Saturday, 14th December 2024

ಸಂಶೋಧನೆಗೆ ಪ್ರೋತ್ಸಾಹ ಹೆಚ್ಚಿಸಿ

ವಿಶ್ವವಿದ್ಯಾಲಯಗಳು ನ್ಯಾಕ್ ಶ್ರೇಯಾಂಕ ಗಳಿಸುವಲ್ಲಿ ಪೈಪೋಟಿಗಿಳಿಯುತ್ತಿವೆ. ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸು ವುದು, ವಿದ್ಯಾರ್ಥಿಗಳನ್ನು ಆ ಕೋರ್ಸ್‌ಗಳತ್ತ ಸೆಳೆಯುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊತ್ತಿವೆ. ಆದರೆ ನ್ಯಾಕ್ ಶ್ರೇಯಾಂಕ ಗಳಿಸುವುದು ಮುಖ್ಯವಾಗಿ ವಿಶ್ವವಿದ್ಯಾಲಯದ ಸಂಶೋಧನೆಗಳಿಂದ ಎಂಬುದನ್ನು ಮರೆತಂತಿದೆ.

ಯಾವುದೇ ಒಂದು ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು ಬರುವುದು ಅಲ್ಲಿ ನಡೆಯುವ ಸಂಶೋಧನೆಗಳು ಹಾಗೂ ಸಂಶೋಧಕ ರಿಂದ. ಆದರೆ, ಇತ್ತೀಚೆಗೆ ಸಂಶೋಧನಾ ಕ್ಷೇತ್ರಕ್ಕೆ ಬರುವವವರ ಸಂಖ್ಯೆ ಕಡಿಮೆಯಾಗಿದೆ. ಗುಣಮಟ್ಟದ ಸಂಶೋಧನಾ ಪ್ರಬಂಧ ಗಳು ಮಂಡನೆಯಾಗುತ್ತಿಲ್ಲ. ಐಐಎಂ, ಐಐಎಸ್ ಸಿಗಳಿಗೆ ನೀಡುವ ಪ್ರಾಶಸ್ತ್ಯ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ  ಸಿಗುತ್ತಿಲ್ಲ.

ವಿಶ್ವವಿದ್ಯಾಲಯಗಳ ಸಂಶೋಧನೆಗಳಿಗೆ ಸರಕಾರದ ಪ್ರೋತ್ಸಾಹ ಕಡಿಮೆಯಾಗಿದೆ. ಹೀಗಾಗಿಯೇ ಸಂಶೋಧಕರು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲೂ ಜಾತಿ ಆಧಾರಿತವಾಗಿ ಫೆಲೋಶಿಪ್ ನೀಡುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾರ್ಥಿಗಳಿಗೆ ಮಾಸಿಕವಾಗಿ ೨೫-೩೦ ಸಾವಿರ ರುಪಾಯಿ ನೀಡಿದರೆ (೩-೫ ವರ್ಷ), ಒಬಿಸಿ ವರ್ಗದವರಿಗೆ ಕೇವಲ ೧೦ ಸಾವಿರ ರು. (೨ ವರ್ಷ ಮಾತ್ರ) ನೀಡಲಾಗುತ್ತಿದೆ.

ಸಾಮಾನ್ಯ ವರ್ಗದವರಿಗಂತೂ ಯಾವುದೇ ಫೆಲೋಶಿಪ್ ಸಿಗುತ್ತಿಲ್ಲ. ಎಸ್‌ಸಿ, ಎಸ್‌ಟಿ ಸಂಶೋಧನಾರ್ಥಿಯು ಒಂದು
ಸಂಶೋಧನೆಗೆ ಎಷ್ಟು ಅಧ್ಯಯನ ಮಾಡಬೇಕೋ ಅಷ್ಟೇ ಅಧ್ಯಯನವನ್ನು ಇತರ ವಿದ್ಯಾರ್ಥಿಗಳೂ ಮಾಡಲೇಬೇಕು. ಆದರೆ ಫೆಲೋಶಿಪ್ ವಿಷಯದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಈ ಕಾರಣದಿಂದ ಸಂಶೋಧನೆ ಕ್ಷೇತ್ರಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಅಲ್ಲದೆ, ಗುಣಮಟ್ಟದ ಸಂಶೋಧನೆಯೂ ಸಾಧ್ಯವಾಗುತ್ತಿಲ್ಲ. ಸಂಶೋಧನೆ ಹಾಗೂ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡುವ ದೇಶ ಸೂಪರ್ ಪವರ್ ಆಗಿವೆ. ಜಪಾನ್, ಚೀನಾ ದೇಶಗಳು ಕಡಿಮೆ ಸಮಯದಲ್ಲಿ ಬೆಳೆಯಲು ‘ಆರ್ ಆಂಡ್ ಡಿ’ಗೆ ನೀಡಿದ ಆದ್ಯತೆಯೇ ಕಾರಣ ಎಂಬುದನ್ನು ಸರಕಾರ ಮನಗಾಣಬೇಕಿದೆ. ವಿಶ್ವವಿದ್ಯಾಲಯ ಹಾಗೂ ಯುಜಿಸಿ ಕೂಡ ಈ ಬಗ್ಗೆ ಗಮನ ಹರಿಸಿ
ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಬೇಕಿದೆ.