ದಿನದಿಂದ ದಿನಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) ೧೦೦-೨೦೦ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಶೇ.೫೦ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣ ಎನ್ನಲಾಗಿದೆ. ಕಳೆದ ೧೫ ವರ್ಷಗಳಿಂದೀಚೆಗೆ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಂಚಾರ ದಟ್ಟಣೆಯೂ ಜಾಸ್ತಿಯಾಗಿದೆ. ವಾಹನಗಳು ಹೊರಬಿಡುವ ಕಾರ್ಬನ್ ಮೊನಾ ಕ್ಸೈಡ್‌ನಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಹಳೆಯ ವಾಹನಗಳಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ.
ದೆಹಲಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಅಷ್ಟೆನೂ ಅಪಾಯಕಾರಿ ಮಟ್ಟ ತಲುಪಿಲ್ಲ. ಆದರೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿಮೀರುತ್ತಿರುವ ಕಟ್ಟಡ ಕಾಮಗಾರಿಯಿಂದಾಗಿ ಮಾಲಿನ್ಯ ಪ್ರಮಾಣ ಜಾಸ್ತಿಯಾಗುವ ಆತಂಕ ಎದುರಾಗಿದೆ. ಸದ್ಯ ನಮ್ಮಲ್ಲಿನ ಗಾಳಿಯ ಗುಣಮಟ್ಟವನ್ನು ದೆಹಲಿಯ ವಾಯುಮಾಲಿನ್ಯದೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ ವಾಯುಗುಣಮಟ್ಟ ಮಧ್ಯಮ ಪ್ರಮಾಣ ಮೀರು ವುದಿಲ್ಲ. ಆಗಾಗ ಸುರಿಯುವ ಮಳೆಯು ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗುವು ದನ್ನು ನಿಯಂತ್ರಿಸುತ್ತದೆ.
ಆದರೆ ಇದೇ ಪ್ರಮಾಣದಲ್ಲಿ ವಾಹನ ಮತ್ತಿತರ ಕಾರಣಗಳಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಾ ಹೋದರೆ ಪರಿಸ್ಥಿತಿ ಬಿಗಡಾ ಯಿಸಬಹುದು. ನಗರದಲ್ಲಿ ಸಾರಿಗೆ ವಲಯವು ವಾಯುಮಾಲಿನ್ಯಕ್ಕೆ ಶೇ.೫೦.೫ರಷ್ಟು ಕೊಡುಗೆ ನೀಡುತ್ತಿವೆ. ರಸ್ತೆ ಧೂಳಿನಿಂದ ಶೇ.೧೬.೯, ಕಟ್ಟಡ ನಿರ್ಮಾಣ ಮತ್ತು ಕೆಡವುದರಿಂದ ಶೇ. ೧೧, ತ್ಯಾಜ್ಯ ಸುಡುವುದರಿಂದ ಶೇ.೫.೯, ಕೈಗಾರಿಕೆಗಳಿಂದ ಶೇ.೦.೧ರಷ್ಟು ಮಾಲಿನ್ಯ ಉಂಟಾಗುತ್ತಿದೆ.
ಪರಿಸ್ಥಿತಿ ಹೀಗೇ ಮುಂದುವರಿದರೆ ೨೦೩೦ರ ವೇಳೆಗೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇ.೭೪ಕ್ಕೆ ಏರಿಕೆಯಾಗಲಿದೆ ಎಂದು ಆತಂಕಕಾರಿ ವರದಿಯನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ಖಾಸಗಿ ಸಾರಿಗೆ ವಿಧಾನಗಳ ಮೇಲೆ ನಗರದ ಹೆಚ್ಚುತ್ತಿರುವ ಅವಲಂಬನೆಯು ೨೦೩೦ರ ವೇಳೆಗೆ ಪರಿಸರ ಮಾಲಿನ್ಯದಲ್ಲಿ ಶೇ.೭೦ ಕ್ಕಿಂತ ಹೆಚ್ಚು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಮುನ್ಸೂಚನೆ ನೀಡಿವೆ. ನಿರಂತರ ವಾಯುಮಾಲಿನ್ಯ ಹೆಚ್ಚಳದಿಂದಾಗಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದಿನದಿಂದ ದಿನಕ್ಕೆ ಹೃದಯಾಘಾತ ಮತ್ತು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಸಾರಿಗೆ ವಲಯದಿಂದ ಆಗುತ್ತಿರುವ ವಾಯು ಮಾಲಿನ್ಯದ ಪ್ರಮಾಣವನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
Read E-Paper click here