Saturday, 14th December 2024

ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಸಿಲಿಂಡರ್ ಬೆಲೆ ಹೆಚ್ಚಳ ಏಕೆ?

ಸೌದೆ ಅಡುಗೆಯ ಹೊಗೆಯಿಂದ ಮಹಿಳೆಯರು ಆರೋಗ್ಯ ಕೆಡಿಸಿಕೊಳ್ಳಬಾರದೆಂದು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಉಜ್ವಲ ಯೋಜನೆಯಡಿ ಸಿಲಿಂಡರ್ ಮತ್ತು ಒಲೆಗಳನ್ನು ವಿತರಣೆ ಮಾಡಿದೆ. ಆದರೆ ಕಳೆದೊಂದು ವರ್ಷದಿಂದ ಸಿಲಿಂಡರ್ ಬೆಲೆ ಏರುಗತ್ತಿಯಲ್ಲಿದ್ದು, ಇದರಿಂದ ಗ್ರಾಮೀಣ ಜನರು ಸಿಲಿಂಡರ್ ಬಳಕೆಯಿಂದ ದೂರವಾಗುತ್ತಿದ್ದಾರೆ.

ಕೂಲಿ ಮಾಡುವ ಜನರು ರೂ.೧,೧೫೦ ಕೊಟ್ಟು ಸಿಲಿಂಡರ್ ಖರೀದಿಸುವ ಸಾಮರ್ಥ್ಯವಿಲ್ಲದಿರುವುದರಿಂದ ಮತ್ತೆ ಹಳೆ ಪದ್ಧತಿಯ ಅಡುಗೆ ಮಾಡಲು ಆರಂಭಿಸುವ ಸಾಧ್ಯತೆ ಇದೆ. ಕಳೆದ ೧೨ ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ೬ನೇ ಬಾರಿ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯ ರಿಗೆ ಕೆಂದ್ರ ಸರಕಾರವು ಮೇಲಿಂದ ಮೇಲೆ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ.೭೫ರಷ್ಟು ಕಡಿತ ಮಾಡಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಚಾ ತೈಲದ ದರ ಇಳಿಕೆಯಾಗಿದೆ.

ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ ಬೆಲೆ ಹೆಚ್ಚಳ ಮಾಡಲಾಗಿದೆ. ಬಡವರಿಗೆ ‘ಉಜ್ವಲ’ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿzರೆ. ಆದರೆ ಉಜ್ವಲ ಯೋಜನೆ ಫಲಾನುಭವಿಗಳು ಕೂಡ ಮಾರುಕಟ್ಟೆ ದರ ಕೊಟ್ಟು ಸಿಲಿಂಡರ್ ಖರೀದಿಸಬೇಕಾಗಿದ್ದು, ಇದು ಹೊರೆಯಾಗಿ ಪರಿಣಮಿಸಿ ದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನೂ ?೩೫೨ ಏರಿಕೆ ಮಾಡಲಾಗಿದ್ದು, ಈ ದರ ಹೆಚ್ಚಳದ ಹೊರೆಯನ್ನು ಹೋಟೆಲ, ಮತ್ತಿತರ ಉದ್ಯಮ ಗಳ ಮಾಲೀಕರು ಜನರಿಗೆ ವರ್ಗಾಯಿಸುತ್ತಿದ್ದಾರೆ. ಇದರಿಂದಾಗಿ ಸಹಜ ವಾಗಿಯೇ ಜನರು ಜೇಬು ಖಾಲಿಯಾಗುತ್ತಿದೆ. ಒಂದೆಡೆ ನಿರುದ್ಯೋಗ ಸಮಸ್ಯೆ, ಇನ್ನೊಂದೆಡೆ ವ್ಯಾಪಾರ ಇಲ್ಲದೆ ಜನ ಕಂಗಾಲಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಜನರ ಅತ್ಯಗತ್ಯ ವಸ್ತುವಾದ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿರುವುದು ಸರಿಯಲ್ಲ. ಆದ್ದರಿಂದ ಕೇಂದ್ರ ಸರಕಾರ ಕೂಡಲೇ
ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಬೇಕು. ಆ ಮೂಲಕ ಬಡವರ, ಮಧ್ಯಮ ವರ್ಗದವರ ಜೀವನ ಸುಲಭವಾಗುವಂತೆ ಮಾಡಬೇಕು.