ರಾಜ್ಯದಲ್ಲಿ ಒಟ್ಟು ೬೬,೩೬೧ ಅಂಗನವಾಡಿ ಕೇಂದ್ರಗಳಿದ್ದು, ೧೯,೮೦೨ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿ ಇಲ್ಲವೆ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಒದಗಿಸಲಾಗಿದೆ. ಈ ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಕಳೆದ ಏಳೆಂಟು ತಿಂಗಳಿನಿಂದ ರಾಜ್ಯದ ಬಹುತೇಕ ಅಂಗನವಾಡಿಗಳ ಕಟ್ಟಡಗಳ ಬಾಡಿಗೆ ಪಾವತಿಸಿಲ್ಲ.
ಕೇಂದ್ರವನ್ನು ಮುಚ್ಚುವ ಸ್ಥಿತಿ ಬರಬಾರದು ಎಂದು ಹಲವು ಕಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತರೇ ತಮ್ಮ ಸ್ವಂತ ದುಡ್ಡು ಕೊಟ್ಟು ಬಾಡಿಗೆ ಪಾವತಿಸಿzರೆ. ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಂಗಲ್ಯ ಅಡವಿಟ್ಟು ಬಾಡಿಗೆ ಕಟ್ಟಿದರೆ, ಮತ್ತೊಬ್ಬ ಕಾರ್ಯಕರ್ತೆ ಸಾಲ ಮಾಡಿ ಕಳೆದ ೨೦ ತಿಂಗಳಿನಿಂದ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಇಂತಹ ಹಲವು ಉದಾಹರಣೆಗಳು ಸಿಗುತ್ತವೆ. ಅಂಗನವಾಡಿ ಕಟ್ಟಡದ ಬಾಡಿಗೆ ಮಾತ್ರವಲ್ಲ, ತರಕಾರಿ, ಮೊಟ್ಟೆ ಖರೀದಿ ಮಾಡಿದ ಹಣವನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಏಳು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ. ಬಾಡಿಗೆ ಪಾವತಿಸದ ಕಾರಣ ಜಾಗ ಖಾಲಿ ಮಾಡುವಂತೆ ಕಟ್ಟಡ ಮಾಲೀಕರು ಒಂದೆಡೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿ ಇಲಾಖೆಯ ಅಽಕಾರಿಗಳು ದಿನ ದೂಡುತ್ತಿದ್ದಾರೆ.
ಇದರ ಪರಿಣಾಮ ವಿದ್ಯುತ್ ಪಾವತಿಸಲೂ ಸಾಧ್ಯವಾಗದಂತಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ನಗರದಲ್ಲಿ ಒಂದು ಅಂಗನವಾಡಿ ಕೇಂದ್ರದ ತಿಂಗಳ ಸರಾಸರಿ ವಿದ್ಯುತ್ ಬಿಲ್ ? ೨೧೦ ಮತ್ತು ಗ್ರಾಮೀಣ ಭಾಗದಲ್ಲಿ ?೧೫೦ ಬರುತ್ತದೆ. ವಿದ್ಯುತ್ ಬಿಲ್ ಪಾವತಿಸದ್ದಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ ಪ್ರಕರಣ ಗಳು ನಡೆದಿವೆ. ಪೂರ್ವ ಪ್ರಾಥಮಿಕ ಶಿಕ್ಷಣ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವುದು ಕಡಿಮೆಯಾಗುತ್ತಿದೆ. ಇದರ ಜತೆಗೆ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆಯೂ ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಅನುದಾನ. ಆದ್ದರಿಂದ ಸರಕಾರ ಕೂಡಲೇ ಅಂಗನವಾಡಿಗಳಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಅಂಗನವಾಡಿಗಳನ್ನು ಉಳಿಸಿಕೊಳ್ಳಬೇಕು.