Monday, 16th September 2024

ದೇಶದ ಆರ್ಥಿಕ ಸುಧಾರಣೆಗೆ ತಂದ ಮಾದರಿ ಬಜೆಟ್

ಬಜೆಟ್ ಸರಳವಾಗಿ ಆರ್ಥಿಕ ಸುಧಾರಣೆಗೆ ಕೈಗೊಂಡಿರುವ ಬ್ಲೂಪ್ರಿಂಟ್‌ನಂತಿದೆ ಎಂಬುದು ಐಸಾಕ್‌ನ ನಿವೃತ್ತ ನಿರ್ದೇಶಕ ಆರ್. ಎಸ್.ದೇಶಪಾಂಡೆ ಅವರ ಅಭಿಮತ. ಜನರ ಮೇಲೆ ತೆರಿಗೆ ಭಾರ ಹಾಕದೆ, ಹೆಚ್ಚು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿ, ಉದ್ಯೋಗ ಸೃಷ್ಟಿಸುವ ಮೂಲಕ ಬಂಡವಾಳ ಸಂಗ್ರಹದ ಮೇಲೆ ಗಮನಹರಿಸಿರುವ ಮಹತ್ವದ ಬಜೆಟ್. ಕಾವೇರಿ-ಪೆನ್ನಾರ್ ಸೇರಿ ದೇಶದ ೫ ನದಿಗಳ ಜೋಡಣೆಗೆ ಅನುಮೋದನೆ ನೀಡಿರುವುದು ಕರ್ನಾಟದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಎಂಬುದು ಅವರ ಅಭಿಪ್ರಾಯ.

-. ಆರ್.ಎಸ್. ದೇಶಪಾಂಡೆ, ಆರ್ಥಿಕ ತಜ್ಞರು

ಬಜೆಟ್ ಘೋಷಣೆಗಳ ಮಹಾಪೂರವಾಗಿರದೆ, ಕಠಿಣ ಪರಿಸ್ಥಿತಿಯಲ್ಲಿ ಆರ್ಥಿಕತೆ ಮೇಲೆತ್ತಲು ಕೈಗೊಂಡಿರುವ ಪ್ರಯತ್ನವಾಗಿದೆ. ಬಜೆಟ್‌ನಲ್ಲಿ ಪ್ರಮಖ ವಾಗಿ ನಾಲ್ಕು ಅಂಶಗಳ ಬಗ್ಗೆ ಗಮನ ನೀಡಲಾಗಿದೆ. ಮೊದಲನೇಯದಾಗಿ ದರ ಬೆಳವಣಿಗೆ, ನಿರುದ್ಯೋಗ ಕಡಿಮೆ ಮಾಡುವುದು, ತೆರಿಗೆ ಹೊರೆಯನ್ನು ಹೆಚ್ಚುಗೊಳಿಸದಿರುವುದು ಮತ್ತು ಹೂಡಿಕೆ ದರವನ್ನು ಹೆಚ್ಚು ಮಾಡುವುದು ಪ್ರಮುಖವಾಗಿದೆ.

ಕ್ಯಾಪಿಟಲ್ ಹೂಡಿಕೆ ದರ ಹೆಚ್ಚು ಮಾಡಿರುವುದರಿಂದ ಉದ್ಯೋಗ ಜಾಸ್ತಿಯಾಗಲಿದೆ. ಪ್ರಸ್ತುತ ಬಜೆಟ್ ನಲ್ಲಿನ ೬ ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆಯಿದೆ. ತೆರಿಗೆ ಮತ್ತು ವರಮಾನ ಸಂಗ್ರಹಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಬಂಡವಾಳ ಕ್ರೋಢಿಕರಣ ಮಾಡುವ ಪ್ರಯತ್ನ ಸರಕಾರದ್ದಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ.

೧,೨೯,೭೮೦ ಕೋಟಿ ರು. ಕಳೆದ ಡಿಸೆಂಬರ್ ನಲ್ಲಿಯೇ ಜಿಎಸ್‌ಟಿ ಸಂಗ್ರಹ ಆಗಿದೆ. ಹೀಗಾಗಿ, ಇದನ್ನು ಹೆಚ್ಚು ಗೊಳಿಸುವ ನಿಟ್ಟಿನಲ್ಲಿ ಗಮನ ನೀಡಬೇಕಿದೆ. ಇದು ಜಾಸ್ತಿಯಾಗುತ್ತಿದ್ದು, ಟ್ಯಾಕ್ಸ್ ಇದ್ದಷ್ಟನ್ನೇ ಮುಂದುವರಿಸಿ ಕೊಂಡು ಹೋಗಲು ತೀರ್ಮಾನಿಸಲಾಗಿದೆ. ಆ ಮೂಲಕ ಯಾವುದೇ ತೆರಿಗೆ ಹೊರೆಯನ್ನು ಜನರ ಮೇಲೆ ಹಾಕದಿ ರಲು ಸರಕಾರ ತೀರ್ಮಾನಿಸಿದೆ.

