ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Drone: ಡ್ರೋನ್‌ ಹಾರುವುದಷ್ಟೇ ಅಲ್ಲ, ಈಜುತ್ತದೆ ಕೂಡ !

ಇಂತಹ ವಿಭಿನ್ನ ಡ್ರೋನ್ ಅನ್ನು ಬೆಂಗಳೂರು ಮೂಲಕ ಅಕ್ವಾಏರ್ ಎಕ್ಸ್ ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಹಾರಾಟ ಹಾಗೂ ಈಜಾಟವನ್ನು ನಡೆಸುತ್ತಿದೆ. ಈ ಬಾರಿಯ ಏರೋ ಇಂಡಿಯಾದಲ್ಲಿ ಪ್ರದರ್ಶನ ಗೊಂಡಿರುವ ಈ ಡ್ರೋನ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಬೆಂಗಳೂರು ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಡ್ರೋನ್ ಅನ್ನು ಭಾರತೀಯ ವಾಯುಸೇನೆಯಲ್ಲಿ ಬಳಸಲಿದ್ದು, ಈ ಡ್ರೋನ್ ಮೂಲಕ ಶತ್ರು ರಾಷ್ಟ್ರಗಳ ಹಡಗು ಹಾಗೂ ಸಬ್ ಮರೇನ್‌ಗಳನ್ನು ಪತ್ತೆಹಚ್ಚಲು ಸಾಧ್ಯ ವಾಗುತ್ತದೆ ಎಂದು ಹೇಳಲಾಗಿದೆ

Drone: ಡ್ರೋನ್‌ ಹಾರುವುದಷ್ಟೇ ಅಲ್ಲ, ಈಜುತ್ತದೆ ಕೂಡ !

Profile Ashok Nayak Feb 15, 2025 12:53 PM

ಏರೋ ಇಂಡಿಯಾದಲ್ಲಿ ಭಾರತೀಯ ಸೇನೆಯ ವಿನೂತನ ಡ್ರೋನ್

50 ಕಿಮೀ ವ್ಯಾಪ್ತಿ ಮಾಹಿತಿ ಕಲೆಹಾಕುವ ಡ್ರೋನ್

ಶತ್ರು ಸಬ್‌ಮರೇನ್ ಹೊಡೆದುರುಳಿಸಲು ಸಹಕಾರಿ

ಬೆಂಗಳೂರು: ಸಾಮಾನ್ಯವಾಗಿ ಡ್ರೋನ್ ಎಂದ ಕೂಡಲೇ ನಿಮಗೆ ಹಾರಾಡುವುದು ನೆನಪಾಗುತ್ತದೆ. ಆದರೆ ಈಗ ಅಭಿವೃದ್ಧಿಪಡಿಸಿರುವ ಡ್ರೋನ್ ಕೇವಲ ಹಾರುವುದಿಲ್ಲ ಬದಲಿಗೆ ನೀರಿನಲ್ಲಿ ತೇಲುತ್ತದೆ ಹಾಗೂ ಅಗತ್ಯಬಿದ್ದರೆ ನೀರಿನೊಳಗೆ 50 ಮೀಟರ್ ವರೆಗೆ ಕ್ರಮಿಸುತ್ತದೆ! ಹೌದು, ಇಂತಹ ವಿಭಿನ್ನ ಡ್ರೋನ್ ಅನ್ನು ಬೆಂಗಳೂರು ಮೂಲಕ ಅಕ್ವಾಏರ್ ಎಕ್ಸ್ ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಹಾರಾಟ ಹಾಗೂ ಈಜಾಟವನ್ನು ನಡೆಸುತ್ತಿದೆ. ಈ ಬಾರಿಯ ಏರೋ ಇಂಡಿಯಾದಲ್ಲಿ ಪ್ರದರ್ಶನ ಗೊಂಡಿರುವ ಈ ಡ್ರೋನ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಬೆಂಗಳೂರು ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಡ್ರೋನ್ ಅನ್ನು ಭಾರತೀಯ ವಾಯುಸೇನೆಯಲ್ಲಿ ಬಳಸಲಿದ್ದು, ಈ ಡ್ರೋನ್ ಮೂಲಕ ಶತ್ರು ರಾಷ್ಟ್ರಗಳ ಹಡಗು ಹಾಗೂ ಸಬ್ ಮರೇನ್‌ಗಳನ್ನು ಪತ್ತೆಹಚ್ಚಲು ಸಾಧ್ಯ ವಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಪರೀಕ್ಷಾರ್ಥವಾಗಿ ಕಾರ್ಯಾಚರಣೆ ಆರಂಭಿಸಿರುವ ಈ ಡ್ರೋನ್ ಸುಮಾರು ಒಂದು ಕಿಮೀ ಮೇಲಕ್ಕೆ ಹಾರುತ್ತದೆ. ಈ ವೇಳೆ 360 ಡಿಗ್ರಿ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಯನ್ನು ಪತ್ತೆ ಹಚ್ಚುತ್ತದೆ. ಇದಾದ ಬಳಿಕ ನೀರಿನಲ್ಲಿ ಇಳಿಸಿದರೆ ತೇಲುವ ಸಾಮರ್ಥ್ಯ ಈ ಡ್ರೋನ್‌ಗಿದೆ. ಈ ಎರಡೂ ಮಾತ್ರವಲ್ಲದೇ, ಸಮುದ್ರದ 50 ಮೀಟರ್ ಕೆಳಗೆ ಹೋಗಿ ಸುಮಾರು 138ಕಿಮೀ ವ್ಯಾಪ್ತಿ ಯಲ್ಲಿರುವ ಸಬ್‌ಮರೇನ್‌ಗಳನ್ನು ಪತ್ತೆಹಚ್ಚಿ ಮಾಹಿತಿ ನೀಡುತ್ತದೆ.

