Saturday, 14th December 2024

ತನ್ನ ವಿರುದ್ದ ಅಸ್ತ್ರ ಸೃಷ್ಟಿಸಿದ ‘ಕೈ’

ರಾಷ್ಟ್ರ ನಾಯಕರ ನೆರವಿಲ್ಲದೇ ಇಡೀ ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಒಂದು ಮಟ್ಟಿಗೆ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಯಸ್ವಿಯಾಗಿ, ಅನುಕೂಲಕರ ವಾತಾ ವರಣವನ್ನು ಕಟ್ಟಿಕೊಂಡಿದ್ದ ಕಾಂಗ್ರೆಸ್ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮಾಡಿ ಕೊಳ್ಳುತ್ತಿರುವ ಎಡವಟ್ಟುಗಳು ಪಕ್ಷಕ್ಕೆ ಮುಳುವಾಗುತ್ತಿರುವುದು ಸುಳ್ಳಲ್ಲ.

ಗ್ಯಾರಂಟಿಗಳು, ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು, ಬಿಜೆಪಿಯ ಭಾವನಾತ್ಮಕ ವಿಚಾರಗಳಿಗೆ ಸೆಡ್ಡು ಹೊಡೆದು ರಾಜಕೀಯ ಕ್ಕಿಳಿದಿದ್ದ ಕಾಂಗ್ರೆಸ್ ನಾಯಕರು ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ವಿಚಾರ ಪ್ರಸ್ತಾಪಿಸುವ ಮೂಲಕ ತಾವಾಗಿಯೇ ಹಿಂದುತ್ವದ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಸಹಜವಾಗಿ ಭಾವನಾತ್ಮಕ ವಿಚಾರದ ಅಸ್ತ್ರ ಅನಾಯಾಸವಾಗಿ, ಅದೂ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿರು ವಾಗಲೇ ಬಿಜೆಪಿ ಕೈಗೆ ದೊರಕಿದೆ.

ಕೋಲು ಕೊಟ್ಟು ಹೊಡೆಸಿಕೊಳ್ಳುವುದೆಂದರೆ ಇದೇ. ಹಾಗೆ ನೋಡಿದರೆ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷದಿಂದ ಕಾಂಗ್ರೆಸ್ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿತ್ತು. ಚುನಾವಣಾ ರಾಜಕೀಯಕ್ಕೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಬಹಳ ವ್ಯವಸ್ಥಿತವಾಗಿಯೇ ಮಾಡ ಲಾಗಿತ್ತು. ಅದರಲ್ಲೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡಿ ವ್ಯಾಪಕ ಪ್ರಭಾವ ಬೀರಿತ್ತು.

ಜತೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಹ ರಾಜ್ಯದಲ್ಲಿ ಯಶಸ್ವಿಯೇ ಆಗಿತ್ತು. ಪೂರಕವಾಗಿ ಬಜೆಟ್‌ಗೆ ಮೊದಲೇ ತನ್ನ ಉಚಿತಗಳ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಜನ-ಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಗುತ್ತಿಗೆ ಹಗರಣ ಹಾಗೂ ಶೇ.೪೦ ಕಮಿಷನ್ ಆರೋಪಗಳು ಸರಕಾರದ ವಿರುದ್ಧ ಜನಮಾನಸದಲ್ಲಿ ಎಲ್ಲೋ ಒಂದು ಕಡೆ ಭ್ರಷ್ಟಾಚಾರದ ಬಗೆಗೆ ಅಸಹನೆ ಹುಟ್ಟುಹಾಕುವಲ್ಲೂ ಯಶಸ್ವಿಯಾಗಿ ಸರಕಾರವನ್ನು ನಡುಗಿಸಿದ್ದವು. ಪೇಸಿಎಂ ಅಭಿಯಾನದಂಥವುಗಳು ಸಹ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದವು. ಆದರೆ ಸಾಂಪ್ರದಾಯಿಕ ಅಲ್ಪ ಸಂಖ್ಯಾತ ಮತಗಳನ್ನು ಗಿಟ್ಟಿಗೊಳಿಸಿಕೊಳ್ಳುವ ಭರ
ದಲ್ಲಿ, ಆ ಸಮುದಾಯದ ಮತಗಳು ಜೆಡಿಎಸ್, ಎಸ್‌ಡಿಪಿಐನತ್ತ ಹೋಗದಂತೆ ತಡೆಯುವ ತಂತ್ರದ ಭಾಗವಾಗಿ ಬಜರಂಗದಳಂಥ ಕಟ್ಟಾ ಹಿಂದುತ್ವದ ವಿಚಾರದ ಅಡಿಪಾಯಕ್ಕೆ ಕೈ ಹಾಕಲು ಹೋಗಿ ತಾನೇ ಕೈ ಕಟ್ಟಿಸಿಕೊಂಡಂತಿದೆ.

ಇದರೊಂದಿಗೆ ಶೇ.೭೫ ಮೀಸಲು ನೀಡಿಕೆಯ ಸಿದ್ದರಾಮಯ್ಯ ಹೇಳಿಕೆ, ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದ ಖರ್ಗೆ ಭಾಷಣಗಳೂ ಸಾಕಷ್ಟು ಎಡವಟ್ಟು ಮಾಡಿದಂತೆ ಗೋಚರಿಸುತ್ತಿದೆ. ಅಲ್ಲದಿದ್ದರೆ ಬಜರಂಗದಳದಂಥ ಸಂಘಟನೆಯ ನಿಷೇಧ ಕೇಂದ್ರ ಸರಕಾರವನ್ನು ಅವಲಂಬಿಸಿದೆ, ಕೇಂದ್ರದಲ್ಲಿ ಬಿಜೆಪಿ ಅಽಕಾರ ದಲ್ಲಿರು ವವರೆಗೆ ಇದು ಸಾಧ್ಯವಿಲ್ಲ ಎಂಬುದು ಕಾಂಗ್ರೆಸಿ ಗರಿಗೆ ತಿಳಿಯದ ವಿಚಾರವೇ?