Tuesday, 22nd October 2024

ವಿಶ್ವ ಮೆದುಳು ದಿನ

ಡಾ. ಉಮಾಶಂಕರ್ ಆರ್. ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್
ಮೊ: ೯೮೮೦೧೫೮೭೫೮

ಮೆದುಳು ಒಂದು ಸುಮಾರು ಒಂದೂವರೆಯಷ್ಟು ಕೆ.ಜಿ. ತೂಕವಿರುವ ತಲೆಬುರುಡೆಯಲ್ಲಿ ಸುರಕ್ಷಿತವಾಗಿರುವ ಒಂದು ವಿಶಿಷ್ಟವಾದ ಅಂಗ. ಒಂದು ಪ್ರಾಣಿಯ ವೈವಿಧ್ಯತೆ, ವಿಚಾರ, ವೈಶಿಷ್ಟ್ಯ ಇವೆಲ್ಲವಕ್ಕೂ ಮೂಲ ಕಾರಣ ಮೆದುಳಿನ ರಚನೆ ಮತ್ತು ಅದರ ನರತಂತುಗಳು ನಿರ್ವಹಿಸುವ ಕಾರ್ಯವೈಖರಿ.

ಜುಲೈ ೨೨ ರಂದು ವರ್ಡ್ ಫೆಡರೇಷನ್ ಆಫ್ ನ್ಯೂರಾಲಜಿ ಹಾಗೂ ಡಬ್ಲೂಹೆಚ್‌ಓ ವತಿಯಿಂದ ವಿಶ್ವ ಮೆದುಳು ದಿನವಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯವೆಂದರೆ ‘ಮೆದುಳಿನ ಆರೋಗ್ಯ ಮತ್ತು ವೈಕಲ್ಯ; ಯಾರನ್ನೂ ಹಿಂದೆ ಬಿಡಬೇಡಿ’ ಎಂಬುದಾಗಿದೆ. ಈ ಘೋಷವಾಕ್ಯದ ಅಡಿ ವಿಶ್ವದಾದ್ಯಂತ ಹಲವಾರು ಕಾರ್ಯಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತದೆ.

ಇದರ ಉದ್ದೇಶವೆಂದರೆ ಮೆದುಳಿನ ಆರೋಗ್ಯವನ್ನು ಕಾಪಾಡುವುದು ಮತ್ತು ವೈಕಲ್ಯತೆಗಳನ್ನು ಚಿಕಿತ್ಸೆ ಮತ್ತು ತಡೆಗಟ್ಟುವುದು. ಮೆದುಳಿನ ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವವರಿಗೆ ಮೆದುಳಿನ ಮತ್ತು ಇತರೆ ಮೆದುಳಿನ ಖಾಯಿಲೆಗಳ ಬಗ್ಗೆ ಹೊಸ ವಿಚಾರಗಳನ್ನು ತಿಳಿಯಪಡಿ ಸುವುದು. ಮೆದುಳಿನ ಆರೋಗ್ಯ ಎಲ್ಲರ ಹಕ್ಕು ಎಂದು ಪ್ರಚುರ ಪಡಿಸುವುದು. ನಾವು ನರರೋಗ ತಜ್ಞರಾಗಿ ನಮಗೆ ಮೆದುಳಿನ ವೈಕಲ್ಯತೆ ಹಾಗೂ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ಹಾಗು ಸಹಾಯ ನೀಡಿ ಅವರು ಕೂಡ ಸಮಾಜಮುಖವಾಗಿ ತಮ್ಮ ಜೀವನ ನಡೆಸಲು ಪ್ರೇರೇಪಿಸುವುದು ಹಾಗೂ ಉತ್ತಮ ಹಾದಿಯನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿರಬೇಕು.

ಎಲ್ಲಾ ರೀತಿಯ ವೈಕಲ್ಯಗಳು ಮತ್ತು ಮೆದುಳಿನ ಖಾಯಿಲೆಗಳು ಒಂದು ರೀತಿಯ ಕಳಂಕ. ಇವೆಲ್ಲದರ ಬಗ್ಗೆ ವಿಸ್ತಾರವಾಗಿ ಮಾತನಾಡುವ ಪ್ರಚುರ ಪಡಿಸುವ ಹಾಗೂ ತಿಳಿ ಹೇಳುವುದರಿಂದ ಅದರ ಚಿಕಿತ್ಸೆಗಳು, ತಡೆಗಟ್ಟುವ ವಿಧಾನಗಳನ್ನೂ ಮನದಟ್ಟುಮಾಡುವುದರಿಂದ ಈ ವೈಕಲ್ಯವಿರುವ ವ್ಯಕ್ತಿಗಳು ಅತ್ಯಂತ ಆರೋಗ್ಯಕರವಾಗಿ ಸಮಾಜಕ್ಕೆ ಒಪ್ಪುವ ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸಲು ಅನುಕೂಲವಾಗುತ್ತದೆ. ಮನುಷ್ಯನ ವಿಕಾಸ, ಒಂದು ಸೂಕ್ಷ್ಮ ಜೀವಾಣು ವಿನಿಂದ ಹಿಡಿದು ಅತ್ಯಂತ ಮುಂದುವರೆದ ಮಾನವನನಾಗಲು ಮೆದುಳಿನ ಬೆಳವಣಿಗೆಯೇ ಮುಖ್ಯ ಕಾರಣ. ಮೆದುಳನ್ನ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳು ಮತ್ತು ಸಂಶೋಧನೆಗಳನ್ನು ಶತ ಶತಮಾನಗಳಿಂದಲೂ ನಡೆಯುತ್ತಲೇ ಬಂದಿವೆ.

ಮೊದಲಿಗೆ ಮೆದುಳಿನ ನಿರ್ದಿಷ್ಟ ಸ್ಥಳಗಳಿಗೆ ಒಂದು ಕಾರ್ಯವೈಖರಿಯನ್ನ ಜೋಡಿಸಿ ಮಾಡುವ ರೀತಿಯಾಗಿ ಆಲೋಚನೆಯಿತ್ತು. ಆದರೆ ಈಗಿನ ಸಂಶೋಧನೆ ಗಳಿಂದ ಮೆದುಳು ಒಂದು ಜಾಲಬಂಧ (ನೆಟ್ವರ್ಕ್) ಸುಮಾರು ನಾಲ್ಕು ಶತಕೋಟಿಗಳಿಗೂ ಮೀರಿದ ನರತಂತುಗಳಿಂದ ಆಗಿರುವ ಮೆದುಳು ಇನ್ನೆಷ್ಟು ಶತಕೋಟಿ ಸಂಪರ್ಕಗಳನ್ನು ಸಾಽಸಿ ನಮ್ಮ ದೇಹವನ್ನೆಲ್ಲಾ ನಿಯಂತ್ರಿಸುವ ಬಗೆ ಮಾತ್ರ ತುಂಬಾ ಅಚ್ಛರಿ ಮೂಡಿಸುತ್ತದೆ. ನಮ್ಮ ಅತ್ಯಂತ ಮುಂದುವರೆದ ಭಾಗವಾದ ಮುಮ್ಮೆದುಳು (-ಂಟಲ್ ಕಾರ್ಟೆಕ್ಸ್) ನಿರ್ವಹಿಸುವ ಕಾರ್ಯ ಉದಾ ಯೋಜನೆ ಲಹರಿ, ಅಭಿಪ್ರಾಯ ಸಂಗ್ರಹಣೆ ಮತ್ತು ನಿರ್ವಹಣೆ, ಭಾವನಾತ್ಮಕ ಸಂಬಂಧಗಳು ಹಾಗೂ ವಿಚಾರ ಇವೆಲ್ಲವನ್ನೂ ಗಮನಿಸಿದಾಗ ಮಾನವನ ಎಲ್ಲಾ ಗುಣಗಳಿಗೆ ಮೆದುಳೊಂದೆ ಕಾರಣ ಎನ್ನಬಹುದು.

ಈ ನಾಲ್ಕು ಶತಕೋಟಿ ನರತಂತುಗಳು ಮೆದುಳಿನಲ್ಲಿ ಸೇರಿ ಮತ್ತು ಅದರಿಂದ ಬೆನ್ನುಹುರಿಯ ಮೂಲಕ ದೇಹದ ಇತರೆ ಭಾಗಗಳಿಗೆ ನರಗಳ ಮೂಲಕ ತಮ್ಮ
ಸನ್ನೆಗಳನ್ನು ಕಳುಹಿಸಿ ನಿಯಂತ್ರಿಸುವ ಬಗೆ ಅತ್ಯಂತ ವಿಸ್ಮಯಕಾರಿ. ಮೆದುಳು ಉಪಯೋಗಿಸುವುಷ್ಟು ಶಕ್ತಿ (ಎಟಿಪಿ)ಯನ್ನ ದೇಹದ ಬೇರೆ ಯಾವ ಭಾಗಗಳೂ ಕೂಡ ಬಳಸುವುದಿಲ್ಲ. ಮೆದುಳಿನ ವಿವಿಧ ಭಾಗಗಳಿಗೆ ಮತ್ತು ಜಾಲಬಂಧಕ್ಕೆ ತೊಂದರೆಯುಂಟಾಗಿ ಅದರಿಂದ ಉಂಟಾಗುವ ಖಾಯಿಲೆಗಳು ಹಲವಾರು. ಮನುಷ್ಯಜೀವಿ ಒಂದು ಜೀವಕೋಶದಿಂದ ಪ್ರಾರಂಭವಾಗಿ ಮತ್ತೆ ಜೀವಕೋಶಗಳು ವಿಭಾಗಗೊಂಡು ದೇಹದ ಅಂಗಾಂಗಗಳು ಆಗುವ ರೀತಿ ಅದರಲ್ಲೂ ಮೆದುಳಿನ ಬೆಳವಣಿಗೆಯನ್ನು ವಿಶ್ವ ಮೆದುಳು ಬುದ್ಧಿಮತ್ತೆ) ಎನ್ನುವ ಪದ ೧೯೫೦ ರಲ್ಲಿ ಬಳಕೆಗೆ ಬಂದಿತು.

ಇದು ಮೆದುಳಿನ ಬುದ್ಧಿಮತ್ತೆಯನ್ನ ಕಂಪ್ಯೂಟರ್‌ಗಳು ಮತ್ತು ಇತರ ಯಂತ್ರಗಳು ಅನುಕರಿಸುವ ರೀತಿ ಸೃಷ್ಟಿಸಲಾಯಿತು. ಹೊಸ ಹೊಸ ವಿಷಯಗಳ
ಆವಿಷ್ಕಾರವಾದಂತೆ, ಕ್ಷಮತೆ ಹೆಚ್ಚಾದಂತೆ ಕೃತಕ ಬುದ್ಧಿಮತ್ತೆಯ ಕಾರ್ಯವ್ಯಾಪ್ತಿ ಹಾಗೂ ಕ್ಷಮತೆ ಹೆಚ್ಚಾಗುತ್ತಾ ಬಂದಿದೆ. ಇದುವರೆಗೆ ಮನುಷ್ಯನ ಮೆದುಳೇ ಅತ್ಯಂತ ದೊಡ್ಡ ಕಂಪ್ಯೂಟರ್ ಎಂದು ಭಾವಿಸಿದವರಿಗೆ ಈ ಕೃತಕ ಬುದ್ಧಿಮತ್ತೆಯ ಜಾಲಬಂಧದಿಂದ ಮನುಷ್ಯನ ಮೆದುಳಿಗೊಂದು ಪೈಪೋಟಿ ಬಂದಂತಾಗಿದೆ.
ದಿನ ಗಮನಿಸಿದಾಗ ಮೆದುಳು ಎಷ್ಟು ವಿಶಿಷ್ಟ ಎಂದು ತಿಳಿಯುತ್ತದೆ.

ಮೆದುಳು ಬೆಳವಣಿಗೆಯ ಸಮಯದಲ್ಲಾಗುವ ಯೋಗ, ಧ್ಯಾನ, ದುಶ್ಚಟಗಳಿಂದ ದೂರವಿರುವುದು, ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಮತ್ತು
ಹೊಸ ಹೊಸ ವಿಷಯಗಳನ್ನು ಕಲಿಯುವುದರಿಂದ ಮೆದುಳಿನ ಆರೋಗ್ಯ ಮತ್ತು ಕಾರ್ಯಶೀಲತೆಯನ್ನ ಕಾಪಾಡಿಕೊಳ್ಳಬಹುದು. ನಾವೆಲ್ಲರೂ ಒಳ್ಳೆಯದನ್ನ
ಯೋಚನೆ ಮಾಡಿ ಮೆದುಳಿನ ತೊಂದರೆಗೊಳಗಾದವರಿಗೆ ಉತ್ತಮ ಚಿಕಿತ್ಸೆ ಕೊಡುವುದರಿಂದ ಹಿಡಿದು ಅವರಿಗೆ ಸಹಾನುಭೂತಿ ವ್ಯಕ್ತಪಡಿಸುವುದರಿಂದ ‘ವಿಶ್ವ
ಮೆದುಳಿನ ದಿನ’ಕ್ಕೆ ಒಂದು ಅರ್ಥ ಬಂದಂತಾಗುತ್ತದೆ.

ತೊಂದರೆಯಿಂದ ಹಿಡಿದು ನಂತರದಲ್ಲಿ ಯಾವುದಾದರೂ ಸೋಂಕಿರಬಹುದು. ಅಥವಾ ರಕ್ತ ಸಂಚಾರದ ವ್ಯತ್ಯಾಸವಾಗಬಹುದು, ಅಥವಾ ಗೆಡ್ಡೆಗಳಾಗಬಹುದು ಈ ರೀತಿ ಹಲವಾರು ತೊಂದರೆಗಳು ಮೆದುಳಿನ ರೋಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಈ ವಿಶ್ವ ಮೆದುಳಿನ ದಿನದಂದು ಮೂರ್ಛೆರೋಗ ಬಂದವ ರಿಗೆ ಒಂದು ರೀತಿಯ ಕಳಂಕ ತಟ್ಟಿದಂತೆ ನೋಡುವ ಸಮಾಜದ ಯೋಚನಾ ಲಹರಿಯನ್ನು ಬದಲಾಯಿಸುವುದು ಮತ್ತು ಅದಕ್ಕೂ ಕೂಡ ಎಲ್ಲ ಖಾಯಿಲೆಗಳಂತೆಯೇ
ಸೂಕ್ತ ಚಿಕಿತ್ಸೆ ಇದೆ ಎಂದು ಜನರಿಗೆ ತಿಳಿ ಹೇಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದೇ ರೀತಿಯಾಗಿ ಮಾನಸಿಕ ಖಾಯಿಲೆಗಳಿಗೆ ತುತ್ತಾದವರನ್ನೂ ಕೂಡ
(ಇದು ಕೂಡ ಮೆದುಳಿನ ಒಂದು ಸಮಸ್ಯೆ) ನೋಡುವ ರೀತಿ ಕೂಡ ಬದಲಾಗಬೇಕು.