ಇದನ್ನೂ ಓದಿ: Mirley Chandrashekher Column: ನೀರೇ ಎಲ್ಲಾ, ನೀರಿಲ್ಲದೆ ಏನೂ ಇಲ್ಲ

ಸಮುದ್ರದ ಗಡಿ ಕಾಯಲು ಸಹಕಾರಿ: ಈ ಡ್ರೋನ್ ಅನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳ ಪ್ರಕಾರ, ಸಾಮಾನ್ಯವಾಗಿ ಭಾರತದ ಸಮುದ್ರದಲ್ಲಿ ಶತ್ರು ರಾಷ್ಟ್ರಗಳಿಂದ ಬರುವ ಜಲಾಂತಗಾರ್ಮಿ ನೌಕೆಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಇದೇ ರೀತಿ ಅನಧಿಕೃತವಾಗಿ ಗಡಿಯೊಳಗೆ ಬರುವ ಹಡಗು, ದೋಣಿಗಳ ಮೇಲೆ ಕಣ್ಗಾಗಲು ಇಡುವ ಉದ್ದೇಶದಿಂದ ಈ ಡ್ರೋನ್ ಅಭಿವೃದ್ಧಿ ಪಡಿಸ ಲಾಗಿದೆ. ಸುಮಾರು 75 ನಾಟಿ ಕಲ್ ಮೈಲು (138) ಕಿಮೀ ವ್ಯಾಪ್ತಿಯಲ್ಲಿ ನಡೆಯುವ ಸಂಪೂರ್ಣ ವಿವರವನ್ನು ಈ ಡ್ರೋನ್ ನೀಡಲಿದೆ. ಕೇವಲ ಹಾರಾಡುವುದಷ್ಟೇ ಅಲ್ಲದೇ, ನೀರಿನೊಳಗೂ ಕಾರ್ಯ ನಿರ್ವಹಿಸುವುದರಿಂದ ಒಂದೇ ಡ್ರೋನ್‌ನಲ್ಲಿ ಸಮುದ್ರ ಮೇಲಿನ ಹಡಗು ಹಾಗೂ ಒಳಗಿ ನಿಂದ ಬರುವ ಸಬ್‌ಮರೇನ್‌ಗಳ ಮೇಲೆ ಕಣ್ಣಿಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇವಲ ನೌಕಾಪಡೆಯಲ್ಲಿ ಮಾತ್ರವಲ್ಲದೇ, ಸಮುದ್ರದಲ್ಲಿ ಪತ್ತೆ ಕಾರ್ಯಚರಣೆ, ಸಂಶೋಧನೆ, ತೈಲ ನಿಷ್ಕೇಪಗಳ ಮಾಹಿತಿ ಸಂಗ್ರಹಿಸುವಾಗ ಹಾಗೂ ಸಮುದ್ರಾಳದಲ್ಲಿರುವ ಪರಿಸರಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಲು ಬಳಸಬಹುದಾಗಿದೆ. ಈಗಾಗಲೇ ಪರೀಕ್ಷಾರ್ಥ ಕಾರ್ಯವನ್ನು ನೌಕಾಪಡೆ ಮಾಡುತ್ತಿದ್ದು, ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಕೆಲವೇ ವರ್ಷದಲ್ಲಿ ಭಾರತೀಯ ನೌಕಾಪಡೆಗೆ ಈ ಆಧುನಿಕ ಮಲ್ಟಿ ರೋಲ್ ಡ್ರೋನ್ ಸಿಗಲಿದೆ ಎನ್ನುವ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಆಕಾಶ, ಸಮುದ್ರ ಮೇಲ್ಭಾಗ ಹಾಗೂ ಸಮುದ್ರಾಳದಲ್ಲಿ ಕಾರ್ಯನಿರ್ವಹಿಸಲಿದೆ.

138 ಕಿಮೀ ವ್ಯಾಪ್ತಿಯ ಮಾಹಿತಿ ಸಂಗ್ರಹಿಸುವ ಶಕ್ತಿ.

ಒಮ್ಮೆ ಚಾರ್ಜ್ ಮಾಡಿದರೆ ಐದು ತಾಸು ಕಾರ್ಯನಿರ್ವಹಣೆ

ಈ ಡ್ರೋನ್ ಸುಮಾರು 20 ಕೆ.ಜಿ. ತೂಕವಿರಲಿದೆ.