ಕಲ್ಯಾಣ ಕರ್ನಾಟಕ ಪ್ರದೇಶದ ಏಳೂ ಜಿಲ್ಲೆಗಳಲ್ಲಿ ಈಗ ಉಷ್ಣಾಂಶ ೪೧ ಡಿಗ್ರಿ ಸೆಲ್ಸಿಯಸ್ ದಾಟಿದೆ. ಅಲ್ಲಿನ ಕೃಷಿಕರು, ಕಾರ್ಮಿಕರು, ನೌಕರ ವರ್ಗದವರು, ವಿದ್ಯಾರ್ಥಿಗಳು ದೈನಂದಿನ ಕಾರ್ಯ ನಿರ್ವಹಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಾರೆ.
ಯಾವುದೇ ಪ್ರದೇಶದಲ್ಲಿ ನಿರಂತರ ಮೂರು ದಿನದ ಗರಿಷ್ಠ ತಾಪಮಾನ ೪೦ ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆ ಪ್ರದೇಶವು ‘ಬಿಸಿಗಾಳಿ ಪೀಡಿತ’ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ದೆಹಲಿಯಲ್ಲಿ ೩೯ ಡಿಗ್ರಿ ಹಾಗೂ ಮುಂಬೈಯಲ್ಲಿ ೪೦ ಡಿಗ್ರಿ ಸೆಲ್ಸಿಯಸ್ ದಾಖಲಾದ್ದರಿಂದ ಏಪ್ರಿಲ್ ೧ರಿಂದಲೇ ‘ಎ ಅಲರ್ಟ್’ ನೀಡಲಾಗಿದೆ. ನೆರೆಯ ತೆಲಂಗಾಣ ರಾಜ್ಯದ ಹೈದರಾಬಾದ್, ಅದಿಲಾಬಾದ್, ಭೂಪಾಲಪಲ್ಲಿ, ಕುಮಾರಮ್ ಭೀಮ, ರಂಗಾರೆಡ್ಡಿ ಪ್ರದೇಶಗಳಲ್ಲೂ ೪೦ ಡಿಗ್ರಿ ದಾಟಿದೆ ಎಂದು ಐಎಂಡಿ ದಾಖಲಿಸಿದ್ದ ರಿಂದ ‘ಎ ಅಲರ್ಟ್’ ಘೋಷಿಸಲಾಗಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಜಿಗಳಲ್ಲಿ ಮಾರ್ಚ್ ೩೦ ರಿಂದಲೇ ೩೯.೫ರಿಂದ ೪೦ ಡಿಗ್ರಿ ದಾಖಲಾಗಿದೆ. ಆದರೂ ರಾಜ್ಯ ಸರಕಾರವು ‘ದೆಹಲಿಯಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆ ಮಾಡದ ಕಾರಣ ಕಲ್ಯಾಣ ಕರ್ನಾಟಕದ ಜಿಗಳಲ್ಲೂ ಮಾಡುವುದಿಲ್ಲ’ ಎಂದು ತಿಳಿಸಿದೆ. ಬಿಸಿಗಾಳಿಯನ್ನು ‘ಪ್ರಕೃತಿ ವಿಕೋಪ’ ಎಂದು ರಾಜ್ಯ ಸರಕಾರ ಪರಿಗಣಿಸಿದೆ. ಇದರ ಪರಿಣಾಮದಿಂದ ಜೀವಹಾನಿ ಸಂಭವಿಸಿದರೆ ? ೪ ಲಕ್ಷ ಪರಿಹಾರ ಕೊಡುವುದೂ ಕಾಯಿದೆಯಲ್ಲಿದೆ. ಆದರೆ, ಈ ಸಂಬಂಧ ಜಿಡಳಿತದಿಂದ ಪೂರ್ಣಪ್ರಮಾ ಣದ ಮಾಹಿತಿ ದೊರೆಯದ ಕಾರಣ ಈವರೆಗೆ ಬಿಸಿ ತಟ್ಟಿ ಪ್ರಾಣ ಕಳೆದು ಕೊಂಡವ ರನ್ನು ಪತ್ತೆ ಮಾಡಲು ಆಗಿಲ್ಲ.
ಪರಿಹಾರ ನೀಡುವ ವಿಚಾರವೂ ಪ್ರಚಾರ ಪಡೆದಿಲ್ಲ. ಪಿಯು ದ್ವಿತೀಯ ಪರೀಕ್ಷೆಗಳು ಮಾರ್ಚ್ ಬರುವ ಮುನ್ನ ವೇ ಮುಗಿಯಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಈ ಬಾರಿ ಏಪ್ರಿಲ್ ನಲ್ಲಿ ನಡೆಯುತ್ತಿವೆ. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ
ಸಿಲುಕಿದ್ದಾರೆ. ಅಡೆತಡೆಗಳ ಮಧ್ಯೆ ಮಕ್ಕಳು ಪರೀಕ್ಷೆ ಎದುರಿಸುತ್ತಿರುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸರಕಾರಿ ಕಚೇರಿಗಳ ಕೆಲಸದ ಅವಽ, ಪರೀಕ್ಷೆಗಳ ಅವಽಯನ್ನು ಬದಲಾವಣೆ ಮಾಡಬೇಕು. ಕಾರ್ಮಿಕರ ವರ್ಗಕ್ಕೆ ಸೂಕ್ತ ನೀರು, ಆಹಾರ ಪೂರೈಸುವ ವ್ಯವಸ್ಥೆ ಮಾಡಬೇಕು.