ಅಮೆರಿಕದಲ್ಲಿ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ಚುನಾವಣೆ ಸಿದ್ಧತೆಗಳು ಆರಂಭಗೊಂಡ ಸಂದರ್ಭದಲ್ಲಿ ಗ್ರೀನ್ ಕಾರ್ಡ್
ವಿಷಯವೂ ಮಹತ್ವ ಪಡೆದಿತ್ತು.
ಬಹುತೇಕ ಭಾರತೀಯರು ಉದ್ಯೋಗದ ಕಾರಣ ಅಮೆರಿಕದಲ್ಲಿ ನೆಲೆಸಿರು ವುದರಿಂದ ಚುನಾವಣೆಯಲ್ಲಿ ಭಾರತೀಯರ ಪಾತ್ರವೂ ನಿರ್ಣಾಯಕವಾಗಿತ್ತು. ಆದ್ದರಿಂದ ಜೋ ಬೈಡನ್ ತಮ್ಮ ಚುನಾವಣಾ ಭರವಸೆಗಳಲ್ಲಿ ಗ್ರೀನ್ ಕಾರ್ಡ್ ವಿಷಯಕ್ಕೂ ಮಹತ್ವ
ನೀಡಿದ್ದರು. ಇದೀಗ ಭರವಸೆಯನ್ನು ಈಡೇರಿಸುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಲಕ್ಷಾಂತರ ಭಾರತೀಯರಿಗೆ ಅನುಕೂಲ ಒದಗಿಸಿದ್ದಾರೆ.
ವಿದೇಶಿಯರಿಗೆ ಶಾಶ್ವತ ಪೌರತ್ವ ಸೌಲಭ್ಯ ಕಲ್ಪಿಸುವ ಗ್ರೀನ್ ಕಾರ್ಡ್ ಪಡೆಯಲುಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ
ತಡೆಯನ್ನು ಜೋ ಬೈಡನ್ ತೆಗೆದು ಹಾಕಿದ್ದಾರೆ. 2020ರ ಡಿಸೆಂಬರ್ 31ರವರೆಗೆ ಹೊಸ ಗ್ರೀನ್ ಕಾರ್ಡ್ ಪಡೆಯಲು ನಿರ್ಬಂಧ ಹೇರಲಾಗಿತ್ತು. ಬಳಿಕ ಅದನ್ನು ಟ್ರಂಪ್ 2021ರ ಮಾರ್ಚ್ 31ರವರೆಗೂ ವಿಸ್ತರಿಸಿದ್ದರು.
ಜೋ ಬೈಡನ್ ಈಗ ಗ್ರೀನ್ ಕಾರ್ಡ್ ಮೇಲಿದ್ದ ನಿರ್ಬಂಧ ತೆಗೆದುಹಾಕಿದ್ದಾರೆ. ಈ ಮೂಲಕ ಲಕ್ಷಾಂತರ ಭಾರತೀಯರಿಗೆ
ಅನುಕೂಲವಾದಂತಾಗಿದೆ. ಹೊಸದಾಗಿ ಗ್ರೀನ್ ಕಾರ್ಡ್ ಪಡೆಯಲು ಇನ್ನು ಮುಂದೆ ಅರ್ಜಿ ಸಲ್ಲಿಸಲು ಅವಕಾಶ ದೊರಕಲಿದೆ. ಇದರಿಂದ ಅಮೆರಿಕದ ಅನೇಕ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ ಭಾರತೀಯರಿಗೆ ಅನುಕೂಲವಾಗಲಿದೆ. ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ ಭಾರತೀಯರಿಗೆ ನೀಡಿದ್ದ ಭರವಸೆಯನ್ನು ಶೀಘ್ರದಲ್ಲಿಯೇ ಈಡೇರಿಸಿರುವುದು ಸಂತಸದ ಸಂಗತಿ.