ರಾಜ್ಯದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಲಾಗುವುದು ಎಂದು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದು ಸ್ವಾಗತಾರ್ಹ ನಡೆ.
ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಅಂದು ತಂದು ಬಿಟ್ಟ ಈ ಶಿಕ್ಷಣ ಪದ್ಧತಿಯನ್ನು ಯಾವತ್ತೋ ಕೈಬಿಡಬೇಕಾಗಿತ್ತು. ಆದರೆ ಸ್ವತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಸರಕಾರಗಳೆಲ್ಲವೂ ಬ್ರಿಟಿಷ್ ಮನಸ್ಥಿತಿಯಂತೆಯೇ ಕಾರಕೂನುಗಳ ನಿರ್ಮಾಣವನ್ನೇ ಉದ್ದೇಶವಾಗಿಟ್ಟು ಕೊಂಡವೇ ವಿನಾಃ ನೈತಿಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಯೋಚನೆ ಮಾಡಲೇ ಇಲ್ಲ. ಇದೀಗ ಆ ನಿಟ್ಟಿನಲ್ಲಿ ಬದಲಾವಣೆಯ ಹೊಸ ಗಾಳಿಯೊಂದು ಬೀಸು ತ್ತಿರುವುದು ಆಶಾದಾಯಕವಾಗಿದೆ. ಆದರೆ ಬಹುಸಂಖ್ಯಾತ ಹಿಂದೂಗಳ ಪರವಾಗಿರುವ ಪ್ರತೀ ನಿರ್ಧಾರಗಳಿಗೂ ವಿರೋಽಸುತ್ತಲೇ ಬಂದಿರುವ ಕಾಂಗ್ರೆಸ್ ಮುಖಂಡರು ಇದಕ್ಕೂ ಅಪಸ್ವರ ಎತ್ತಿದ್ದಾರೆ.
ಈ ಹಿಂದೆ ಗೋಹತ್ಯೆ ನಿಷೇಧ ಕಾನೂನಿಗೂ ವಿರೋಧ, ಮತಾಂತರ ನಿಯಂತ್ರಣ ಕಾಯಿದೆಗೂ ವಿರೋಧ, ದೇವಾಲಯಗಳನ್ನು ಸರಕಾರಿ ಆಡಳಿತದಿಂದ ಮುಕ್ತ ಮಾಡುವ ನಿರ್ಧಾರಕ್ಕೂ ವಿರೋಧ ಮಾಡಿದ್ದರು. ಇದೀಗ ಭಗವದ್ಗೀತೆ ಬೋಧನೆಗೂ ವಿರೋಧ
ಮಾಡುತ್ತಿರುವುದು ಸರಿಯಲ್ಲ. ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ ಭಗವದ್ಗೀತೆ. ಅದೊಂದು ಮಾನವ ಶಾಸ್ತ್ರ, ರಾಜಕೀಯ ಶಾಸ್ತ್ರ ಸೇರಿದಂತೆ ಹಲವು ಶಾಸ್ತ್ರಗಳ ಹೂರಣ. ಮಹಾತ್ಮ ಗಾಂಧೀಜೀಯವರ ತಾಯಿ ಪುತಲೀಬಾಯಿ ಅವರು ಗಾಂಧೀಜೀಯವರಿಗೆ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದ ರಿಂದಲೇ ಅವರ ಸತ್ಯ, ಅಹಿಂಸೆಯ ಪ್ರತಿಪಾದಕರಾಗಿದ್ದರು. ಎಂಬ ಅಂಶವನ್ನು ತಮ್ಮ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಭಗವ ದ್ಗೀತೆಯಲ್ಲಿ ಮಾರಲ್ ಸೈ ಇದೆ ಎಂಬುದನ್ನು ಗಾಂಧಿಜೀಯವರು ಅಂದೇ ಸಾರಿ ಹೇಳಿದ್ದಾರೆ.
ಆದರೆ ಗಾಂಧೀಜಿಯವರನ್ನು ಆರಾಧಿಸುವ ಕಾಂಗ್ರೆಸ್ ಮುಖಂಡರಿಗೇಕೆ ಭಗವದ್ಗೀತೆ ಬೇಡವಾಗಿದೆ ಎಂಬುದೇ ತಿಳಿಯದ ಸಂಗತಿ.
ವಿರೋಧ ಪಕ್ಷವೆಂದ ಮಾತ್ರಕ್ಕೆ ಎಲ್ಲದಕ್ಕೂ ವಿರೋಧ ಮಾಡುವುದನ್ನು ಬಿಡಬೇಕಿದೆ. ವಿದ್ಯಾರ್ಥಿಗಳಲ್ಲಿ ಒಳ್ಳೆಯ ವಿಚಾರ ಬೆಳೆಯುವಂತೆ ಮಾಡಲು ಒಳ್ಳೆಯ ಸಂಗತಿಗಳನ್ನು ಬೋಽಸುವುದು ಶಿಕ್ಷಣದ ಉದ್ದೇಶ. ಅದು ಬೈಬಲ್ ಆಗಿರಲಿ, ಕುರಾನ್ ಆಗಿರಲಿ, ಭಗವದ್ಗೀತೆಯೇ ಆಗಿರಲಿ. ಅಲ್ಲಿರುವ ಒಳ್ಳೆಯ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರಲ್ಲಿ ಯಾವುದೇ ತಪ್ಪಿಲ್ಲ.