ಚೀನಾದಲ್ಲಿ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗಿದ್ದು, ನೆರೆಯ ಭಾರತಕ್ಕೂ ಆತಂಕ ಉಂಟು ಮಾಡಿದೆ. ಭಾನುವಾರ ಒಂದೇ ದಿನ ದೇಶ
ದಲ್ಲಿ 2183 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ.90ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿಜಕ್ಕೂ ಇದು ಮತ್ತೆ ಆತಂಕ ಹುಟ್ಟಿಸುವ ಸಂಗತಿ. ಕೋವಿಡ್ ಸಾಂಕ್ರಾಮಿಕದ ಅಬ್ಬರ ತಗ್ಗಿದ್ದರಿಂದ ದೇಶಾದ್ಯಂತ ಜಾರಿಗೆ ತರಲಾಗಿದ್ದ ಹಲವು ನಿಯಮಗಳನ್ನು ಬಹುತೇಕ ಭಾಗಗಳಲ್ಲಿ ಸಡಿಲಗೊಳಿಸಲಾಗಿದೆ. ಆದರೆ ಕೋವಿಡ್‌ನ ಭಯ ಪೂರ್ತಿಯಾಗಿ ನಿವಾರಣೆ ಆಗಿಲ್ಲ ಎಂಬುದು ಭಾನುವಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ. ಕೆಲವು ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕದ ನಾಲ್ಕನೆಯ ಹಾಗೂ ಐದನೆಯ ಅಲೆಗಳು ಕಾಣಿಸಿಕೊಂಡಿವೆ. ಚೀನಾದ ಶಾಂಘೈ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ.
ಕರೋನಾ ವೈರಾಣುವಿನ ಹೊಸ ತಳಿಗಳು ತಲೆ ಎತ್ತುವ ಸಾಧ್ಯತೆ ಇದೆ. ಕರೋನಾದ ಇನ್ನೊಂದು ರೂಪಾಂತರಿ ತಳಿ ಎಕ್ಸ್ಇ ಹಲವೆಡೆ ಕಾಣಿಸಿಕೊಂಡಿದೆ. ಈ ರೂಪಾಂತರಿಯ ವಿರುದ್ಧ ಮತ್ತು ಮುಂದೆ ಬರಬಹುದಾದ ಯಾವುದೇ ರೂಪಾಂತರಿಯ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಅಗತ್ಯ ಇದೆ. ಇದೀಗ ರಾಜ್ಯದಲ್ಲೂ ಯಾರೊಬ್ಬರೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಎಲ್ಲರ ಮುಖದ ಮೇಲಿನ ಮಾಸ್ಕ್ ಮಾಯವಾಗಿದೆ. ಇದು ಮತ್ತೊಂದು ಲಾಕ್‌ಡನ್ ಮುನ್ನಚ್ಚರಿಕಿಯೇ ಎನ್ನಬಹುದು.
ಅದಕ್ಕೆ ಅವಕಾಶ ಮಾಡಿಕೊಡದೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್, ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕಿದೆ. ಅನೇಕರು ಎರಡು ಡೋಸ್ ಲಸಿಕೆ ಪಡೆದಿದ್ದೇವೆ ಎಂಬ ಮೊಂಡು ಧೈರ್ಯದಿಂದ ಕೋವಿಡ್ ನಿಯಮಗಳನ್ನು ಪಾಲಿಸು ತ್ತಿಲ್ಲ. ಎರಡನೆಯ ಡೋಸ್ ಪಡೆದ ನಂತರದ ನಾಲ್ಕರಿಂದ ಆರು ತಿಂಗಳು ಆದ ಮೇಲೆ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಎಂಬುದು ಅಧ್ಯಯನವೊಂದು ತಿಳಿಸಿದೆ. ದೇಶಾದ್ಯಂತ ದೊಡ್ಡ ಸಂಖ್ಯೆ ಯ ಜನರು ಎರಡನೆಯ ಡೋಸ್ ಪಡೆದಿದ್ದು ಆರು ತಿಂಗಳುಗಳ ಹಿಂದೆ.
ಹೀಗಾಗಿ, ಎರಡನೇ ಡೋಸ್‌ನ ರೋಗ ನಿರೋಧಕ ಶಕ್ತಿ ಇರಲು ಸಾಧ್ಯ ಇಲ್ಲ. ಆದ್ದರಿಂದ ಈಗ ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂದಾಗ ಬೇಕಿದೆ. ಆದರೆ, ಮುನ್ನೆಚ್ಚರಿಕೆ ಡೋಡ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿದ್ದು, ದುಡ್ಡು ಕೊಟ್ಟು ಡೋಸ್ ಪಡೆಯ ಬೇಕಾಗಿದೆ. ಸರಕಾರ ಆದಷ್ಟು ಬೇಗ ಎಲ್ಲ ವರ್ಗದ ಜನರಿಗೂ ಮುನ್ನಚ್ಚರಿಕೆ ಡೋಸ್ ಸಿಗುವಂತೆ ಮಾಡಬೇಕಿದೆ.