Sunday, 15th December 2024

ಸಂಭ್ರಮ – ಸಾಕಾರ

ಭಾರತದ ರಕ್ಷಣಾ ಪಡೆಗಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಮಹತ್ವದ ಸಂಸ್ಥೆ ಡಿಆರ್‌ಡಿಒ. ನೂತನ ವರ್ಷಾಚರಣೆಯಂದೆ
ಈ ಸಂಸ್ಥೆ ತನ್ನ ೬೩ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿದೆ.

ಇದನ್ನು ಸಂಭ್ರಮಾಚರಣೆ ಎಂದು ಭಾವಿಸುವುದಕ್ಕಿಂತಲೂ ದೇಶದ ರಕ್ಷಣಾ ವ್ಯವಸ್ಥೆ ಅಭಿವೃದ್ಧಿ ನಿಟ್ಟಿನಲ್ಲಿ ಆಯೋಜಿಸಲ್ಪಟ್ಟ ಮಹತ್ವದ ರೂಪುರೇಷೆ. ದೇಶೀಯವಾಗಿಯೇ ಅನೇಕ ಅತ್ಯಾಧುನಿಕ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವ ಅಭಿಯಾನದ ಸಕಾರದ ನಿಟ್ಟಿನಲ್ಲಿ ಆಚರಿಸಲ್ಪಟ್ಟ ಸಡಗರ ಆಚರಣೆ ಇದು.

ಎಂಟು ಬಗೆಯ ನೂತನ ಶಸ್ತ್ರಾಸ್ತ್ರಗಳ ತಯಾರಿಕೆಗೆ ದೊರೆತಿದ್ದ ಅನುಮತಿಯೂ ಸಹ ಸಾಕಾರಗೊಳ್ಳುವ ಸಮಯ ಇದಾಗಿದೆ. ಲಘು ಯುದ್ಧ ಹೆಲಿಕಾಪ್ಟರ್, ಎಕೆ ೨೦೩ ರೈಪಲ್, ಎಟ್ಯಾಗ್ಸ್ ಗನ್ ವ್ಯವಸ್ಥೆ, ತೇಜಸ್ ಮಾರ್ಕ್-ಎ ಯುದ್ಧ ವಿಮಾನ, ಪ್ರಾಜೆಕ್ಟ್ ೭೫ ಜಲಾಂತರ್ಗಾಮಿ, ೫೭  ಯುದ್ಧ ವಿಮಾನ ವಾಹಕಗಳು, ೧೧೦ ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳ ದೇಶಿಯ ತಯಾರಿಕೆ ಸಾಕಾರಗೊಳ್ಳುವ ಸಂಭ್ರಮದ ಸ್ವಾಗತಾಚರಣೆಯೂ ಆಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಈ ಬಾರಿಯ ಸಂಸ್ಥಾಪನಾ ದಿನಾಚರಣೆ ಸ್ವಾವಲಂಬಿ ಭಾರತದ ನಿರ್ಮಾಣದ ಮಹತ್ವದ ಹೆಜ್ಜೆ. ಡಿಆರ್ ಡಿಒ ಅಸಾಧಾರಣಾ ತಾಂತ್ರಿಕ ಪ್ರಗತಿ ಮತ್ತು ಸಾಧನೆಗಳ ಬಗ್ಗೆ ದೇಶ ಹೆಮ್ಮೆ ಪಡುವುದರ ಜತೆಗೆ ಹೊಸ
ವರ್ಷದಲ್ಲಿ ಮತ್ತಷ್ಟು ಯಶಸ್ಸು ದೊರೆಯಂತಾಗಲಿ ಎಂಬ ನಿರೀಕ್ಷೆಗೆ ಮತ್ತಷ್ಟು ಬಲ ಒದಗಿಸಿದ ಆಚರಣೆ ಇದಾಗಿದೆ. ಇಡೀ ದೇಶವು ಹೊಸ ವರ್ಷಾಚರಣೆಯ ಸಂಭ್ರದದಲ್ಲಿ ಮಗ್ನವಾಗಿರುವ ವೇಳೆ ಡಿಆರ್‌ಡಿಒ ಸಂಸ್ಥಾಪನಾ ದಿನಾಚರಣೆ ಬಹುಮುಖ್ಯ ವಾಗಿದೆ.