Sunday, 15th December 2024

ಬಿಎಸ್‌ವೈ ಅನುಭವ ಬಳಕೆಯಾಗಲಿ

ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳಲ್ಲಿ ಅವರ ಹೋರಾಟ, ಸಂಘಟನಾ ವ್ಯಕ್ತಿತ್ವದ ಕುರಿತು ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಅವರು ಹಟ, ಮುಂಗೋಪ, ಸಿಡುಕು ಸ್ವಭಾವದವರಾದರೂ ಬಡವರ ಪರ ಕಾಳಜಿ ಉಳ್ಳವರು.

ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಓಡಾಡಿ ಬಿಜೆಪಿಯನ್ನು ಅವರು ಬೆಳೆಸಿzರೆ. ೨೦೧೮ರ ಚುನಾವಣೆಯಲ್ಲಿ ಬಹುಮತ ಬರದೇ ಇದ್ದರೂ ಛಲ ಬಿಡದ ಅವರು ಆಪರೇಷನ್ ಕಮಲ ನಡೆಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಽಕಾರಕ್ಕೆ ತಂದರು. ಆದರೆ ಎರಡು ವರ್ಷ ಪೂರೈಸುತ್ತಿದ್ದಂತೆ ಅವರನ್ನು ರಾಜೀನಾಮೆಯ ನೆಪದಲ್ಲಿ ಅಽಕಾರದಿಂದ ಕೆಳಗಿಳಿಸಲಾಯಿತು.
ಅಽಕಾರ ಪೂರೈಸಲು ವರಿಷ್ಠರು ಬಿಡಲಿಲ್ಲ ಎಂಬ ಅಸಮಾಧಾನವನ್ನು ಯಡಿಯೂರಪ್ಪ ಅವರು ವೇದಿಕೆಯಲ್ಲೇ ಹೊರಹಾಕಿ ದರು.

ನಂತರದ ದಿನಗಳಲ್ಲಿ ಉತ್ತರಾಧಿಕಾರಿ ಎಂದು ಅವರ ಕುಟುಂಬಸ್ಥರು ಬಿಂಬಿಸಿರುವ ವಿಜಯೇಂದ್ರ ಅವರಿಗೆ ಪಕ್ಷ ಹಾಗೂ ಸರಕಾರದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಲು ಯಡಿಯೂರಪ್ಪ ಶತಾಯಗತಾಯ ಯತ್ನಿಸಿದರೂ ಅದಕ್ಕೂ ಅವಕಾಶ ಸಿಗದಿರುವುದು ಅವರ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ. ಒಂದು ವರ್ಷದಿಂದ ಇತ್ತೀಚೆಗೆ ನಡೆದ ವಿಧಾನಸಭೆ, ರಾಜ್ಯಸಭೆ, ವಿಧಾನ ಪರಿಷತ್ತಿನ ಚುನಾವಣೆಗಳ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದು ಅವರ ಎಲ್ಲ ಅಭಿಮಾನಿಗಳಿಗೆ ತಿಳಿದಿರುವ ಸಂಗತಿಯೇ. ಜೂನ್ 20 ಮತ್ತು 21ರಂದು ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾ ಗಲೂ ಅಧಿಕೃತ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಿರುವ ಮೂಲಕ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿತ್ತು.

ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಯಡಿಯೂರಪ್ಪ ಅನೇಕ ಬಾರಿ ಪ್ರಕಟಿಸಿದರೂ ಪಕ್ಷದ ವರಿಷ್ಠರಿಂದ ಸಮ್ಮತಿ ಸಿಕ್ಕಿಲ್ಲ. ಈ ಎಲ್ಲ ಪ್ರಸಂಗಗಳಲ್ಲೂ ಯಡಿಯೂರಪ್ಪ ಅವರಂತಹ ಮುತ್ಸದ್ಧಿ ನಾಯಕರನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ಹೈಕಮಾಂಡ್ ಅಕ್ಷರಶಃ ವಿಫಲವಾಗಿದೆ. ಮುಂದಿನ ದಿನಗಳಲ್ಲಾದರೂ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಂತಹ ಅನುಭವಿ ರಾಜಕಾರಣಿಯನ್ನು ಕಡೆಗಣಿಸಬಾರದು. ಅವರ ಅನುಭವ, ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬೇಕು.