Sunday, 15th December 2024

ಅಕ್ಕಿ ಬದಲು ಹಣ: ಸ್ವಾಗತಾರ್ಹ ನಿರ್ಣಯ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚು ವರಿಯಾಗಿ ನೀಡಬೇಕಾದ ೫ ಕೆ.ಜಿ. ಅಕ್ಕಿಯನ್ನು ಹೊಂದಿಸಲು ಸರಕಾರಕ್ಕೆ ಸದ್ಯಕ್ಕೆ ಸಾಧ್ಯ ವಾಗದೇ ಇರುವುದರಿಂದ ಅದಕ್ಕೆ ಬದಲಾಗಿ ಅಕ್ಕಿಯ ದರ ಕೆ.ಜಿಗೆ ೩೪ ರು.ಗಳಂತೆ ೧೭೦ ರು. ಗಳನ್ನು ಪ್ರತಿ -ಲಾನುಭವಿ ಖಾತೆಗೆ ಜಮೆ ಮಾಡಲು ಸರಕಾರ ತೀರ್ಮಾನಿಸಿ ರುವುದು ಸ್ವಾಗತಾರ್ಹ.

ಕೇಂದ್ರದಿಂದ ೫ ಕೆ.ಜಿ. ಅಕ್ಕಿ ಸಿಗುತ್ತದೆ. ಇನ್ನು ಉಳಿದ ೫ ಕೆ.ಜಿಗೆ ಪರ್ಯಾಯವಾಗಿ ಹಣ ಕೊಟ್ಟರೆ, ಜನರು ತಮಗೆ ಬೇಕಾಗುವ ಧಾನ್ಯ, ತರಕಾರಿ ಸೇರಿದಂತೆ ಮತ್ತಿತರ ಅಡುಗೆಗೆ ಬೇಕಾದ ಪದಾರ್ಥಗಳನ್ನು ಖರೀದಿಸಲು ಈ ಹಣ ಖಂಡಿತವಾಗಿಯೂ ಸಹಾಯ ವಾಗುತ್ತದೆ. ಅಕ್ಕಿ ವಿತರಣೆಗೆ ವಿಳಂಬವಾಗುತ್ತಿದ್ದಂತೆ ತಕರಾರು ತೆಗೆದಿದ್ದ ಪ್ರತಿಪಕ್ಷಗಳು, ‘ಅಕ್ಕಿ ಕೊಡುವುದಿಲ್ಲವಾದರೆ ಹಣ ಕೊಡಿ’ ಎಂದು ಆಗ್ರಹಿಸಿದ್ದವು.

ಈಗ ಅಕ್ಕಿ ಬದಲು ಹಣ ಕೊಡಲು ಸರಕಾರ ಒಪ್ಪಿದೆ. ಆದರೆ ೧೦ ಕೆ.ಜಿ. ಅಕ್ಕಿಯನ್ನೇ ಕೊಡಿ ಎಂದು ಅವು ಮತ್ತೆ ತಕರಾರು ತೆಗೆಯುತ್ತಿವೆ. ಅಷ್ಟಕ್ಕೂ ರಾಜ್ಯದಲ್ಲಿ ಅನೇಕ ಕುಟುಂಬ ಗಳು ಈಗ ಪಡೆಯುತ್ತಿರುವ ಐದು ಕೆ.ಜಿ ಅಕ್ಕಿಯನ್ನೂ ತಾವು ಬಳಸದೆ ಪ್ರತಿ ಕೆ.ಜಿಗೆ ೧೦ ರುಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುವುದು, ಅಕ್ಕಿ ಖರೀದಿಸಿ ದವರು ಪುನಃ ಸರಕಾರಕ್ಕೆ ಕೆ.ಜಿ.ಗೆ ೩೪ ರುಪಾಯಿಯಂತೆ ಮಾರಾಟ ಮಾಡುವುದು ಗುಟ್ಟಾಗಿ ಉಳಿದಿಲ್ಲ.

Read E-Paper click here

ಈ ಪ್ರಕ್ರಿಯೆಯಲ್ಲಿ ಪಡಿತರದಾರರಿಂದ ಅಕ್ಕಿ ಖರೀದಿಸಿ ಸರಕಾರಕ್ಕೆ ಮಾರುವ ಮಧ್ಯಸ್ಥಿಕೆದಾರನಿಗೆ ವಿನಾಕಾರಣ ೨೪ ರು. ಕೊಡು ವಂತಾಗಿತ್ತು. ಈಗ ಮಧ್ಯಸ್ಥಿಕೆದಾರನಿಗೆ ಕೊಡುವ ಹಣವನ್ನೂ ಸೇರಿಸಿ ಒಟ್ಟು ೩೪ ರುಪಾಯಿಯನ್ನು ನೇರವಾಗಿ ಫಲಾನುಭವಿ ಗಳ ಖಾತೆಗೇ ಜಮೆ ಮಾಡುವುದು ತುಂಬಾ ಒಳ್ಳೆಯ ನಿರ್ಧಾರ. ಇಲ್ಲಿ ಪಡಿತರದಾರರಿಗೆ ಆಗುತ್ತಿದ್ದ ವಂಚನೆಯನ್ನೂ ತಡೆಗಟ್ಟಿ ದಂತಾಗಿದೆ, ಕಾಳಸಂತೆಗೂ ಕಡಿವಾಣ ಹಾಕಿದಂತಾಗಿದೆ. ನಿಜಕ್ಕೂ ಈ ಸಲಹೆಯನ್ನು ಕೊಟ್ಟಿರುವ ಪ್ರತಿಪಕ್ಷಗಳ ನಾಯಕರು ಅಭಿನಂದನಾರ್ಹರು. ಆದರೆ, ಇದೀಗ ಮತ್ತೆ ಸುಖಾಸುಮ್ಮನೆ ವಿರೋಧ ಮಾಡುತ್ತಿದ್ದಾರೆ. ಜನರೇ ಇದನ್ನು ಒಪ್ಪಿ ಕೊಂಡ ಮೇಲೆ ಪ್ರತಿಪಕ್ಷಗಳು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ.