Thursday, 12th December 2024

ಎಚ್ಚರಿಕೆಯ ಗಂಟೆ

ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ

ಕರ್ನಾಟಕದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿರುವುದು ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಅದರ ನಾಗಾಲೋಟ ದಾಖಲಾಗಿರುವುದು ಆತಂಕಕಾರಿ ಸಂಗತಿಯೇ ಸರಿ. ಕಳೆದ 9 ತಿಂಗಳಲ್ಲಿ 12,239 ಮಂದಿಯಲ್ಲಿ ಡೆಂಘೀ ಸೋಂಕು ಕಾಣಿಸಿಕೊಂಡಿದೆ ಹಾಗೂ ಸೋಂಕಿನ ಪ್ರಮಾಣ ಶೇ.138ರಷ್ಟು ಹೆಚ್ಚಳವಾಗಿದೆ ಎಂಬುದು ನಿಜಕ್ಕೂ ನಿರ್ಲಕ್ಷಿಿಸುವಂಥ ಸಂಗತಿಗಳಲ್ಲ. ಇನ್ನು ಬೆಂಗಳೂರು ವ್ಯಾಾಪ್ತಿಿಯಲ್ಲಿ ಕಳೆದ 9 ತಿಂಗಳಲ್ಲಿ 7,353 ಡೆಂಘೀ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಾಮಾಂತರ ಪ್ರದೇಶದಲ್ಲಿ 2 ಸಾವು ಸಂಭವಿಸಿರುವ ಸುದ್ದಿಯೂ ಬಂದಿದೆ. ಇದು ಖಂಡಿತ ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆ.

ಸೊಳ್ಳೆೆ ನಿಯಂತ್ರಣ, ಲಾರ್ವಾಗಳ ನಾಶ ಮತ್ತು ಜಾಗೃತಿ ಕಾರ್ಯಕ್ರಮದಂಥ ಮುನ್ನೆೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಡೆಂಘೀ ಜ್ವರದ ರುದ್ರನರ್ತನ ಅಬಾಧಿತವಾಗಿದೆ. ಇದರ ಹೊಣೆಗಾರಿಕೆಯ ಗಂಟೆಯನ್ನು ಯಾರ ಕೊರಳಿಗೆ ಕಟ್ಟಬೇಕು ಎಂದು ಲೆಕ್ಕಾಾಚಾರ ಹಾಕುವುದಕ್ಕಿಿಂತ, ಈ ಪಿಡುಗಿನ ನಿವಾರಣೆಗೆ ಆರೋಗ್ಯ ಇಲಾಖೆಯ ವಿವಿಧ ಸ್ತರದ ಸಿಬ್ಬಂದಿ, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆೆಗಳು ಸಮರೋಪಾದಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಮಾನವ ದೇಹಕ್ಕೆೆ ಅಪ್ಪಳಿಸುವ ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ. ಸೊಳ್ಳೆೆಗಳು ಉತ್ಪತ್ತಿಿಯಾಗಿ ಹೇರಳ ವ್ಯಾಾಪಿಸುವುದಕ್ಕೆೆ ಕಾರಣವಾಗುವುದು ಎಲ್ಲೆೆಂದರಲ್ಲಿ ಕಟ್ಟಿಿಕೊಳ್ಳುವ ನೀರು. ತಿಪ್ಪೆೆಗುಂಡಿಗಳ ಅಸಮರ್ಪಕ ನಿರ್ವಹಣೆ, ಚರಂಡಿಗಳಲ್ಲಿ ಕೊಳಚೆ ನೀರು ಬೇಕಾಬಿಟ್ಟಿಿ ಹರಿಯುವಿಕೆ, ಘನತ್ಯಾಾಜ್ಯ ವಿಲೇವಾರಿಯಲ್ಲಿನ ಬೇಜವಾಬ್ದಾಾರಿತನ, ಕಟ್ಟಡ ಕಾಮಗಾರಿ ಸೇರಿದಂತೆ ಮತ್ತಿಿತರ ಉದ್ದೇಶಗಳಿಗಾಗಿ ಮಾಡಿಕೊಳ್ಳುವ ನೀರಿನ ಸಂಗ್ರಹವನ್ನು ಸೂಕ್ತವಾಗಿ ಕಾಪಿಟ್ಟುಕೊಳ್ಳದಿರುವುದು ಇವೇ ಮೊದಲಾದ ಬಾಬತ್ತುಗಳು ಸೊಳ್ಳೆೆಗಳ ಉತ್ಪತ್ತಿಿಗೆ ಮೂಲಕಾರಣವಾಗುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ಗೊತ್ತಿಿದ್ದರೂ ಸೂಕ್ತ ನಿರ್ವಹಣೆಗೆ ಸಂಬಂಧಪಟ್ಟ ಆಡಳಿತ ಮುಂದಾಗದಿರುವುದು ದೊಡ್ಡ ಸಮಸ್ಯೆೆಗೆ ಹೇತುವಾಗುತ್ತದೆ; ಬೆಳೆಯಬಿಟ್ಟರೆ ಪೆಡಂಭೂತವಾಗುತ್ತದೆ.

ಈ ದಿಕ್ಕಿಿನಲ್ಲಿ ಶ್ರಮಿಸದಿದ್ದರೆ ಮಾರಕವಾಗುವುದು ನಮಗೇ ಎಂಬುದನ್ನು ಜನತೆಯೂ ಅರಿಯಬೇಕು.
ಪ್ರಕೃತಿ ವಿಕೋಪದಿಂದಾಗುವ ರೋಗ-ರುಜಿನಗಳು ಅಥವಾ ಸಾವು-ನೋವುಗಳ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಆದರೆ ಮಾನವನಿರ್ಮಿತ ಎಡವಟ್ಟುಗಳ ಪ್ರಮಾಣ ಮತ್ತು ತೀವ್ರತೆಯನ್ನಾಾದರೂ ತಗ್ಗಿಿಸಬಹುದಲ್ಲವೇ? ಮನುಷ್ಯನ ದುರಾಸೆ ಮತ್ತು ಮಿತಿಮೀರಿದ ನಗರೀಕರಣದ ಪರಿಣಾಮ ಕಾಡುಗಳ ಸಾಂದ್ರತೆ/ದಟ್ಟಣೆ ತಗ್ಗಲು ಶುರುವಾಗಿ ಅದು ಏನೆಲ್ಲಾಾ ಅವಾಂತರಗಳನ್ನು ಸೃಷ್ಟಿಿಸಿತು ಎಂಬುದನ್ನು ಕೊಡಗು ಜಿಲ್ಲೆೆಯಲ್ಲಿ ದಾಖಲಾದ ಭೂಕುಸಿತದ ನಿದರ್ಶನಗಳು ತೋರಿಸಿಕೊಟ್ಟಿಿವೆ. ಇದು ಮರುಕಳಿಸಬಾರದು ಎಂದಾದಲ್ಲಿ, ಸಂಘಟಿತ ಯತ್ನಗಳು ಮತ್ತು ವಿವೇಚನಾಯುಕ್ತ ಕ್ರಮಗಳು ಶೀಘ್ರವಾಗಿ ಕಾರ್ಯರೂಪಕ್ಕೆೆ ಬರಬೇಕಿವೆ.