Friday, 20th September 2024

Honda Activa : ದಕ್ಷಿಣ ಭಾರತದಲ್ಲಿ 1 ಕೋಟಿ ಹೋಂಡಾ ಆಕ್ಟಿವಾ ಸ್ಕೂಟರ್‌ ಮಾರಾಟ, ಇದು ವಿಶೇಷ ದಾಖಲೆ

Honda Activa

ನವದೆಹಲಿ: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಇಂದು ತಮಿಳುನಾಡು, ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ದಕ್ಷಿಣ ಭಾರತದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ತನ್ನ ಅತ್ಯುತ್ಕೃಷ್ಠ ಬ್ರಾಂಡ್‌ ಆಗಿರುವ ಹೋಂಡಾ ಆಕ್ವಿವಾ (Honda Activa) ಸ್ಕೂಟರ್ 1 ಕೋಟಿ ಮಾರಾಟ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಇದು ದೇಶದ ಸ್ಕೂಟರ್ ವಿಭಾಗದಲ್ಲಿ ಹೊಸ ಮೈಲುಗಲ್ಲಾಗಿದ್ದು ಸಾರ್ವಕಾಲಿಕ ಅತ್ಯಂತ ಆದ್ಯತೆಯ ಮತ್ತು ನೆಚ್ಚಿನ ಸ್ಕೂಟರ್ ಎಂಬ ಸ್ಥಾನಮಾನ ಕಂಡುಕೊಂಡಿದೆ.

2001ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೋಂಡಾ ಆಕ್ಟಿವಾ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಬಿಡುಗಡೆಯಾದಾಗಿನಿಂದ ಆಕ್ಟಿವಾ ವಿಶ್ವಾಸಾರ್ಹತೆ, ಹೊಸತನ ಹಾಗೂ ವಿಭಿನ್ನ ಶೈಲಿಯೊಂದಿಗೆ ಮಾರುಕಟ್ಟೆಗೆ ಇಳಿಯುತ್ತಿದೆ. ಇದು ದೇಶಾದ್ಯಂತ ಅದರ ಯಶಸ್ಸನ್ನು ಹೆಚ್ಚಿಸಿದೆ. ಆಕ್ಟಿವಾ ಬಗ್ಗೆ ಗ್ರಾಹಕರ ಪ್ರೀತಿಯು ವರ್ಷಗಳಿಂದ ಬೆಳೆಯುತ್ತಲೇ ಇದೆ. ದಕ್ಷಿಣ ವಲಯದಲ್ಲಿ, ಆಕ್ಟಿವಾದ ಮೊದಲ 50 ಲಕ್ಷ ಮಾರಾಟದ ಮೈಲಿಗಲ್ಲನ್ನು 2017 ರಲ್ಲಿ ಸಾಧಿಸಿತ್ತು. ಅದಕ್ಕೆ ಸುಮಾರ 16 ವರ್ಷಗಳ ಕಾಲ ತೆಗೆದುಕೊಂಡಿತ್ತು. ಆದರೆ, ನಂತರದ 50 ಮಾರಾಟವು ಕೇವಲ 7 ವರ್ಷಗಳಲ್ಲಿ ಆಗಿದೆ. ಇದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರಲ್ಲಿ 110 ಸಿಸಿ ಮತ್ತು 125 ಸಿಸಿ ಮಾದರಿಗಳು ಸೇರಿದೆ.

ದಕ್ಷಿಣ ಭಾರತದಾದ್ಯಂತ 1,700 ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳನ್ನು ಹೊಂದಿರುವ ಎಚ್‌ಎಂಎಸ್‌ಐನ ದೃಢವಾದ ಮಾರಾಟ ಮತ್ತು ಸೇವಾ ಜಾಲವು ದಕ್ಷಿಣ ಭಾರತದ ಮೂಲೆ ಮೂಲೆಗೆ ತಲುಪಲು ಸಹಾಯ ಮಾಡಿದೆ. ಒಂದು ಕೋಟಿ ಮಾರಾಟದ ಮೈಲಿಗಲ್ಲು ಡೀಲರ್ ಬೆಂಬಲದೊಂದಿಗೆ ಸಾಧಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: Jawa 42 FJ : 1.99 ಲಕ್ಷ ರೂಪಾಯಿ ಬೆಲೆಯಲ್ಲಿ ರಸ್ತೆಗೆ ಇಳಿಯಿತು ಹೊಸ ಜಾವಾ ಮೋಟಾರ್‌ಸೈಕಲ್‌

ಈ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ “ದಕ್ಷಿಣ ವಲಯದಲ್ಲಿ 10 ಮಿಲಿಯನ್ ಆಕ್ಟಿವಾ ಮಾರಾಟದ ಮೈಲಿಗಲ್ಲು ಸಾಧಿಸುವುದು ನಮ್ಮ ಗ್ರಾಹಕರ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿ . ಇದು ಹೊಸತನವನ್ನು ಮುಂದುವರಿಸಲು ಮತ್ತು ಮೌಲ್ಯ ವೃದ್ಧಿಸಲು ಸಹಾಯ ಮಾಡಿದೆ. ನಮ್ಮ ಗ್ರಾಹಕರು ಮತ್ತು ಡೀಲರ್ ಪಾಲುದಾರರ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ಇನ್ನೂ ಹಲವು ಸ್ಕೂಟರ್ ವೇರಿಯೆಂಟ್‌ಗಳು

110 ಸಿಸಿ ಮತ್ತು 125 ಸಿಸಿ ಅವತಾರಗಳಲ್ಲಿ ಆಕ್ಟಿವಾ ಹೊರತುಪಡಿಸಿ ಕಂಪನಿಯ ಸ್ಕೂಟರ್ ಶ್ರೇಣಿಯು 110 ಸಿಸಿ ಮತ್ತು 125 ಸಿಸಿ ವೇರಿಯೆಂಟ್‌ನಲ್ಲಿ ಡಿಯೋವನ್ನು ಒಳಗೊಂಡಿದೆ. ಮೋಟಾರ್ ಸೈಕಲ್ ವಿಭಾಗದಲ್ಲಿ, 100-110 ಸಿಸಿ (ಶೈನ್ 100, ಸಿಡಿ 110, ಡ್ರೀಮ್ ಡೀಲಕ್ಸ್ ಮತ್ತು ಲಿವೊ), 125 ಸಿಸಿ (ಶೈನ್ 125 ಮತ್ತು ಎಸ್ ಪಿ 125), 125 ಸಿಸಿ (ಶೈನ್ 125 ಮತ್ತು ಎಸ್ ಪಿ 125), 160 ಸಿಸಿ (ಯುನಿಕಾರ್ನ್ ಮತ್ತು ಎಸ್ ಪಿ 160) ವಿಭಾಗಗಳಲ್ಲಿ ಒಂಬತ್ತು ಅತ್ಯಾಕರ್ಷಕ ಮಾದರಿಗಳಿವೆ.