Thursday, 12th December 2024

Navaratri Colour Styling: ನವರಾತ್ರಿ 6ನೇ ದಿನ ಆಕರ್ಷಕ ಕೆಂಪು ಬಣ್ಣದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಲು ಸ್ಟೈಲಿಂಗ್‌ ಟಿಪ್ಸ್!

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಈ ವರ್ಷದ ನವರಾತ್ರಿಯ 6 ನೇ ದಿನ ಕೆಂಪು ವರ್ಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ ದೇವಿ ಕ್ಯಾತ್ಯಾಯಿನಿಯನ್ನು ಕೆಂಪು ವರ್ಣದ ಸೀರೆಯಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಲೆಕ್ಕವಿಲ್ಲದಷ್ಟು ಶೇಡ್‌ಗಳಲ್ಲಿ ಲಭ್ಯವಿರುವ ರೆಡ್‌ ಡಿಸೈನರ್‌ವೇರ್ಸ್ ಹಾಗೂ ಸೀರೆಗಳನ್ನು ಉಟ್ಟು ಸೂಕ್ತ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದಲ್ಲಿ ಸುಂದರವಾಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ಸ್ ಮಂಗಲಾ (Navaratri Colour Styling).

ಡಿಸೈನರ್‌ವೇರ್ಸ್ ಪ್ರಿಯರು ಹೀಗೆ ಮಾಡಿ

ಈ ದಿನ ಸೀರೆ ಉಡುವುದು ಬೇಡ, ಲೆಹೆಂಗಾ, ಲಾಚಾ, ಗಾಗ್ರಾ, ಸೆಲ್ವಾರ್‌ ಕಮೀಝ್‌, ಚೂಡಿದಾರ್‌ ಅಥವಾ ಅನಾರ್ಕಲಿ ಗೌನ್‌ ಹೀಗೆ ಡಿಸೈನರ್‌ವೇರ್‌ ಪ್ಲಾನ್‌ ಮಾಡಿದ್ದಲ್ಲಿ, ಆದಷ್ಟೂ ಮಾನೋಕ್ರೋಮ್‌ ಶೇಡ್‌ ಅಥವಾ ಸಾದಾ ರೆಡ್‌ ಉಡುಪುಗಳನ್ನು ಆಯ್ಕೆ ಮಾಡಿ, ಧರಿಸಿ.

ಇಂಡೋ-ವೆಸ್ಟರ್ನ್‌ ಡಿಸೈನರ್‌ವೇರ್ಸ್ ಸ್ಟೈಲಿಂಗ್‌

ಕಂಪ್ಲೀಟ್‌ ಇಂಡಿಯನ್‌ ಲುಕ್‌ ಬೇಡ, ಇಂಡೋ-ವೆಸ್ಟರ್ನ್‌ ಬೇಕು ಎನ್ನುವ ಹುಡುಗಿಯರು ಆದಷ್ಟೂ ರೆಡ್‌ ಶೇಡ್‌ ಹೆಚ್ಚು ಕಾಣುವಂತಹ ಕಾಸಟ್ಯೂಮ್‌ ಧರಿಸುವುದು ಉತ್ತಮ. ಇಲ್ಲವಾದಲ್ಲಿ ಈ ದಿನಕ್ಕೆ ಹೊಂದದು.

ಚಿತ್ರಕೃಪೆ: ಪಿಕ್ಸೆಲ್‌

ರೆಡ್‌ ಸೀರೆ ಉಡುವುದಾದಲ್ಲಿ ಹೀಗಿರಲಿ

ಈ ಸೀಸನ್‌ನಲ್ಲಿ, ರೆಡ್‌ಬ್ಲಡ್‌, ತಿಳಿಗೆಂಪು, ಡಾರ್ಕ್ ಕೆಂಪು, ಮರೂನ್‌, ವೈನ್‌ ರೆಡ್‌, ಬ್ರಿಕ್‌ ರೆಡ್‌ ಹೀಗೆ ನಾನಾ ಶೇಡ್‌ ರೆಡ್‌ ರೇಷ್ಮೆ ಸೀರೆಗಳು ಹಾಗೂ ಡಿಸೈನರ್‌ ಸೀರೆಗಳು ಬಿಡುಗಡೆಗೊಂಡಿವೆ. ಸಿಲ್ಕ್‌, ಸೆಮಿ ಸಿಲ್ಕ್‌ ಹಾಗೂ ಬನಾರಸ್‌ ರೆಡ್‌ ಸೀರೆಗಳು ನಿಮ್ಮನ್ನು ಗ್ರ್ಯಾಂಡ್‌ ಆಗಿ ಕಾಣಿಸಬಹುದು. ಬಾರ್ಡರ್‌ ರೇಷ್ಮೆ ಸೀರೆಗಳು ನಿಮ್ಮನ್ನು ಹೈಲೈಟ್‌ ಮಾಡುತ್ತವೆ.
ಯುವತಿಯರು ಇಂಡೋ-ವೆಸ್ಟರ್ನ್ ಶೈಲಿಯ ಸೀರೆ ಉಡುವುದಾದಲ್ಲಿ, ಕ್ರಾಪ್‌ ಟಾಪ್‌, ಬೆಲ್‌ ಸ್ಲೀವ್‌ ಹಾಗೂ ಬಲೂನ್‌ ಸ್ಲೀವ್‌ ಟಾಪ್‌ಗಳನ್ನು ಧರಿಸಬಹುದು. ಕಾಂಟ್ರಾಸ್ಟ್‌ ವರ್ಣದ ಬ್ಲೌಸ್‌ ಬೇಡ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಡ್ರೆಸ್‌ಕೋಡ್‌ಗೆ ತಕ್ಕಂತೆ ಹೇರ್‌ಸ್ಟೈಲ್‌

ಟ್ರೆಡಿಷನಲ್‌ ಸೀರೆ ಅಥವಾ ಎಥ್ನಿಕ್‌ವೇರ್‌ಗೆ ಹೇರ್‌ಸ್ಟೈಲ್‌ ಕೂಡ ಟ್ರೆಡಿಷನಲ್‌ ಆಗಿರಲಿ. ಫಂಕಿ ಲುಕ್‌ ಬೇಡ. ಇಂಡೋ-ವೆಸ್ಟರ್ನ್‌ಗೆ ಫ್ರೀ ಹೇರ್‌ಸ್ಟೈಲ್‌ ಓಕೆ.

ಮೇಕಪ್‌ ಹೊಂದುವಂತಿರಲಿ

ರೆಡ್‌ ಲುಕ್‌ಗೆ ಮೇಕಪ್‌ ಲೈಟಾಗಿರಲಿ. ಕಾಜಲ್‌, ಐಲೈನರ್‌, ಮಸ್ಕರಾ ಬಳಸಿ. ರೆಡ್‌ ಲಿಪ್‌ಸ್ಟಿಕ್‌ನಲ್ಲೂ ನಾನಾ ಶೇಡ್‌ಗಳಿವೆ. ನಿಮ್ಮ ಧಿರಿಸಿಗೆ ತಕ್ಕಂತೆ, ಲೈಟ್‌ ಅಥವಾ ಡಾರ್ಕ್‌ ಶೇಡ್‌ ಲೇಪಿಸಿ. ಮ್ಯಾಚ್‌ ಆಗುವುದು. ಹಣೆಗೆ ಅಗಲವಾದ ರೆಡ್‌ ಬಂಗಾಲಿ ಬಿಂದಿ ಹಚ್ಚಿ. ಇದು ನೋಡಲು ಆಕರ್ಷಕವಾಗಿ ಬಿಂಬಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)