದ ಜೀವ ಕಣಗಳ ಒಳಗೆ ನುಸುಳಿ ಹೆಚ್ಚು ಪ್ರಭಾವ ಬೀರಬಲ್ಲವಂಥ ವಾಗಿವೆ. ಆದ್ದರಿಂದ ಸಾಧಾರಣ ಔಷಧಿಯ ಕಣಗಳಿಗಿಂತ ನ್ಯಾನೋ ಔಷಽಯ ಕಣಗಳು ಹೆಚ್ಚು ಪರಿಣಾಮಕಾರಿ ಎಂದರು.

ಈಗಿರುವ ಪದ್ಧತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕಿಮೋಥೆರಪಿ, ರೇಡಿಯೋಥೆರಪಿ ಮಾಡಿದಾಗ ಇಡೀ ದೇಹದ ಇಮ್ಯುನಿಟಿ ಕುಗ್ಗುತ್ತದೆ. ಔಷಧಗಳು ಟ್ಯೂಮರ್ ಸೆಲ್ ಬದಲಿಗೆ ರಕ್ತ, ಆರೋಗ್ಯವಂತ ಜೀವ ಕಣಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ನ್ಯಾನೋ ಮೆಡಿಸಿನ್ ನೆರವಾಗುತ್ತದೆ. ಬಂಗಾರ, ಬೆಳ್ಳಿಯಂಥ ಲೋಹದ ಕಣಗಳನ್ನು ಔಷಧದಲ್ಲಿ ಬಳಕೆ ಮಾಡುವ ಪರಂಪರೆ ಎಲ್ಲಾ ಔಷಧಿಯ ಪದ್ಧತಿಗಳಲ್ಲೂ ಇದೆ. ಭಾರತ, ಚೀನಾ, ಈಜಿಪ್ಟ್, ಗ್ರೀಕ್ ಎಲ್ಲಾ ಆಯುರ್ವೇದ ಪದ್ಧತಿಗಳಲ್ಲೂ ಚಿನ್ನವನ್ನು ಭಸ್ಮದ ರೂಪದಲ್ಲಿ ಚಿಕಿತ್ಸೆಗೆ ಬಳಸುತ್ತಿದ್ದರು.

ಅದಕ್ಕೆ ರಜತ ಭಸ್ಮ, ಸ್ವರ್ಣಭಸ್ಮ ಎಂಬ ಹೆಸರುಗಳೂ ಇವೆ. ಇದೀಗ ನಾವು ಇದನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಮಾಡಲು ಚಿನ್ನ ಮತ್ತು ನ್ಯಾನೋ ಕಣಗಳನ್ನು ನ್ಯಾನೋ ಕೇರ್ ಔಷಧಗಳಲ್ಲಿ ಹದಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಡಾ.ಕಟ್ಟೇಶ್ ಕಟ್ಟಿ ತಿಳಿಸಿದರು.

ಗ್ರೀನ್ ನ್ಯಾನೋ ಕ್ರಾಂತಿ
ಆರೋಗ್ಯ ಜಾಗೃತಿಗೆ ಗ್ರೀನ್ ನ್ಯಾನೋ ಮೂಲಕ ಹಸಿರು ಆಯಾಮ ನೀಡುತ್ತಿರುವ ಕದಂಬ ಸಂಸ್ಥೆ, ನ್ಯಾನೋ ಕ್ಷೇತ್ರ ಸಂಶೋಧಿಸುವ ಅನಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಭವಿಷ್ಯದ ತಂತ್ರಜ್ಞಾನ ಎಂದೇ ಹೆಸರಾಗಿರುವ ಎಐ ನಂತೆ ಗ್ರೀನ್ ನ್ಯಾನೋ ಕೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ವಿಶ್ವದ ಮೊದಲ ಹಸಿರು ನ್ಯಾನೋ ರಿಯಾಕ್ಟರ್ ಸ್ಥಾಪನೆ ಮಾಡಿದ್ದು, ನೆಗೆಟಿವ್ ಕಾರ್ಬನ್ಎ ಮಿಷನ್ ತಂತ್ರಜ್ಞಾನ ಹೊಂದಿರುವ ರಿಯಾಕ್ಟರ್‌ನಲ್ಲಿ ಗಿಡಮೂಲಿಕೆ ಗಳನ್ನು ಹಾಕಿ ಅದರಿಂದ ನ್ಯಾನೋ ಮಾಲಿಕ್ಯೂಲ್ಸ್ (ಕಣ) ಹೊರ ತೆಗೆಯಲಾಗುತ್ತದೆ. ಇದರ ಮೂಲಕ ಪರಿಣಾಮ ಕಾರಿ ಔಷಧಗಳನ್ನು ತಯಾರಿಸಲಾಗುತ್ತಿದೆ.

