Saturday, 28th December 2024

Lokesh kayarga: ನಿಜವಾದ ಸಿಂಗ್‌ ಮಾತು…

ಲೋಕೇಶ್ ಕಾಯರ್ಗ

ಈ ದೇಶದ ಚರಿತ್ರೆ ನನ್ನ ಕಾಣಿಕೆಯನ್ನು ನೆನಪಿಸಲಿದೆ ಎಂದಿದ್ದರು. -ಡಾ. ಸಿಂಗ್

ಬೆಂಗಳೂರು: ಪ್ರಧಾನಿಯಾಗಿದ್ದ ವೇಳೆ ಪಿ.ವಿ.ನರಸಿಂಹರಾವ್ ಅವರು ಮೌನವಾಗಿದ್ದುಕೊಂಡೇ ಹಲವು ಸಮಸ್ಯೆ ಗಳನ್ನು ಬಗೆಹರಿಸಿದ್ದರು. ತಮ್ಮ ಮೌನಕ್ಕೆ ಅತಿ ಹೆಚ್ಚು ಟೀಕೆ ಎದುರಿಸಿದವರು ಮನಮೋಹನ ಸಿಂಗ್. ಅದರಲ್ಲೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಮನಮೋಹನ್ ಸಿಂಗ್ ಅವರ ಮೌನವನ್ನು ಕಟುವಾಗಿ ಟೀಕಿಸಿದ್ದರು. ಮಿತ ಭಾಷಿ, ಸಂಯಮಿ ಮನಮೋಹನ್ ಸಿಂಗ್ ಈ ಟೀಕೆಗಳಿಗೆ ಎಂದೂ ವ್ಯಗ್ರರಾಗಿ ಉತ್ತರಿಸಿದವರಲ್ಲ.

ಆದರೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, “ವರ್ತಮಾನದ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳಿಗಿಂತ, ಈ ದೇಶದ ಚರಿತ್ರೆ ನನ್ನ ಕಾಣಿಕೆಯನ್ನು ನೆನಪಿಸಲಿದೆ” ಎಂದು ಹೇಳಿದ್ದರು.
ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶ ಎಷ್ಟು ದುಸ್ಥಿತಿಗೆ ಹೋಗಿತ್ತೆಂದರೆ, ಐಎಂಎಫ್‌ ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸರಕಾರದ ಆರ್ಥಿಕ
ಸಲಹೆಗಾರರಾಗಿದ್ದರು. ಇದಾಗಿ ೧೩ ವರ್ಷಗಳ ಬಳಿಕ ೧೪ನೇ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರೇ ಚುಕ್ಕಾಣಿ ವಹಿಸಿದರು. ದೇಶ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ಕಾಲವದು.

ಜಾಗತಿಕ ನೆಲೆ ಯಲ್ಲಿ ಭಾರತದ ಪ್ರಾಬಲ್ಯಕ್ಕೆ ನಾಂದಿ ಹಾಡಿದ ಸಿಂಗ್ ಐಟಿ, ಬಿಟಿ, ತಂತ್ರಜ್ಞಾನ ಸೇರಿದಂತೆ ಹೊಸ
ಆರ್ಥಿಕತೆಗೆ ಸ್ಪಷ್ಟ ರೂಪುರೇಶೆ ಹಾಕಿ ಕೊಟ್ಟರು. ಅಲ್ಲಿಂದ ಭಾರತದ್ದೇ ಪ್ರಾಬಲ್ಯ. ಒಂದು ದಶಕದ ಅಸಾಧಾರಣ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಿಂಗ್ ಮುಂಚೂಣಿ ಪಾತ್ರ ವಹಿಸಿದರು.

ಡಾ.ಸಿಂಗ್ ಅವರ ಉಸ್ತುವಾರಿಯಲ್ಲಿ ಭಾರತವು ತನ್ನ ಇತಿಹಾಸದಲ್ಲಿ ಅತ್ಯಧಿಕ ಬೆಳವಣಿಗೆ ದರವನ್ನು ಕಂಡಿತು, ಆರ್ಥಿಕತೆಯು ಸರಾಸರಿ ಶೇ.೭.೭ರಷ್ಟು ಪ್ರಗತಿಯನ್ನು ಸಾಧಿಸಿತು. ದೇಶವು ಸುಮಾರು ಎರಡು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮಾರ್ಪಟ್ಟಿತು. ಪ್ರಧಾನಿಯಾಗಿ ಡಾ. ಸಿಂಗ್ ಆಡಳಿತಾವಧಿಯಲ್ಲಿ ನಾಗರಿಕರಿಗೆ ಆಹಾರದ ಹಕ್ಕು ಶಿಕ್ಷಣದ ಹಕ್ಕು, ಕೆಲಸ ಮಾಡುವ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ಖಾತ್ರಿಪಡಿಸುವ ಮಸೂದೆಗಳನ್ನು
ಜಾರಿಗೊಳಿಸಲಾಯಿತು.