ಪಾರ್ಶ್ವವಾಯು ಉಂಟಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡುವುದರಿಂದ ಉಂಟಾಗುವ ವೈಕಲ್ಯವನ್ನು ತಡೆಗಟ್ಟುವುದರಿಂದ ಹಿಡಿದು ಅವರು ತಮ್ಮ ಹಿಂದಿನ ಸ್ಥಿತಿಗೆ ಮರಳುವಂತೆ ಮಾಡಬಹುದು. ವಯಸ್ಕರಲ್ಲಿ ಬುದ್ದಿಮಾಂಧ್ಯತೆಯೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಖಾಯಿಲೆ. ಹಿರಿಯರನ್ನ ನಾವು ನೋಡುವ ರೀತಿ, ಅವರೊಂದಿಗೆ ಬೆರೆತುಕೊಳ್ಳುವ ಬಗೆ ಮತ್ತೆ ಈ ಖಾಯಿಲೆಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ ಅದಕ್ಕೆ ಚಿಕಿತ್ಸೆ ಕೊಡುವುದು ಕೂಡ ಹಿರಿಯರಿಗೆ ನಾವು ಸಲ್ಲಿಸುವ ಒಂದು ರೀತಿಯ ಗೌರವವವೇ ಸರಿ. ನಮ್ಮ ಮೆದುಳು, ನಮ್ಮ ಹಕ್ಕು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ.

ಯೋಗ, ಧ್ಯಾನ, ದುಶ್ಚಟಗಳಿಂದ ದೂರವಿರುವುದು, ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವುದರಿಂದ
ಮೆದುಳಿನ ಆರೋಗ್ಯ ಮತ್ತು ಕಾರ್ಯಶೀಲತೆಯನ್ನ ಕಾಪಾಡಿಕೊಳ್ಳಬಹುದು. ನಾವೆಲ್ಲರೂ ಒಳ್ಳೆಯದನ್ನ ಯೋಚನೆ ಮಾಡಿ ಮೆದುಳಿನ ತೊಂದರೆಗೊಳ ಗಾದವರಿಗೆ ಉತ್ತಮ ಚಿಕಿತ್ಸೆ ಕೊಡುವುದರಿಂದ ಹಿಡಿದು ಅವರಿಗೆ ಸಹಾನುಭೂತಿ ವ್ಯಕ್ತಪಡಿಸುವುದರಿಂದ ‘ವಿಶ್ವ ಮೆದುಳಿನ ದಿನ’ಕ್ಕೆ ಒಂದು ಅರ್ಥ
ಬಂದಂತಾಗುತ್ತದೆ.

ಎಐ 

ಆರ್ಟಿಫಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ಎನ್ನುವ ಪದ ೧೯೫೦ ರಲ್ಲಿ ಬಳಕೆಗೆ ಬಂದಿತು. ಇದು ಮೆದುಳಿನ ಬುದ್ಧಿಮತ್ತೆಯನ್ನ ಕಂಪ್ಯೂಟರ್‌ಗಳು ಮತ್ತು ಇತರ ಯಂತ್ರಗಳು ಅನುಕರಿಸುವ ರೀತಿ ಸೃಷ್ಟಿಸಲಾಯಿತು. ಹೊಸ ಹೊಸ ವಿಷಯಗಳ ಆವಿಷ್ಕಾರವಾದಂತೆ, ಕ್ಷಮತೆ ಹೆಚ್ಚಾದಂತೆ ಕೃತಕ ಬುದ್ಧಿಮತ್ತೆಯ
ಕಾರ್ಯವ್ಯಾಪ್ತಿ ಹಾಗೂ ಕ್ಷಮತೆ ಹೆಚ್ಚಾಗುತ್ತಾ ಬಂದಿದೆ. ಇದುವರೆಗೆ ಮನುಷ್ಯನ ಮೆದುಳೇ ಅತ್ಯಂತ ದೊಡ್ಡ ಕಂಪ್ಯೂಟರ್ ಎಂದು ಭಾವಿಸಿದವರಿಗೆ ಈ ಕೃತಕ
ಬುದ್ಧಿಮತ್ತೆಯ ಜಾಲಬಂಧದಿಂದ ಮನುಷ್ಯನ ಮೆದುಳಿಗೊಂದು ಪೈಪೋಟಿ ಬಂದಂತಾಗಿದೆ.