ಇದು ಗಂಭೀರ ಹಾಗೂ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ ಎಂದು ಗ್ರೀನ್ ನ್ಯಾನೋ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಟ್ಟೇಶ್ ಕಟ್ಟಿ ಹೇಳಿದ್ದಾರೆ. ವಿಶ್ವದ ಮೊದಲ ಗ್ರೀನ್ ನ್ಯಾನೋ ಕೇಂದ್ರ ಬೆಂಗಳೂರಿನ ಜಯನಗರ ೪ನೇ ಬ್ಲಾಕ್‌ನಲ್ಲಿರುವ ವಿಶ್ವದ ಮೊದಲ ಗ್ರೀನ್ ನ್ಯಾನೋ ವೈದ್ಯಕೀಯ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಕದಂಬ ಸಂಸ್ಥೆಯಡಿ ಸ್ಥಾಪಿಸಿದ್ದಾರೆ.

ಈಗಾಗಲೇ ೧೦೦ಕ್ಕೂ ಹೆಚ್ಚು ಔಷಧ ಅಭಿವೃದ್ಧಿಪಡಿಸಿದ್ದು, ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿಶ್ವ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಿzರೆ. ಅಲ್ಲದೆ ಔಷಧಿ ತಯಾರಿಸುವ ಸಂಬಂಽತ ಘಟಕವು ಬೆಂಗಳೂರಿನ ಪೀಣ್ಯದಲ್ಲಿ ಆರಂಭಿಸಲಾಗಿದ್ದು, ಅಲ್ಲಿಂದಲೇ ಉತ್ಪನ್ನಗಳನ್ನು ಸರಬರಾಜು
ಮಾಡಲಾಗುತ್ತದೆ. ಸದ್ಯಕ್ಕೆ ಆನ್‌ಲೈನ್ ಮೂಲಕವೇ ಉತ್ಪನ್ನಗಳನ್ನು ವಿತರಿಸಲಾಗುತ್ತಿದ್ದು, ಬೇಡಿಕೆ ಹೆಚ್ಚಾದಂತೆ ಎಲ್ಲ ಕಡೆ ದೊರೆಯಲಿದೆ. ಹೀಗಿದ್ದರೂ ಇದು ಹಣ ಮಾಡುವ ಉದ್ದೇಶದಿಂದ ಆರಂಭವಾಗಿರುವ ತಂತ್ರಜ್ಞಾನ ವಾಗಲಿ ಹಾಗೂ ಉದ್ದೇಶವಾಗಲಿ ಅಲ್ಲ ಎಂದು ಅನಂತಕುಮಾರ್ ಹೆಗಡೆ ತಿಳಿಸಿದರು .

ಅಣು-ಕಣ/ಸಸ್ಯಜನ್ಯ
ತಂತ್ರಜ್ಞಾನ ಎಂದಿಗೂ ಮಾತನಾಡುವುದಿಲ್ಲ. ಬದಲಾಗಿ ಅದರ ಉತ್ಪನ್ನವೇ ಅಂತಿಮ. ಆರೋಗ್ಯ ಕೇತ್ರದಲ್ಲಿ ಹಲವಾರು ಸಂಶೋಧನೆಗಳು ನಡೆದಿದ್ದರೂ ಕೆಲವೊಂದು ಮಾತ್ರ ಬೆಳಕಿಗೆ ಬರುತ್ತದೆ. ಮತ್ತೆ ಹಲವು ದಾಖಲೆ, ಪ್ರಬಂಧಗಳು ಪ್ರಕಟವಾದ ಮೇಲೆ ಹಾಗೇಯೇ ಉಳಿದು ಬಿಡುತ್ತದೆ. ಆದರೆ ಹಲವು ನಾವು ದೇಶ ವಿದೇಶಗಳ ಹಲವು ಸಂಶೋಧಕರು, ತಜ್ಞರು ಹಾಗೂ ಆರೋಗ್ಯ ಕ್ಷೇತ್ರವೂ ಸೇರಿದಂತೆ ತಂತ್ರಜ್ಞಾನದಲ್ಲಿ ಹೆಸರು ಮಾಡಿದವರೊಂದಿಗೆ ನಿರಂತವಾಗಿ ಚರ್ಚಿಸಿ, ಪ್ರಯೋಗಗಳನ್ನು ಮಾಡಿ ಈ ಉತ್ಪನ್ನಗಳನ್ನು ಮಾಡಲಾಗಿದೆ. ನಮ್ಮ ಸಂಶೋಧನೆ
ಯಿಂದ ಜನರಿಗೆ ಅನುಕೂಲವಾಗಲು ಮತ್ತಷ್ಟು ಸಂಶೋಧನೆಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ ಅನಂತ್ ಕುಮಾರ್ ಹೆಗಡೆ. ನಿರಂತರ ಅಧ್ಯಯನ ಪರಿಣಾಮವಾಗಿ ನಮ್ಮ ಉತ್ಪನ್ನ ಜಗತ್ತಿನ ಮುಂದಿದೆ.

ನ್ಯಾನೋ ತಂತ್ರಜ್ಞಾನದ ಔಷಧಿ ಅಂದರೆ ಮುಂದಿನ 5-10 ವರ್ಷಗಳಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಬೆಳೆಯಲಿದೆ. ಇದು ಮಣ್ಣಿನಿಂದ ಅಂತರಿಕ್ಷದವರೆಗೂ ಅನುಕೂಲವಾಗಬಲ್ಲದು. ವಿಷಕಾರಿ ದೂರ ಮಾಡಲು ಹಾಗೂ ರಾಸಾಯನಿಕ ಕಬಂಧಬಾಹುವಿನಿಂದ ಹೊರಬರಲು ಸಸ್ಯಜನ್ಯ ಆಧಾರಿತ ನ್ಯಾನೋ ತಂತ್ರಜ್ಞಾನ
ಇದರಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೆ ನಮ್ಮ ಮೂಲ ಆಯುರ್ವೇದ ಪದ್ಧತಿ, ಚರಕ ಶಸ್ತ್ರ ಸಂಹಿತೆ, ಕಣಾದ ಮಹರ್ಷಿ ಸಿದ್ಧಾಂತ ರೂಪದಲ್ಲಿ ರಚಿಸಿದ್ದ ಗ್ರಂಥಕ್ಕೆ ಔಲೂಕ್ಯ ದರ್ಶನ ಹಾಗೂ ಅಣು, ಪರಮಾಣುಗಳ
ರಚನೆಯ ಬಗ್ಗೆ ಅಭ್ಯಸಿಸಿ ಆಗಲೇ ಬೋಽಸಿದ್ದ ವಿಷೇಷಿಕ ಸೂತ್ರ ಎಂಬ ಗ್ರಂಥದಲ್ಲಿನ ವಿಚಾರಗಳನ್ನು ಅಭ್ಯಸಿಸಿ ಸಸ್ಯಜನ್ಯ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಚಿಕಿತ್ಸೆ, ಔಷಧಿಗಳ ಮೇಲೆ ಕಣ್ಗಾವಲು
ಗ್ರೀನ್ ನ್ಯಾನೋ ಔಷಧಗಳ ಬಗ್ಗೆ ವಿವರಣೆ ನೀಡಿರುವ ಡಾ.ಕಟ್ಟೇಶ್ ಕಟ್ಟಿ, ಕಳೆದ 40 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆ (ಡಯಾಗ್ನೈಸ್) ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಆಗಿದೆ. ಆದರೆ ಚಿಕಿತ್ಸೆ ಹಾಗೂ ಕಾಯಿಲೆ ನಿವಾರಣೆ ಮಟ್ಟದಲ್ಲಿ ಸಾಧನೆಯಾಗಿದ್ದರೂ ಅದು ಸಾಲದು. ಇದೀಗ ನ್ಯಾನೋ ಔಷಧಗಳ ಮೂಲಕ ಕ್ಯಾನ್ಸರ್, ಮಧುಮೇಹ ಹಾಗೂ ಸೋಂಕು ಸಂಬಂಧಿತ ಸಮಸ್ಯೆಗಳಿಗೆ ಖಚಿತ ಚಿಕಿತ್ಸೆ ನೀಡಬಹುದು. ಇದನ್ನು ಈಗಾಗಲೇ ಕೆಲ ಪ್ರಾಣಿಗಳು, ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು ಖಚಿತ ಫಲಿತಾಂಶ ಪಡೆದಿದ್ದೇವೆ ಎಂದರು.