ಇಂಟರ್‌ನ್ಯಾಷನಲ್ ಮಿಲೆಟ್ ಪ್ರೋಗ್ರಾಮ್, ನದಿ ಜೋಡಣೆ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸ ಲಾಗಿದೆ. ಇದರಿಂದಾಗಿ ೯ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ. ಎಂಎಸ್‌ಎಂಇ ಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ. ೬೦೦೦ ಕೋಟಿ ವೆಚ್ಚ ದಲ್ಲಿ ಗೃಹ ನಿರ್ಮಾಣಕ್ಕೆ ತೀರ್ಮಾನಿಸಿದ್ದು, ಇದರಿಂದಲೂ ಉದ್ಯೋಗ ಸೃಷ್ಟಿ ಸಾಧ್ಯವಿದೆ. ೧೦೪ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಹೊತ್ತು ನೀಡಿದ್ದು, ಇದು ಕೂಡ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ ಎನ್ನಬಹುದು.

ಆದಾಯ ಸಂಗ್ರಹದ ಪ್ರಮಾಣ ೨೨ ಲಕ್ಷ ಕೋಟಿ ರು.ಗಳಾಗಿದ್ದು, ಕಳೆದ ವರ್ಷಕ್ಕಿಂತ ಎರಡು ಲಕ್ಷ ಕೋಟಿ ಜಾಸ್ತಿಯಾಗಿದೆ. ಖರ್ಚು ೩೭.೭ ಲಕ್ಷ ಕೋಟಿ
ಇತ್ತು, ಈಗ ಎರಡು ಲಕ್ಷ ಕೋಟಿ ಜಾಸ್ತಿಯಾಗಿದೆ. ಒಟ್ಟಾರೆ ಬಜೆಟ್ ಆದಾಯ ಸಂಗ್ರಹ ಮತ್ತು ವೆಚ್ಚದ ಪ್ರಮಾಣ ೨೦೧೪ರಲ್ಲಿ ಇದ್ದದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಆ ಮೂಲಕ ಪ್ರಸ್ತುತ ಕರೋನಾದಿಂದ ಕಂಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ನಿಭಾಯಿಸುವ ನಿಟ್ಟಿನಲ್ಲಿ ಒಂದು ಉತ್ತಮ
ಪ್ರಯತ್ನದ ಬಜೆಟ್ ಆಗಿದೆ.

ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡಿರುವುದು ದೂರ ದೃಷ್ಟಿಯ ಬಜೆಟ್‌ಗೆ ಹಿಡಿದ ಕೈಗನ್ನಡಿಯಂತಿದೆ. ೬೦ ಲಕ್ಷ ಉದ್ಯೋಗಗಳ ಸೃಷ್ಟಿಸುವ ಜತೆಗೆ ಆರ್ಥಿಕತೆಯನ್ನು ಉನ್ನತಿಗೆ ಕೊಂಡೊಯ್ಯವ ಪ್ರಯತ್ನದಲ್ಲಿ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ದೇಶದ ಅಭಿವೃದ್ಧಿಯ ದಿಕ್ಸೂಚಿಯಂತಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ವನ್ ಕ್ಲಾಸ್ ವನ್ ಟಿವಿ’ ಆರಂಭಿಸಿರುವುದು
ಶಾಘನೀಯ. ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ ೨೦೦ ಚಾನೆಲ್‌ಗಳು ಅಸ್ತಿತ್ವಕ್ಕೆ ಬರಲಿದ್ದು, ಶಿಕ್ಷಣಕ್ಕೆ ಪೂರಕವಾದ ಯೋಜನೆ ಆಗಿದೆ. ‘ಕೆನ್
ಬೆಟ್ವಾ’ ಯೋಜನೆಯ ಅನುಷ್ಠಾನದ ಮೂಲದ ಅಂದಾಜು ವೆಚ್ಚ ?೪೪,೬೦೫ ಕೋಟಿಯಲ್ಲಿ ೯ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನ ಗಳು, ೬೨ ಲಕ್ಷ ಜನರಿಗೆ ಕುಡಿಯುವ ನೀರು, ೧೦೩ ಮೆಗಾವಾಟ್ ಜಲವಿದ್ಯುತ್, ೨೭ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಭಾರತವು ವಿದ್ಯುತ್ ಉತ್ಪಾದನೆಯ ಸ್ವಾವಲಂಬಿಯಾಗಲು ಕಾರಣವಾಗಲಿದೆ.

ಪ್ರಮುಖಾಂಶಗಳು
? ಆರ್ಥಿಕ ಪರಿಸ್ಥಿತಿಯ ಚೇತರಿಕೆಯ ಮಾದರಿ ಬಜೆಟ್
? ನಾಲ್ಕು ಅಂಶಗಳ ಆಧಾರದಲ್ಲಿ ಬಜೆಟ್ ರೂಪುಗೊಂಡಿದೆ
? ತೆರಿಗೆ ಸಂಗ್ರಹ, ಉದ್ಯೋಗ ಸೃಷ್ಟಿ, ಬಂಡವಾಳ ಸಂಗ್ರಹ ಮತ್ತು ಕರಭಾರವಿಲ್ಲ

? ನದಿ ಜೋಡಣೆಯಂತಹ ನಿರ್ಧಾರದಿಂದ ಲಕ್ಷಾಂತರ ಹೆಕ್ಟೇರ್‌ಗೆ ನೀರಾವರಿ