ಚೀನಾ ಸರಕಾರ ಮೂರು ಮಕ್ಕಳನ್ನು ಹೇರುವಂತೆ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡುತ್ತಿದೆ. ಆದರೆ ಇದೇ ಚೀನಾದ
ಮೂಲಕ ಹರಡಿದ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ಮೂರನೆ ಅಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಯೋಚಿಸು ತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ಮತ್ತೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದ್ದು, ಮಕ್ಕಳ ಸುರಕ್ಷತೆ ಪ್ರಸ್ತುತ ಬಹುಮುಖ್ಯ ಆದ್ಯತೆ ಆಗಬೇಕಿದೆ.
ಭಾರತದಲ್ಲಿ ಸುಮಾರು 9.2ಲಕ್ಷ ಮಕ್ಕಳು ತೀವ್ರ ಸ್ವರೂಪದ ಅಪೌಷ್ಠಿಕತೆಯಿಂದ ಬಳಲುತ್ತಿರುವುದಾಗಿ ಸರಕಾರದ ಮಾಹಿತಿ ತಿಳಿಸುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಸುರಕ್ಷತೆ ದೇಶದ ಪಾಲಿಗೆ ಇಂದು ಸವಾಲಾಗಿ ಪರಿಣಮಿಸುತ್ತಿದೆ. ಸರಕಾರ – ಪೋಷಕರು -ವೈದ್ಯಕೀಯ ಕ್ಷೇತ್ರ ಈಗಾಗಲೇ ಮಕ್ಕಳ ಸುರಕ್ಷತೆಗೆ ಪ್ರಯತ್ನಗಳನ್ನು ಆರಂಭಿಸಿದ್ದರೂ, ಅಪೌಷ್ಠಿಕತೆ ಇರುವ ಮಕ್ಕಳನ್ನು ಕೋವಿಡ್‌ನಿಂದ ರಕ್ಷಿಸುವಲ್ಲಿ ವೈದ್ಯಕೀಯ ಕ್ಷೇತ್ರದ ಪಾತ್ರ ಮುಖ್ಯವಾಗಿದೆ.
ಆರ್‌ಟಿಐ ಪ್ರಶ್ನೆಯೊಂದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಉತ್ತರ ನೀಡಿದ್ದರಿಂದ ಈ ಅಂಕಿ ಅಂಶಗಳು ಬೆಳಕಿಗೆ ಬಂದಿದ್ದು, ಅಚ್ಚರಿ ಜತೆಗೆ ಆತಂಕ ಮೂಡಿಸಿದೆ. ಕಳೆದ ಸಾಲಿನ ನವೆಂಬರ್‌ವರೆಗೆ ಆರು ತಿಂಗಳ ಮಗುವಿನಿಂದ ಆರು
ವರ್ಷದ ಮಗುವಿನವರೆಗೆ ಒಟ್ಟು 9.27ಲಕ್ಷ ಮಕ್ಕಳು ತೀವ್ರ ಸ್ವರೂಪದ ಅಪೌಷ್ಠಿಕತೆಯಿಂದ ನರಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದು, 3.98ಲಕ್ಷ ಮಕ್ಕಳು ಅಪೌಷ್ಠಿಕತೆ ಹೊಂದಿದ್ದಾರೆ. ಬಿಹಾರ – 2.79ಲಕ್ಷ, ಮಹಾರಾಷ್ಟ್ರ – 70.665, ಕರ್ನಾಟಕ -6,899, ಕೇರಳ-6.188, ರಾಜಸ್ಥಾನ-5,732, ಒಡಿಶಾ 15,595, ತಮಿಳುನಾಡು 12,489, ಜರ್ಖಾಂಡ್ 12,059೯, ಆಂಧ್ರ 11,201, ತೆಲಂಗಾಣ 9,045 ಅಪೌಷ್ಠಿಕ ಮಕ್ಕಳನ್ನು ಹೊಂದಿವೆ.
ದೇಶದ ಇತರ ರಾಜ್ಯಗಳ ಅಂಕಿಂಶಗಳನ್ನು ಗಮನಿಸಿದಾಗ ಕರ್ನಾಟಕದ ಪ್ರಮಾಣ ಕಡಿಮೆ. ಆದರೂ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಮತ್ತಷು ಆದ್ಯತೆ ನೀಡಬೇಕಿರುವ ಅವಶ್ಯಕತೆಯನ್ನು ಈ ವಿವರ ಅನಾವರಣಗೊಳಿಸುತ್ತಿದೆ.