ಏನೇನು ಉತ್ಸನ್ನ ಲಭ್ಯ?
ಸದ್ಯಕ್ಕೆ ಕ್ಯಾನ್ಸರ್ ಸಂಬಂಧಿತ ಕೆಲ ಔಷಧಿ, ಮಲೇರಿಯಾ, ಡೆಂಗ್ಯೂ ಔಷಧಿಗಳು , ಸೌಂದರ್ಯ ವರ್ಧಕ, ಕುಕ್ಕೀಸ್, ಹರ್ಬಲ್ ಟೀ ಕ್ಯಾಪ್ಸುಲ್, ಐಸ್ಕ್ರೀಂ ಮಿಕ್ಸ್, ಹರ್ಬಲ್ ವಾಟರ್, ನ್ಯಾನೋ ಹರ್ಬಲ್ ಚಾಕೊಲೇಟ್, ಪಾನೀಯಗಳ ಪ್ರಿಮಿಕ್ಸ್ ಕ್ಯಾಪ್ಸುಲ್ಸ್ , ಎನರ್ಜಿ ಬಾರ್, ವಿವಿಧ ರೀತಿಯ ಎಣ್ಣೆ, ತುಪ್ಪ, ಸ್ಯಾನಿಟೈಸರ್, ಕೇಶ ಆರೈಕೆ ಉತ್ಪನ್ನ, ಮಾಲಿನ್ಯ ಹೀರಿಕೊಳ್ಳುವ ಬಣ್ಣ ಸೇರಿ ಹಲವು ಉತ್ಪನ್ನಗಳನ್ನು ಸಿದ್ದಪಡಿಸಿ ರಫ್ತು ಮಾಡಲಾಗುತ್ತಿದೆ.

ಯಾರಿದು ಡಾ.ಕಟ್ಟೇಶ್ ಕಟ್ಟಿ
ಧಾರವಾಡ ಮೂಲದವರಾದ ಡಾ.ಕಟ್ಟೇಶ್ ಕಟ್ಟಿ ಐಐಎಸ್ ಸಿಯಲ್ಲಿ ಪದವಿ ಪಡೆದವರು. ಅಮೆರಿಕದಲ್ಲಿ ನೆಲಸಿರುವ ಮೂಲತಃ ನ್ಯೂಕ್ಲಿಯರ್ ಮೆಡಿಸಿನ್ ತಜ್ಞರಾದ ಅವರು ಇದೀಗ ಅಮೆರಿಕದ ಮಿಸೌರಿ ವಿವಿ ಕ್ಯಾನ್ಸರ್ ನ್ಯಾನೋ ತಂತ್ರಜ್ಞಾನದ ನಿರ್ದೇಶಕರಾಗಿzರೆ. ಗ್ರೀನ್ ನ್ಯಾನೋ ಟೆಕ್ನಾ ಲಜಿ ಪರಿಚಯಿ ಸುವ ಮೂಲಕ ಗ್ರೀನ್ ನ್ಯಾನೋ ತಂತ್ರeನದ ಪಿತಾಮಹರಾಗಿ ಹೆಸರು ಮಾಡಿದ್ದಾರೆ. ಅಂತಾರಾಷ್ಟ್ರೀಯ ಗ್ರೀನ್ ನ್ಯಾನೋ ತಂತ್ರಜ್ಞಾನದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಣ್ವಿಕ ರಚನೆಯಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಪೆಪ್ಲೈಡ್ ಒಂದಕ್ಕೆ ಕಟ್ಟೇಶ್ ಪೆಪ್ಲೈಡ್ ಎಂದೇ ಹೆಸರು ಇಡಲಾಗಿದೆ. ಅಲ್ಲದೆ ಗ್ರೀನ್ ನ್ಯಾನೋ ಕೇರ್‌ನಲ್ಲಿ ಸ್ಥಾಪಿಸಿರುವ ನ್ಯಾನೋ ರಿಯಾಕ್ಟರ್‌ಗೆ ಕಟ್ಟಿ ರಿಯಾಕ್ಟರ್ ಎಂದು ಹೆಸರು ಇಡಲಾಗಿದೆ.