ಡಾ.ಸಿಂಗ್ ಅವರ ಹಕ್ಕು ಆಧಾರಿತ ಕ್ರಾಂತಿಯು ಭಾರತೀಯ ರಾಜಕೀಯದಲ್ಲಿ ಹೊಸ ಯುಗವನ್ನು ಸೃಷ್ಟಿಸಿತು. ಇದಾಗಿ ಐದು ವರ್ಷಗಳ ಬಳಿಕ ಡಾ. ಸಿಂಗ್ ಅವರ ಕಟು ಟೀಕಾಕಾರ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಮೋದಿ ಅವರ ಎರಡನೇ ಅವಧಿಯಲ್ಲಿ ೨೦೧೯ರಲ್ಲಿ ಭಾರತದ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆದಿತ್ತು. ಈ ಪರಿವರ್ತನೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರ ಪಾತ್ರ ಹಿರಿದೆನ್ನುವುದನ್ನು ಅವರ ಟೀಕಾ ಕಾರರೂ ಒಪ್ಪಿಕೊಳ್ಳುತ್ತಾರೆ.

ಸಾಮರ್ಥ್ಯಕ್ಕೆ ಸವಾಲು
ಬಿಜೆಪಿ ಡಾ.ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸುತ್ತಿದ್ದ ಕಾಲವದು.“ ನೀವೊಬ್ಬ ದುರ್ಬಲ ಪ್ರಧಾನಿ
ಯೆಂದು ಎಲ್ಲರೂ ಹೇಳುತ್ತಿzರಲ್ಲವೇ” ಎಂದು ಪತ್ರಕರ್ತರನ್ನು ಅವರನ್ನು ಪ್ರಶ್ನಿಸಿದ್ದರು. ಅಂದಿನ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದ್ದ ಡಾ. ಸಿಂಗ್, “ಅಹಮದಾಬಾದ್‌ನ ಬೀದಿಗಳಲ್ಲಿ ನಡೆಯುತ್ತಿದ್ದ ಸಾವಿರಾರು ಅಮಾಯಕ ಪ್ರಜೆಗಳ ಕಗ್ಗೊಲೆ, ಅತ್ಯಾಚಾರವನ್ನು ಕಣ್ಮುಚ್ಚಿ ನೋಡುವುದೇ ಬಲಿಷ್ಠ ಪ್ರಧಾನಿಯೆನ್ನುವುದಾದರೆ, ಓರ್ವ ವ್ಯಕ್ತಿಯ ಸಾಮರ್ಥ್ಯವನ್ನು ಅಳೆಯುವ ಮಾನದಂಡ ಅದಾಗಿದ್ದರೆ, ನಮ್ಮ ದೇಶಕ್ಕೆ ಅಂಥಾ ‘ಸಾಮರ್ಥ್ಯ’
ಅಗತ್ಯವಿದೆ ಮತ್ತು ದೇಶದ ಪ್ರಧಾನಿಯಾಗುವವರಿಗೆ ಅಂತಹ ‘ನಿರ್ದಯಿ ಸಾಮರ್ಥ್ಯ’ ಅಗತ್ಯವಿದೆಯೆಂದು ನನಗನಿಸುವುದಿಲ್ಲ” ಎಂದು ಉತ್ತರಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಬಳಿಕ ಸಾರ್ವಜನಿಕ ಜೀವನದಲ್ಲಿ, ಅತ್ಯುನ್ನತ ಹುದ್ದೆಯಲ್ಲಿರುವವರು ಹೇಗೆ ನಡೆದು ಕೊಳ್ಳಬೇಕು, ತಮ್ಮ ವಿರೋಧಿಗಳನ್ನೂ ಹೇಗೆ ಆಧರಿಸಬೇಕೆಂದು ನಮಗೆ ಹೇಳಿಕೊಟ್ಟ ಪ್ರಧಾನಿ ಎಂದರೆ ಡಾ. ಸಿಂಗ್.