*

ನ್ಯಾನೋ ಎಂಬ ವೇದಿಕೆ ಒಂದು ಕ್ಷೇತ್ರಕ್ಕೆ, ಉತ್ಪನ್ನಕ್ಕೆ ಸೀಮಿತವಾಗಿಲ್ಲ. ನೆಲದಿಂದ ಆಂತರಿಕ್ಷದವರೆಗೆ ಎಲ್ಲದರಲ್ಲೂ
ಬಳಕೆ ಮಾಡಬಹುದು. ನಮ್ಮ ಗ್ರೀನ್ ನ್ಯಾನೋ ಕ್ಷೇತ್ರದ ಔಷಧಿಗಳಿಗೆ ಬೇಕಾದ ವಿವಿಧ ರೀತಿಯ ಹಸಿರು ಸಸಸ್ಯೆ
ಸೇರಿದಂತೆ , ಗಿಡಮೂಲಿಕೆಗಳು ನಮ್ಮ ದೇಶದಲ್ಲೇ ಅಗಾಧವಾಗಿ ದೊರಕುತ್ತಿದೆ. ಗ್ರೀನ್ ನ್ಯಾನೋ ಔಷಧಿಗಳು
ದ್ರವರೂಪದಲ್ಲಿರುತ್ತದೆ.

  • ಅನಂತಕುಮಾರ್ ಹೆಗಡೆ, ಕದಂಬ ಗ್ರೀನ್ ನ್ಯಾನೋ ಕೇರ್ ಸಂಸ್ಥಾಪಕರು
  • ಅನಂತಕುಮಾರ್ ಹೆಗಡೆಯವರು ನಮ್ಮೊಂದಿಗೆ ಸೇರಿದಂತೆ ಹಲವು ಪರಿಣಿತರೊಂದಿಗೆ ಸುಮಾರು 30 ವರ್ಷ ಗಳಿಂದ ಸತತ ಸಂಪರ್ಕದಲ್ಲಿದ್ದು ಹಲವು ವಿಚಾರಗಳತ್ತ ಗಮನ ಹರಿಸಿ ಈ ಉತ್ಪನ್ನ ಹೊರತರಲು ಶ್ರಮಿ ಸಿದ್ದಾರೆ. ಯಾವುದೇ ವೈದ್ಯರಾಗಲಿ ನ್ಯಾನೋ ಮೆಡಿಸಿನ್ ಮೂಲಕ ರೋಗಿಗಳನ್ನು ಉಪಚರಿಸಲು ತರಬೇತಿ ಪಡೆಯಬಹುದು. ಸೂಕ್ತ ಸಂಖ್ಯೆಯ ವೈದ್ಯರು ಬಂದರೆ 3 ಅಥವಾ 6 ತಿಂಗಳ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಯೋಜಿಸಿದ್ದೇವೆ.
  • ಡಾ.ಕಟ್ಟೇಶ್ ಕಟ್ಟಿ ಗ್ರೀನ್ ನ್ಯಾನೋ ಪಿತಾಮಹ

ಇದನ್ನೂ ಓದಿ: #AnanthKumarHegde

Leave a Reply

Your email address will not be published. Required fields are marked *